Belagavi

ಭಾಗ್ಯಲಕ್ಷಿö್ಮ ಬಾಂಡ್ ವಿತರಿಸಿದ ಶಾಸಕ ಅನಿಲ ಬೆನಕೆ


ಬೆಳಗಾವಿ: ರಾಜ್ಯ ಸರ್ಕಾರದ ಮಹತ್ವದ ಯೋಜನೆಯಾದ ಭಾಗ್ಯಲಕ್ಷಿö್ಮ ಯೋಜನೆ ಜನಪ್ರಿಯತೆ ಹೊಂದಿದೆ. ಈ ಯೋಜನೆಯ ಲಾಭವನ್ನು ಹೆಣ್ಣು ಮಕ್ಕಳಿಗೆ ಸಿಗಬೇಕು ಎಂದು ಶಾಸಕ ಅನಿಲ ಬನೆಕೆ ಅವರು ತಿಳಿಸಿದರು.
ಬುಧವಾರ ಮಹಾನಗರ ಪಾಲಿಕೆಯ ತಮ್ಮ ಕಚೇರಿಯಲ್ಲಿ ಭಾಗ್ಯಲಕ್ಷಿö್ಮ ಬಾಂಡ್ ವಿತರಣೆ ಮಾಡದಿದ ಬಳಿಕ ಮಾತನಾಡಿದ ಅವರು, ಹೆಣ್ಣುಮಕ್ಕಳಿಗೆ ೧೮ ವರ್ಷ ತುಂಬಿದ ಬಳಿಕ ಅವರಿಗೆ ೧ ಲಕ್ಷ ರೂಪಾಯಿ ರಾಜ್ಯ ಸರ್ಕಾರ ನೀಡುವ ಯೋಜನೆ ಇದಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಬೇಟಿ ಬಚಾವೋ ಬೇಟಿ ಪಡಾವೋ ಎಂಬ ಯೋಜನೆ ಜಾರಿಗೆ ತಂದಿದ್ದು, ಪ್ರತಿಯೊಂದು ಹೆಣ್ಣು ಮಕ್ಕಳಿಗೂ ಶಿಕ್ಷಣ ಸಿಗಬೇಕು. ಹೆಣ್ಣುಮಕ್ಕಳು ಶಿಕ್ಷಣ ಪಡೆದುಕೊಂಡರೆ ಅವರು ಎಲ್ಲಾ ಕ್ಷೇತ್ರದಲ್ಲಿ ಹೆಸರು ಮಾಡಬಹುದು ಎಂದು ತಿಳಿಸಿದರು.
ಇತ್ತೀಚೆಗೆ ನಡೆದ ಓಲಂಪಿಕ್ ನಲ್ಲಿ ಭಾರತ ಪರ ಹೆಣ್ಣು ಮಕ್ಕಳು ಹೆಚ್ಚು ಪದಕಗಳನ್ನು ಗೆಲ್ಲುವ ಮೂಲಕ ಸಾಧನೆ ಮಾಡಿದ್ದಾರೆ. ಹಾಗಾಗಿ ಹೆಣ್ಣು ಮಕ್ಕಳನ್ನು ಶಿಕ್ಷಣ ನೀಡಿ, ಬೆಳೆಸಬೇಕು. ಭಾಗ್ಯಲಕ್ಷಿö್ಮ ಯೋಜನೆಯು ಒಂದು ಕುಟುಂಬದ ಇಬ್ಬರು ಹೆಣ್ಣು ಮಕ್ಕಳಿಗೆ ಅನ್ವಯವಾಗುತ್ತದೆ ಎಂದು ಶಾಸಕ ಅನಿಲ ಬೆನಕೆ ಅವರು ತಿಳಿಸಿದರು.


Leave a Reply