Koppal

ತಳಕಲ್: ಬಾಕಿ ಸೀಟುಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ


ತಳಕಲ್: ಬಾಕಿ ಸೀಟುಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ
ಕೊಪ್ಪಳ ಜ.08: ತಳಕಲ್‌ನ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಬಾಕಿ ಉಳಿದ ಸೀಟುಗಳಿಗೆ 2020-21ನೇ ಸಾಲಿನ ಪ್ರವೇಶಕ್ಕಾಗಿ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಸಂಸ್ಥೆಯಲ್ಲಿ ಬಹು ಬೇಡಿಕೆ ಇರುವ ವಿವಿಧ ವೃತ್ತಿಗಳಿಗೆ ಲಭ್ಯವಿರುವ ಸರಕಾರದ ವೃತ್ತಿ ಮತ್ತು ಸೀಟುಗಳಲ್ಲಿ ವಿದ್ಯುನ್ಮಾನ ದುರಸ್ತಿಗಾರ-04, ಜೋಡಣೆಗಾರ-02 ಸೀಟುಗಳು, ಪಿ.ಪಿ.ಪಿ ಅಡಿಯಲ್ಲಿ ವಿದ್ಯುನ್ಮಾನ ದುರಸ್ತಿಗಾರ-04, ಜೋಡಣೆಗಾರ-04 ಸೀಟುಗಳು ಲಭ್ಯವಿದ್ದು, ಎಸ್.ಎಸ್.ಎಲ್.ಸಿ ಉತ್ತೀರ್ಣರಾದ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಹಾಗೂ ಪೂರಕ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಪ್ರವೇಶ ಪಡೆಯಬಹುದಾಗಿದೆ. ಆಸಕ್ತರು ಜನವರಿ.15 ರೊಳಗಾಗಿ ಕೈಗಾರಿಕಾ ತರಬೇತಿ ಸಂಸ್ಥೆ, ತಳಕಲ್‌ಗೆ ಭೇಟಿ ನೀಡಿ ಮೂಲ ದಾಖಲಾತಿ ಪತ್ರಗಳನ್ನು ಪರಿಶೀಲಿಸಿಕೊಂಡು ಅರ್ಜಿ ಸಲ್ಲಿಸುವುದರ ಮೂಲಕ ಪ್ರವೇಶ ಪಡೆಯಬಹುದಾಗಿದೆ ಎಂದು ಸಂಸ್ಥೆಯ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply