Ballary

2ವರ್ಷ 9ತಿಂಗಳ ಹಿಂದಿನ ಕೊಲೆ ಪ್ರಕರಣವನ್ನುಆರೋಪಿಗಳನ್ನು ಬಂಧಿಸಿದ ಪೊಲೀಸರು


ಕುರಗೋಡ:ಕುರುಗೋಡು ಕಲ್ಲುಕಂಭ ಗ್ರಾಮದಿಂದ ಮಾರುತಿ ಕ್ಯಾಂಪ್ ಗೆ ಹೋಗುವ ರಸ್ತೆಯಲ್ಲಿ ಗುರ್ತಿ ಪುಲ್ಲಯ್ಯ ರವರ ಹೊಲದ ಪಕ್ಕ ಬಿಳುವಲದಲ್ಲಿ ಯಾರೋ ದುಷ್ಕರ್ಮಿಗಳು ಯಾವುದೇ ಉದ್ದೇಶದಿಂದ ಅಪರಚಿತ ಗಂಡಸನ್ನು ಕೊಲೆ ಮಾಡಿ ಮೃತದೇಹವನ್ನು ಬೀಳು ಹೊಲದ ಮಣ್ಣನ್ನೇ ಹೂತಿಟ್ಟಿದ್ದು 2ಕಾಲುಗಳು
ಮಾತ್ರ ಹೊರಗಡೆ ಕಾಣುತ್ತಿದ್ದು ಸ್ಥಳದ ಹತ್ತಿರ ಬೇಲಿಯಲ್ಲಿ 2ಕಲ್ಲುಗಳು ಬಿಸಾಕಿದ್ದು ಆ ಕಲ್ಲುಗಳಿಗೆ ರಕ್ತ ಹತ್ತಿರುತ್ತದೆ ಮೃತದೇಹದ ಬಲಗೈಗೆ ಮೇಲೆ ಬಸಮ್ಮ ಅದರ ಪಕ್ಕದಲ್ಲಿ ಓಂ ಎಂದು ಅಚ್ಚೆಯ ಗುರುತು ಇದ್ದು
ಕೊಲೆ ಮಾಡಿದ ಆಪಾದಿತರನ್ನು ಪತ್ತೆಮಾಡಲು ಗೊರ್ತಿ ಪುಲ್ಲಯ್ಯ ರವರು ನೀಡಿದ ದೂರಿನ ಮೇರೆಗೆ
ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡುತನಿಖೆ ಕೈಗೊಂಡಿರುತ್ತದೆ ನಂತರ ತನಿಖೆ ವೇಳೆಯಲ್ಲಿ ಮೃತನ ಬೆರಳು ಮುದ್ರೆ ಗಳಿಂದ ಮೃತನ ಹೆಸರು ಗವಿಸಿದ್ದಪ್ಪ ತಂದೆ ಕರಿಯಪ್ಪ 29ವರ್ಷ ವಾಸ ವಿಠಲಾಪುರ ಗ್ರಾಮ ಸಂಡೂರು ತಾಲ್ಲೂಕು ಎಂದು ದೃಢಪಟ್ಟಿದ್ದು
2ವರ್ಷ 9ತಿಂಗಳ ಹಿಂದಿನ ಕೊಲೆ ಪ್ರಕರಣ ಭೇದಿಸಲು ಬಳ್ಳಾರಿ ಎಸ್. ಪಿ.ಸೈದುಲ್ಲಾ ಅದಾವ ತ್ತ್ .ಲಾವಣ್ಯ ಅಡಿಷನಲ್ ಎಸ್.ಪಿ…ಎಂ ಜಿ ಸತ್ಯನಾರಾಯಣ ರಾವ್ ಡಿವೈಎಸ್ಪಿ ಬಳ್ಳಾರಿ …ಚಂದನ್ ಗೋಪಾಲ್ ಸಿಪಿಐ ಕುರುಗೋಡು ವೃತ್ತ PSI ಮೌನೇಶ್ ರಾಠೋಡ್. ಶಾಂತಮೂರ್ತಿ .. HCಗಳಾದ ಶ್ರೀನಿವಾಸ್ ದೇವೆಂದ್ರಪ್ಪ ನಾಗರಾಜ್ ಕರಿಬಸಪ್ಪ ಪಿಸಿಗಳಾದ ಮಹೇಶ್ ಬಸವನಗೌಡ ಮಂಜುನಾಥ ಶರಣಪ್ಪ ರೇವಣ್ಣ ರವರ ಗಳನ್ನು ಒಳಗೊಂಡ ವಿಶೇಷ ತಂಡ ರಚಿಸಿ ಪತ್ತೆಕಾರ್ಯ ಚುರುಕುಗೊಳಿಸಿದ್ದು ಚಾಣಾಕ್ಷತನದಿಂದ ಕಾರ್ಯನಿರ್ವಹಿಸಿ ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ

ಕೊಲೆ ಮಾಡಿರುವ ಆರೋಪಿಗಳ ಹೆಸರು
ರಾಮು. ರವಿ. ಕಟ್ಟೆಪ್ಪ. ಗಣೇಶ. ಮಂಜುನಾಥ. ವೆಂಕಪ್ಪ ಇವರು ಕೊಲೆ ಆರೋಪಿಗಳಾಗಿರುತ್ತಾರೆ

ವಿಚಾರಣೆ ವೇಳೆ ಆರೋಪಿತರೆಲ್ಲರೂ ಸೇರಿ 2ವರ್ಷ 9ತಿಂಗಳ ಹಿಂದೆ ಮೃತಪಟ್ಟ ಗವಿಸಿದ್ದಪ್ಪ ತಂದೆ ಕರಿಯಪ್ಪ 19 ವರ್ಷ ಅವರೊಂದಿಗೆ ಸಣ್ಣಪುಟ್ಟ ಕಳವು ಮಾಡಿ ಬಂದಂತಹಹಣವನ್ನು ಹಂಚಿಕೊಳ್ಳುವ ವಿಚಾರದಲ್ಲಿ ಒಬ್ಬರಿಗೊಬ್ಬರು ಜಗಳ ಮಾಡಿಕೊಂಡು ಆ ಜಗಳದಲ್ಲಿ ಗವಿಸಿದ್ದಪ್ಪ ತಂದೆ ಕರಿಯಪ್ಪನನ್ನು ಕಲ್ಲುಗಳನ್ನು ಮತ್ತು ರಾಡಿನಿಂದ ಒಡೆದು ಕೊಲೆ ಮಾಡಿರುತ್ತೇವೆ ಎಂದು ಆರೋಪಿಗಳು ಒಪ್ಪಿಕೊಂಡಿದ್ದಾರೆ ಈ ಆರೋಪಿಗಳು ಈಗಾಗಲೇ ಗದಗ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಸಣ್ಣ ಪುಟ್ಟ ಕಳವು ಪ್ರಕಣದಲ್ಲಿ ಭಾಗಿಯಾಗಿದ್ದಾರೆ
ಆರೋಪಿಗಳನ್ನು ಪತ್ತೆ ಮಾಡಲು ಶ್ರಮಿಸಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರಿಗೆ ಮೇಲಿನ ಪೊಲೀಸ್ ಅಧಿಕಾರಿಗಳು ಶ್ಲಾಘಿಸಿ ಬಹುಮಾನವನ್ನು ಘೋಷಿಸಿದ್ದಾರೆ

(ಹನುಮೇಶ್ ಬಟಾರಿ)


Leave a Reply