Koppal

ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಶ್ರಮಿಸಿ -ಎಂ ಚನ್ನಬಸಪ್ಪ ಕ್ಷೇತ್ರಶಿಕ್ಷಣಾಧಿಕಾರಿಗಳು ಕುಷ್ಟಗಿ


ಕುಷ್ಟಗಿ: ಕೋವಿಡ್ 19 ಸಾಂಕ್ರಾಮಿಕ ರೋಗವು ಹಲವರನ್ನು ಹಲವು ರೀತಿಯಲ್ಲಿ ಬಾಧಿಸಿದೆ ಶಿಕ್ಷಣ ಕ್ಷೇತ್ರವು ಇದರಿಂದಾಗಿ ಸಾಕಷ್ಟು ಸವಾಲುಗಳನ್ನು ತಲ್ಲಣಗಳನ್ನು ಅನುಭವಿಸುತ್ತಿದೆ ಶಿಕ್ಷಣ ರಂಗವು ಎದುರಿಸುತ್ತಿರುವ ಸಂಕಷ್ಟ ಸವಾಲುಗಳಿಗೆ ಶಿಕ್ಷಕರು ಸಮರ್ಥವಾಗಿ ಶಿಕ್ಷಣವನ್ನು ನೀಡುವುದರ ಮೂಲಕ ಗುಣಾತ್ಮಕತೆಯನ್ನು ಕಾಯ್ದುಕೊಳ್ಳುವ ಬಹುದೊಡ್ಡ ಹೊಣೆಗಾರಿಕೆ ನಮ್ಮ ಶಿಕ್ಷಕರ ಮೇಲಿದೆ
ಇಂದು ಬಿಆರ್ಸಿ ಕುಷ್ಟಗಿಯಲ್ಲಿ ಅಗಸ್ತ್ಯ ಫೌಂಡೇಶನ್ ಅವರು ನೀಡಿರುವ ವಿಜ್ಞಾನ ಮತ್ತು ಗಣಿತ ಕಲಿಕಾ ಸಾಮಗ್ರಿಗಳ ಕಿಟ್ಟುಗಳನ್ನು ಶಿಕ್ಷಕರಿಗೆ ವಿತರಿಸಿ ಮಾತನಾಡಿದರು ಈ ಸಂದರ್ಭದಲ್ಲಿ ಹಾಜರಿದ್ದ ಕ್ಷೇತ್ರ ಸಮನ್ವಯ ಅಧಿಕಾರಿ ಗಳಾದ ಶ್ರೀ ಶ್ರೀಶೈಲ ಸೋಮನಕಟ್ಟಿ ಅವರು ಮಾತನಾಡಿ ಅಗಸ್ತ್ಯ ಫೌಂಡೇಶನ್ ನವರು ನೀಡಿರುವ ವಿಜ್ಞಾನ ಮತ್ತು ಗಣಿತ ಕಲಿಕಾ ಸಾಮಗ್ರಿಗಳ ಕಿಟ್ಟುಗಳು ಉತ್ತಮ ಗುಣಮಟ್ಟದಿಂದ ಕೂಡಿದ್ದು ತರಗತಿಗಳು ಆರಂಭವಾದ ಮೇಲೆ ಶಿಕ್ಷಕರು ಅದನ್ನು ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡಿಕೊಂಡು ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಸಕ್ರಿಯ ರಾಗಲು ಕರೆನೀಡಿದರು.ನೋಡಲ್ ಬಿ ಆರ್ ಪಿ ಜೀವನಸಾಬ ವಾಲಿಕಾರ ಮಾತನಾಡಿ ಗಣಿತ ಮತ್ತು ವಿಜ್ಞಾನ ಗಳಂತಹ ಕಠಿಣ ವಿಷಯಗಳನ್ನು ಬೋಧಿಸಲು ಅಗಸ್ತ್ಯ ಫೌಂಡೇಶನ್ ಅವರು ನೀಡಿರುವ ಈ ಕಲಿಕಾ ಸಾಮಗ್ರಿಗಳು ಹೆಚ್ಚು ಉಪಯುಕ್ತವಾಗಿದ್ದು ವಿದ್ಯಾರ್ಥಿ ಮತ್ತು ಶಿಕ್ಷಕರ ಸ್ನೇಹಿ ಕಲಿಕಾ ಸಾಮಗ್ರಿಗಳಾಗಿ ಶಾಲೆಗಳಲ್ಲಿ ಬಹುಪಯೋಗಿ ಬೋಧನಾ ಕಾರ್ಯಕ್ಕೆ ನೆರವಾಗಲಿವೆ ಇಂಥ ಕಲಿಕಾ ಸಾಮಗ್ರಿಗಳನ್ನು ಶಿಕ್ಷಕರು ಹೆಚ್ಚು ಉಪಯೋಗಿಸುವುದರ ಮೂಲಕ ಸಂರಕ್ಷಿಸುವ ಹೊಣೆಗಾರಿಕೆಯನ್ನು ನಿಭಾಯಿಸಬೇಕಾಗಿದೆ ಎಂದರು.

ಕುಷ್ಟಗಿ ತಾಲೂಕಿನ ಆಯ್ದ 21 ಶಾಲೆಗಳ ವಿಜ್ಞಾನ ಮತ್ತು ಗಣಿತ ಶಿಕ್ಷಕರಿಗೆ ಅಗಸ್ತ್ಯ ಫೌಂಡೇಶನ್ ಅವರು ನೀಡಿರುವ ಗಣಿತ ಮತ್ತು ವಿಜ್ಞಾನ ಕಲಿಕಾ ಸಾಮಗ್ರಿಗಳ ಕಿಟ್ಟುಗಳನ್ನು ಶಿಕ್ಷಕರುಗಳಿಗೆ ವಿತರಿಸಲಾಯಿತು ಈ ಸಂದರ್ಭದಲ್ಲಿ ಬಿ ಆರ್ಪಿ ರವರ ಆದ ಶ್ರೀ ರಾಜಾಸಾಬ್ ನದಾಫ್ ಶ್ರೀ ಎಸ್ ಎಸ್ ತೆಮ್ಮಿನಾಳ , ಸಿಆರ್ಪಿ ಅವರಾದ ಶ್ರೀ ಬರಮಪ್ಪ ಪರಸಾಪುರ , ಶ್ರೀ ರಾಘವೇಂದ್ರ ಎಮ್ , ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಶ್ರೀ ಮಲ್ಲಪ್ಪ ಕುದುರಿ , ಶ್ರೀ ಅಲ್ತಾಫ್ ಹುಸೇನ್, ಶ್ರೀಮತಿ ಗಿರಿಜಾದೇವಿ ಎಚ್ ಹಾಗೂ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರು ಪಾಲ್ಗೊಂಡಿದ್ದರು.

ವರದಿ-ಶೇಖರ ಎಸ್ ಕನಸಾವಿ.


Leave a Reply