Koppal

ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ 4 ಆರೋಪಿಗಳನ್ನು ಬಂಧಿಸಿದ ಕುಷ್ಟಗಿ ಪೊಲೀಸರು.


ಕುಷ್ಟಗಿ: ಹೊರವಲಯದ ಅಮರ ಬಂಕ್ ಪೆಟ್ರೋಲ್ ಹತ್ತಿರ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ನಾಲ್ಕು ಜನ ಆರೋಪಿತರನ್ನು ಬಂಧಿಸಿ ವಿಚಾರಿಸಿದಾಗ ಅವರಿಂದ ಎರಡು ದ್ವಿಚಕ್ರ ವಾಹನ ,28 ಹಿತ್ತಾಳೆ ಗಂಟೆಗಳು,4 ಹಿತ್ತಾಳೆ ಸಮೇವು,2 ಹಿತ್ತಾಳಿ ಕಳಸ,1ಹಿತ್ತಾಳೆ ಪೂಜಾ ಕೊಡ,1 ದೇವರ ಬೆಳ್ಳಿ ಮುಖ,12000 ಸಾವಿರ ಹುಂಡಿ ಹಣ ಸೇರಿ ಒಟ್ಟು158000 ಬೆಲೆ ಬಾಳುವ ವಸ್ತುಗಳು,ಮತ್ತು 40ಸಾವಿರ ಬೆಲೆಯ ಎರಡು ಬೈಕ್ ಗಳು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ,ಎಂದು ಪೋಲಿಸರು ತಿಳಿಸಿದ್ದಾರೆ.

ಎಎಸ್ಐ ವೀರಪ್ಪ ನಾಯಕ ಹಾಗೂ ಸಿಬ್ಬಂದಿಯವರು ರಾತ್ರಿ ಗಸ್ತು ತಿರುಗುವ ಸಮಯದಲ್ಲಿ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.

ಈ ಕುರಿತು ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸಂದರ್ಭದಲ್ಲಿ ಡಿಎಸ್ಪಿ ರುದ್ರೇಶ ಉಜನಕೊಪ್ಪ,ಸಿಪಿಐ ನಿಂಗಪ್ಪ ರುದ್ರಪ್ಪಗೋಳ,ಪಿಎಸ್ಐ ಕೆ ತಿಮ್ಮಣ್ಣ, ಪಿಎಸ್ಐ ಮಾನಪ್ಪ ಸೇರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.

ವರದಿ-ಶೇಖರ್ ಎಸ್ ಕನಸಾವಿ.
ಕುಷ್ಟಗಿ.


Leave a Reply