Belagavi

ಶ್ರೀಮಾತಾ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆದ ನಾಗಪಂಚಮಿಯ ಪ್ರಯುಕ್ತ ಹಿಂದೂ-ಮುಸ್ಲಿA ಮಹಿಳೆಯರಿಂದ ಪೂಜೆ


ಬೈಲಹೊಂಗಲ ೧೩- ಪಟ್ಟಣದ ಶ್ರೀಮಾತಾ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಾಗಪಂಚಮಿಯ ಪ್ರಯುಕ್ತ ಗುರುವಾರ ನಾಗದೇವತೆ ಪೂಜೆ ನಡೆಯಿತು.
ವೇ.ಮೂ ಡಾ. ಮಹಾಂತಯ್ಯ ಶಾಸ್ತ್ರಿ ಮಾತನಾಡಿ, ಎಲ್ಲಾ ಯುಗಗಳಲ್ಲಿ ಕೂಡ ತನ್ನದೇ ಆದ ಮಹತ್ವವನ್ನು ಒಳಗೊಂಡ ಜಗತ್ತಿನ ಎಲ್ಲ ಜೀವಿಗಳ ಒಳಿತಿಗಾಗಿ ಶ್ರೇಯಸ್ಸಿಗಾಗಿ ಆರೋಗ್ಯ ಅಭಿವೃದ್ಧಿಗಾಗಿ ನಾಗದೇವತೆ ಆರಾಧನೆಯನ್ನು ಅನಾದಿ ಕಾಲದಿಂದಲೂ ಆಚರಿಸಿಕೊಂಡು ಬರಲಾಗುತ್ತಿದೆ. ಅದು ನಮ್ಮ ಅಖಂಡ ಹಿಂದೂ ಧರ್ಮ ಇಂತಹ ಸನಾತನ ಧರ್ಮ ಪರಂಪರೆಯನ್ನು ಒಳಗೊಂಡಿರುವAತಹ ಈ ಹಬ್ಬವನ್ನು ನಮ್ಮ ನಾಡಿನ ತುಂಬಾ ಎಲ್ಲಾ ಅಕ್ಕತಂಗಿಯರು ಅಣ್ಣತಮ್ಮಂದಿರು ಹಾಗೂ ಮನೆದೇವರನ್ನು ಮಾಡಿಕೊಂಡು ಪೂಜೆ ಮಾಡಿ ಬಂದಿರುವುದು ವಿಶೇಷವಾಗಿದೆ. ನಾಗಪಂಚಮಿ ಶ್ರಾವಣ ಮಾಸ ಶುದ್ಧ ಶುಕ್ಲಪಕ್ಷದ ಪಂಚಮಿಯAದು ನಾಗದೇವತೆಗೆ ವಿಮೋಚನೆಯಾದ ದಿನವೇ ನಾಗಪಂಚಮಿ ಎಂದು ಕರೆದರು. ಈ ಸಂದರ್ಭದಲ್ಲಿ ನಾಗನಿಗೆ ನೈವೇದ್ಯ ಮಾಡುವುದು ವಿಶೇಷ. ನಾಗಪಂಚಮಿಯ ವಿಶೇಷವಾಗಿ ಹೆಣ್ಣು ಮಕ್ಕಳ ಹಬ್ಬವಾಗಿರುವುದರಿಂದ ನಾಡಿನ ತುಂಬಾ ನಾಗದೇವತೆಗೆ ಹಾಲನ್ನು ಎರೆದರೆ ಮುಂದಿನ ಭವಿಷ್ಯ ಒಳ್ಳೆಯದಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ದುರ್ಗಾ ದೇವಸ್ಥಾನದಲ್ಲಿ ನಡೆದ ಸಾಂಪ್ರದಾಯಿಕ ನಾಗದೇವತೆಗೆ ಹಾಲು ಎರೆಯುವ ಕಾರ್ಯಕ್ರಮದಲ್ಲಿ ಹಿಂದೂ ಮುಸ್ಲಿಂ ಭಾವೈಕ್ಯತೆಯ ಸಾಂಕೇತಿಕವಾಗಿ ಮುಸ್ಲಿಂ ಧರ್ಮದ ಸುಮಾರು ಮಹಿಳೆಯರು ಪೂಜನೀಯ ಕಾರ್ಯದಲ್ಲಿ ಭಾಗಿಯಾಗಿರುವುದು ವಿಶೇಷವಾಗಿತ್ತು. ಪೂಜಾ ಕಾರ್ಯವನ್ನು ಪ್ರಶಾಂತ ಶಾಸ್ತ್ರಿಗಳು ನೆರವೇರಿಸಿದರು. ನೂರ್ಜನ್ ಬಿಜಾಪುರ, ಅಪ್ಸರ ನದಾಫ್, ಶಮೀಮ್ ನದಾಫ್, ರೀಜ್ವಾನ ನದಾಫ್, ನಾಗರತ್ನ ಮಾದರ್, ಪಲ್ಲವಿ ಹಂದರ, ಸುನಂದಾ ಚಿಕ್ಕಮಠ್, ಬಸವ ನಗರದ ಸಮಸ್ತ ಅಕ್ಕನಬಳಗ ಸದಸ್ಯೆಯರು ಇದ್ದರು.


Leave a Reply