Belagavi

ಸಿದ್ದೇಶ್ವರ ಸಾಹಿತ್ಯ ವೇದಿಕೆ ಉದ್ಘಾಟನೆ ಬೈಲಹೊಂಗಲದಲ್ಲಿ ಆಧು£ಕ ಸ್ವರಚಿತ ವಚನಗಳ ಕಲರವ ಕಾರ್ಯಕ್ರಮ


ಬೈಲಹೊಂಗಲ ೧೩: ಸ್ಥಳೀಯ ಶ್ರೀ ಸಿದ್ಧೇಶ್ವರ ಸಾಹಿತ್ಯ ವೇದಿಕೆ ತಾಲೂಕ ಘಟಕ ಉದ್ಘಾಟನೆ £ಮಿತ್ಯವಾಗಿ ಆಧು£ಕ ಸ್ವರಚಿತ ಕವನ ವಾಚನ ಸ್ಪರ್ಧೆ ಕೋವಿಡ್ ಕಾರಣ ಗೂಗಲ್ ಮೀಟ್ ಮೂಲಕ ನಡೆಸಲಾಯಿತು.
ಶಿವಮೊಗ್ಗ ದಾವಣಗೆರೆ ಅರಸೀಕೆರೆ ತುರುವೇಕೆರೆ ಮಂಗಳೂರು ಬಳ್ಳಾರಿ ಬೆಳಗಾವಿ ಹಾವೇರಿ ಮೈಸೂರು ಚಿತ್ರದುರ್ಗ ಬಾಗಲಕೋಟೆ ವಿಜಯಪುರ ಹೀಗೆ ರಾಜ್ಯಾದ್ಯಂತ ಹಲವಾರು ಜಿಲ್ಲೆಗಳಿಂದ ಐವತ್ತಕ್ಕೂ ಅಧಿಕ ಆಧು£ಕ ವಚನಕಾರರು ತಮ್ಮ ಸ್ವರಚಿತ ವಚನ ವಾಚಿಸಿದರು. ಸಭೆಯ ಸಾ£ಧ್ಯ ವಹಿಸಿದ್ದ ಮೂರುಸಾವಿರಮಠದ ಪ್ರಭು £Ãಲಕಂಠ ಸ್ವಾಮೀಜಿ ಮಾತನಾಡಿ ಸಿದ್ದೇಶ್ವರ ಹೆಸರೇ ಪವಿತ್ರವಾದದ್ದು ಜ್ಞಾನಯೋಗಿಗಳ ವೇದಿಕೆಯಿಂದ ಆಧು£ಕ ವಚನಗಳು ಮೂಡಿಬಂದದ್ದು ನಮ್ಮ ಬೈಲಹೊಂಗಲದ ಹೆಮ್ಮೆ ಎಂದು ಅಥಣೀಶರ ವಚನ ವಿವರಿಸಿದರು.
ವೇದಿಕೆಯನ್ನು ಆಧು£ಕ ವಚನ ಓದಿ ಉದ್ಘಾಟಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಂಗಲಾ ಮೆಟಗುಡ್ಡ ಮಾತನಾಡಿ ನಾಸ್ತಿಕ ಆಸ್ತಿಕ, ಸತ್ಯ-ಮಿಥ್ಯ, ಮೋಕ್ಷ ಮುಕ್ತಿ, ಭಕ್ತ ಭವಿ, ಉಚ್ಚ-£Ãಚ, ಜ್ಞಾನ ಅಜ್ಞಾನ ಎಲ್ಲಕ್ಕೂ ಕಾರಣವಾದ ಮನಸ್ಸಿನ ಗುಣಧರ್ಮವನ್ನು ಸಂಸ್ಕಾರದಿAದ ಶುಚಿಗೊಳಿಸ ಬೇಕೆಂದು ವಚನ ಸೋದಾಹರಣವಾಗಿ ವಿವರಿಸಿದರು. ಸಂಸ್ಥಾಪಕ ರಾಜ್ಯಾದಕ್ಷೆ ಗಿರಿಜಾ ಮಾಲಿಪಾಟೀಲ ಮಾತನಾಡಿ ಪೂಜ್ಯರ ಆಶೀರ್ವಾದದಿಂದ ನಮ್ಮ ವೇದಿಕೆಗಳು ರಾಜ್ಯಾದ್ಯಂತ ಉತ್ತಮ ಕೆಲಸ £ರ್ವಹಿಸುತ್ತವೆ ಸ್ರಜನಶೀಲ ಸಾಹಿತ್ಯದ ರಚನೆಯಿಂದ ರಾಜ್ಯಾದ್ಯಂತ ಎಲ್ಲಾ ಘಟಕಗಳು ಕ್ರಿಯಾಶೀಲವಾಗಿವೆ ಎಂದರು ಬೆಳಗಾವಿ ಜಿಲ್ಲಾ ಅಧ್ಯಕ್ಷ ಆಶಾ ಯಮಕನಮರಡಿ ಜಿಲ್ಲೆಯಾದ್ಯಂತ ತಾಲೂಕಗಳ ರಚನೆಯಾಗಿವೆ. ಪ್ರತಿಯೊಂದು ಘಟಕಗಳು ಸಾಹಿತ್ಯದ ವಿವಿಧ ಪ್ರಕಾರಗಳನ್ನು ಮುಂದುವರೆಸುತ್ತಾ ಉತ್ತಮ ಸೇವೆ ಸಲ್ಲಿಸುತ್ತಿವೆ. ವಚನ ಸಾಹಿತ್ಯದಲ್ಲಿ ಅಪಾರ ಕೃಷಿ ಮಾಡಿರುವ ಶರಣೆ ಪ್ರೇಮಕ್ಕ ಅಂಗಡಿಯವರು ಬೈಹೊಂಗಲ ತಾಲೂಕ ಘಟಕದ ಅಧ್ಯಕ್ಷರಾದದ್ದು ಖುಷಿ ತಂದಿದೆ ಎಂದರು
ಮಲ್ಲಿಕಾರ್ಜುನ ಕೋಳಿ ಉಪನ್ಯಾಸ £Ãಡಿ ವಚನ ಸಾಹಿತ್ಯ ವಿವಿಧ ಕಾಲಘಟ್ಟಗಳಲ್ಲಿ ನಡೆದು ಬಂದ ದಾರಿ ವಿವರಿಸಿ ಪರಮೇಶ್ವರ ಭಟ್, ಸಂಗಮೇಶ್ ಹಂಡಗಿ, ಜಚ£, ಮೂಜಗಂ,ಅಥಣೀಶ, ಮುಂಡರಗಿಯ ಸಿದ್ದಯ್ಯ ಪುರಾಣಿಕ, ಕಮಲ ಹಂಪನಾ ಅವರ ವಚನಗಳನ್ನು ವಿವರಿಸಿದರು. £ರ್ಣಾಯಕರಾದ ಶಿವಾನಂದ ಅರಭಾವಿ ಅವರು ಶಾಲಿ£ ಚಿ£ವಾರ ಬೆಳಗಾವಿ ಪ್ರಥಮ, ಸಂತೋಷಿ ಮಠಪತಿ ಬೀದರ್, ಮಹಾನಂದ ಪುರುಶೆಟ್ಟಿ ಬೆಳಗಾವಿ ದ್ವಿತೀಯ, ಸಂಧ್ಯಾ ನಾಗರಾಜ್ ಬೆಂಗಳೂರು, £ತ್ಯಶ್ರೀ ಶಿವಮೊಗ್ಗ ತೃತಿಯ ಸ್ಥಾನ ಪಡೆದ ಹಾಗೂ ಅಮಜವ್ವಾ ಭೋವಿ, ಸು£ತಾ ನಂದನ್ನವರ್ ಬೆಳಗಾವಿ, ವೈಷ್ಣವಿ ಪುರಾಣಿಕ ಉಡುಪಿ, ಬಾಗಲಿ ಮಹೇಶ್ ಮೈಸೂರು, ಆನಂದ ಜಲಾ ಶಿಕ್ಷಕಿ ತುರುವೇಕೆರೆ, ಭಾರತಿ ತೋರಗಲ್ ಬೆಳಗಾವಿ, ರೂಪಾ ಮಡ್ದಿಮಣಿ ಸಮಾಧಾನಕರ ಬಹುಮಾನ ಪಡೆದವರ ಹೆಸರು ಘೋಷಿಸಿದರು. ಮಡಿವಾಳಪ್ಪ ಸಂಗೊಳ್ಳಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಮಹೇಶ ಕೋಟಗಿ ಪತ್ರಕರ್ತ ಮಹಾಂತೇಶ ರಾಜಗೋಳಿ ಹಮೀದಾ ಬೇಗಂ ದೇಸಾಯಿ ಅನ್ನಪುರ್ಣಾ ಕನೋಜ ಮುಕ್ತಾಯಕ್ಕ ಅಜಗಣ್ಣ ಬಳಗ ಹಾಗೂ ಅನೇಕರು ಉಸ್ಥಿತರಿದ್ದರು. ಪ್ರೇಮಕ್ಕ ಅಂಗಡಿ ಪ್ರಾಸ್ತಾವಿಕ ನುಡಿ ದರು. ಶೋಭಾ ಕರಡಿಗುದ್ದಿ £ರೂಪಿಸಿದರು. ರಾಜೇಶ್ವರಿ ದ್ಯಾಮನಗೌಡರ ಪ್ರಾರ್ಥಿಸಿದರು. ಕುಸುಮಾ ಗದಗ ಸ್ವಾಗತಿಸಿದರು. ಅಮಜವ್ವಾ ಭೋವಿ ವಂದಿಸಿದರು.


Leave a Reply