Belagavi

ಲಿಂಗದಳ್ಳಿಯಲ್ಲಿ 19jAದ ಅಂಬಾದೇವಿ ದೇವಸ್ಥಾನ ಉದ್ಘಾಟನೆ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ


ಬೈಲಹೊಂಗಲ 13:- ತಾಲೂಕಿನ ಲಿಂಗದಳ್ಳಿ ಗ್ರಾಮದಲ್ಲಿ  ನೂತನವಾಗಿ ನಿರ್ಮಿಸಲಾದ ಶ್ರೀ ಅಂಬಾದೇವಿ ದೇವಸ್ಥಾನದ  ಉದ್ಘಾಟನೆ ಹಾಗೂ ಮೂರ್ತಿ ಪ್ರತಿಷ್ಠಾಪನೆ,  ಕಳಸಾರೋಹಣ  ಕಾರ್ಯಕ್ರಮ ಇದೇ ದಿ 19 ರಿಂದ 23 ರವರೆಗೆ ಜರುಗಲಿದೆ.

ಐದು ದಿನಗಳವರೆಗೆ ನಡೆಯುವ ಈ ಕಾರ್ಯಕ್ರಮದ ವಿವರ ಹೀಗಿದೆ ದಿ 9 ರಂದು ಮುಂಜಾನೆ 10  ಗಂಟೆಗೆ ಕುಂಭಮೇಳದೊಂದಿಗೆ ಶ್ರೀ ಅಂಬಾದೇವಿ ಮೂರ್ತಿಯ ಪುರಪ್ರವೇಶವಾಗಿ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಹೊರಟು ನೂತನ ದೇವಸ್ಥಾನ ತಲುಪುವದು ನಂತರ ಮಹಾಪ್ರಸಾದ ಸೇವೆ ಜರುಗುವುದು..

ಶುಕ್ರವಾರ ದಿ 20 ರಂದು ಮುಂಜಾನೆ ಬ್ರಾಹ್ಮೀ ಮುಹೂರ್ತದಲ್ಲಿ  ಚಂಡಿಕಾಹೋಮ ರುದ್ರಾಭಿಷೇಕ ಜರುಗಿದ ನಂತರ 9 ಗಂಟೆಗೆ ಇಂಚಲದ  ಶ್ರೀ ಶಿವಾನಂದ ಭಾರತಿ ಸ್ವಾಮಿಗಳು, ದೊಡವಾಡದ  ಉಮೇಶ್ವರ  ಶಿವಾಚಾರ್ಯರು  ಇವರ ಸಾನಿಧ್ಯದಲ್ಲಿ ಹಾಗೂ ದೇವಿಯ ಆರಾಧಕರ

ನೇತೃತ್ವದಲ್ಲಿ ದೇವಿಯ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಜರುಗಿದ  ನಂತರ ಮಹಾಪ್ರಸಾದ ನಡೆಯಲಿದೆ.

ಶನಿವಾರ ದಿ 21 ರಂದು ಬೆಳಿಗ್ಗೆ 6ಗಂಟೆಗೆ ದೇವಿಗೆ  ರುದ್ರಾಭಿಷೇಕ ಸಾಮೂಹಿಕ  ದೇವಿ ಪುರಾಣ ಹಾಗೂ ಭಜನಾ ಕಾರ್ಯಕ್ರಮ ಚಿಕ್ಕುಂಬಿಯ ಅಭಿನವ ನಾಗಲಿಂಗ  ಸ್ವಾಮಿಗಳವರ ಸಾನಿಧ್ಯದಲ್ಲಿ  ಜರುಗಲಿದೆ ನಂತರ ಮಹಾಪ್ರಸಾದ ಸೇವೆ ನಡೆಯಲಿದೆ.

ರವಿವಾರ  ದಿ  22 ರಂದು ಮುಂಜಾನೆ 6 ಗಂಟೆಗೆ ಖೋದಾನಪೂರದ ಮಾತೋಶ್ರೀ ವಿದ್ಯಾಭಾರತಿ ತಾಯಿಯವರ  ನೇತೃತ್ವದಲ್ಲಿ ರುದ್ರಾಭಿಷೇಕ, ಬಗಳಾ ಶತಕ ಹಾಗೂ  ಕುಂಕುಮಾರ್ಚನೆ ಕಾರ್ಯಕ್ರಮ ಜರುಗಿದ ನಂತರ ಮಹಾಪ್ರಸಾದ ಸೇವೆ ಜರುಗಲಿದೆ.

ಸೋಮವಾರ ದಿ  23ರಂದು ಬೆಳಿಗ್ಗೆ  6:00 ಗಂಟೆಗೆ ರುದ್ರಾಭಿಷೇಕ ಹಾಗೂ ಉಡಿತುಂಬುವ ಕಾರ್ಯಕ್ರಮ ಜರುಗಿದ  ನಂತರ ಮಹಾಪ್ರಸಾದ ವಿತರಣೆಯಾಗಲಿದೆ. ಒಟ್ಟು ಐದು ದಿನಗಳವರೆಗೆ  ನಡೆಯುವ ಈ  ಕಾರ್ಯಕ್ರಮಕ್ಕೆ ನಾಡಿನ ಹಲವಾರು ಪೂಜ್ಯರು  ಆಗಮಿಸಿ ಪ್ರವಚನ ನಡೆಸಿಕೊಡಲಿದ್ದಾರೆ. ಪ್ರತಿದಿನ ಸಾಯಂಕಾಲ 6ರಿಂದ  ಧರ್ಮಸಭೆ,  ಪ್ರವಚನ ಕಾರ್ಯಕ್ರಮ,  ಸಾಧಕರ ಸನ್ಮಾನ ಕಾರ್ಯಕ್ರಮಗಳು ಜರುಗಲಿದ್ದು  ಪ್ರತಿದಿನ ಮದ್ಯಾಹ್ನ ಹಾಗೂ ರಾತ್ರಿ ಅನ್ನ ಪ್ರಸಾದ ಸೇವೆ ನಡೆಯಲಿದ್ದು  ಹಾಗೂ ಐದು ದಿನ ಸಂಜೆ  ವಿವಿಧ ಗ್ರಾಮಗಳ ಭಜನಾ ತಂಡಗಳಿಂದ ಭಜನಾ  ಕಾರ್ಯಕ್ರಮಗಳು ಜರುಗಲಿದ್ದು ಈ ಕಾರ್ಯಕ್ರಮಕ್ಕೆ ಸರ್ವರೂ  ಆಗಮಿಸಿ ದೇವಿಯ ದರ್ಶನಾಶೀರ್ವಾದ ಪಡೆದು ಅಂಬಾದೇವಿಯ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನದ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

 


Leave a Reply