Belagavi

ಆಗಸ್ಟ್ ೧೩ ರಿಂದ ಸೆಪ್ಟೆಂಬರ್ ೦೨ರ ವರೆಗೆ ಭಾರತ@೭೫ ಸಧೃಡ ಭಾರತ ಓಟ


ಬೆಳಗಾವಿ,ಆ.೧೩: ೭೫ ನೇ ಸ್ವಾತಂತ್ರö್ಯ ದಿನಾಚರಣೆಯ ಅಮೃತಮಹೋತ್ಸವದ ಪ್ರಯುಕ್ತ ಯುವ ಜನರಲ್ಲಿ ದೇಶಾಭಿಮಾನ ಮತ್ತು ದೈಹಿಕ ಶಕ್ತಿ ವೃದ್ಧಿಸಲಿಕ್ಕಾಗಿ ಭಾರತ@೭೫ ಸಧೃಡ ಭಾರತ ಓಟವನ್ನು ಆಗಸ್ಟ್ ೧೩ ರಿಂದ ಸೆಪ್ಟೆಂಬರ್ ೦೨ ರ ವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿಗಳಾದ ರೋಹಿತ ಕಲರಾ ತಿಳಿಸಿದ್ದಾರೆ.
ಭಾರತ ಸರ್ಕಾರದ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯದ ಅಡಿಯಲ್ಲಿ ಬರುವ ನೆಹರು ಯುವ ಕೇಂದ್ರ ಸಂಘಟನೆ, ನೆಹರು ಯುವ ಕೇಂದ್ರ ಬೆಳಗಾವಿ, ಜಿಲ್ಲಾ ಆಡಳಿತ, ರಾಷ್ಟಿçÃಯ ಸೇವಾ ಯೋಜನೆಯ ಬೆಳಗಾವಿ, ಜಿಲ್ಲೆಯ ಯುವ ಮಂಡಳಗಳು, ರಾಷ್ಟಿçÃಯ ಯುವ ಸ್ವಯಂ ಸೇವಕರ ಸಹಯೋಗದೊಂದಿಗೆ ಸ್ವಾತಂತ್ರö್ಯ ದಿನಾಚರಣೆಯ ಅಮೃತಮಹೋತ್ಸವದ ಅಂಗವಾಗಿ ಸ್ವಾತಂತ್ರö್ಯ ಓಟವನ್ನು ರಾಜ್ಯದ ಒಟ್ಟು ೩೦ ಜಿಲ್ಲೆಯ ೭೫ ಗ್ರಾಮಗಳಲ್ಲಿ ಹಮ್ಮಿಕೊಳ್ಳಲಾಗಿದ್ದು, ಪ್ರತಿ ಗ್ರಾಮದ ೭೫ ಯುವಜನರು ಪಾಲ್ಗೊಂಡು ೦೭ ಕಿ.ಮೀ ಓಟವನ್ನು ಕ್ರಮಿಸಬೇಕಾಗುತ್ತದೆ.
ಬೆಳಗಾವಿ ಜಿಲ್ಲೆಯ ೧೪ ತಾಲೂಕಿನಲ್ಲಿ ೭೫ ಗ್ರಾಮಗಳಲ್ಲಿ ಭಾರತ ಓಟವನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಸದರಿ ಓಟಕ್ಕೆ ಗ್ರಾಮದ ಯುವಕರು ಪ್ರೋತ್ಸಾಹದಿಂದ ಪಾಲ್ಗೋಳ್ಳಬೇಕು ಎಂದು ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿಗಳಾದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply