Belagavi

ಸಿಐಡಿ ತಂಡದಿAದ ಗಾಂಜಾ ಮಾರಾಟಗಾರರ ಮೇಲೆ ದಾಳಿ


ಬೆಳಗಾವಿ,ಆ.೧೩: ಬೆಳಗಾವಿ ಗಾಂಧಿನಗರ ಸರ್ವಿಸ್ ರೋಡ ಹತ್ತಿರ ಗಾಂಜಾ ಮಾರಾಟದಲ್ಲಿ ತೊಡಗಿದ ಇಬ್ಬರು ವ್ಯಕ್ತಿಗಳ ಮೇಲೆ ಸಿಐಡಿ ತಂಡದಿAದ ದಾಳಿ ಮಾಡಿ ಗಾಂಜಾ ಮಾರಾಟಗಾರರನ್ನು ಬಂಧಿಸಲಾಗಿದೆ.
ಬೆಳಗಾವಿ ಘಟಕದ ಡಿಟೆಕ್ಟಿವ್ ಸಬ್ ಇನ್ಸೆö್ಪಕ್ಟರ್ ಲಕ್ಷö್ಮಣ ಹುಂಡರದ ರವರಿಗೆ ಬಂದ ಖಚಿತ ಮಾಹಿತಿಯ ಮೇರೆಗೆ ಗಾಂಜಾ ಮಾರಾಟದಲ್ಲಿ ತೊಡಗಿದ್ದ ಶಮಶುದ್ದಿನ್(೩೭) ಮತ್ತು ಮಹಮ್ಮದ್ ಹನೀಫ್ (೫೭) ಇವನ್ನು ಬಂಧಿಸಿ ೪೦,೮೦೦ ರುಪಾಯಿ ಮೌಲ್ಯದ ೨ ಕೆಜಿ ೨೦೦ ಗ್ರಾಂ ಗಾಂಜಾ ಮತ್ತು ಎರಡು ಮೊಬೈಲ್‌ಗಳು ಹಾಗೂ ರೂ.೬೫೦/- ನಗದು ಹಣ ಜಪ್ತು ಮಾಡಲಾಗಿದೆ. ಈ ಕುರಿತು ಬೆಳಗಾವಿ ನಗರ ಸಿ.ಇ.ಎನ್ ಅಪರಾಧ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ ಎಂದು ಎನ್.ಡಿ.ಸಿ ಸಿಐಡಿ ಡಿಟೆಕ್ಟಿವ್ ಸಬ್ ಇನ್ಸೆ÷್ಪಕ್ಟರ್ ತಿಳಿಸಿದ್ದಾರೆ.
ಸದರಿ ಪ್ರಕರಣದಲ್ಲಿ ಪತ್ತೆ ಹಚ್ಚಿ ದಾಳಿ ಮಾಡುವಲ್ಲಿ, ಸಿಐಡಿ ಎನ್.ಡಿ.ಸಿ ಬೆಳಗಾವಿ ಘಟಕದ ಸಿಬ್ಬಂದಿಯವರಾದ ಜಗದೀಶ ಎಂ ಬಾಗನವರ, ಜಿ.ರ‍್ಶಿರಸಂಗಿ, ಚಿದಂಬರ ಚಟ್ಟರಕ್ಕಿ ಮತ್ತು ಜೆ.ಎಂ.ನಗಾರಿ ಉಪಸ್ಥಿತರಿದ್ದರು.


Leave a Reply