Koppal

ಕಡ್ಡಾಯ ಮಾಸ್ಕ್ ಧರಿಸಿ ಕೊರೋನಾ ಸೋಲಿಸಿ ಎಂ.ಗಂಗಪ್ಪ


ಕುಷ್ಟಗಿ: ಸಾರ್ವಜನಿಕರು ಕೊವೀಡ್-೧೯ ಕೊರೋನಾ ವೈರಸ್ ನಿಂದ ಹೆಚ್ಚರಿಕೆಯಿಂದ ಇರಬೇಕಾದ ಪರಸ್ಥಿತಿ ಬಂದಿದೆ ಆದ್ದರಿಂದ ೩ ಅಲೆ ಆವರಿಸುವ ಆತಂಕ ಹೆಚ್ಚಿದ್ದು ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಎಂ.ಗಂಗಪ್ಪ ಜನರಿಗೆ ಮೂರನೇಯ ಅಲೆಯ ಬಗ್ಗೆ ಮನವರಿಕೆ ಮಾಡಿಕೊಟ್ಟರು.

ಕೊಪ್ಪಳ ಜಿಲ್ಲೆ ಕುಷ್ಟಗಿ ಪಟ್ಟಣದ ಬಸ್ ನಿಲ್ದಾಣದ ಮುಂಭಾಗದ ರಸ್ತೆಯಲ್ಲಿ ಮಾಸ್ಕ್ ದರಿಸದೆ ಹಾಗೆ ನಡೆದಾಡುವಂತಹ ಸಾರ್ವಜನಿಕರನ್ನು ತಡೆದು ಕಡ್ಡಾಯವಾಗಿ ಮಾಸ್ಕ್ ಧರಿಸಿ ಕೊರೋನಾ ಸೋಲಿಸಿ ಮತ್ತು ಕೊರೋನಾ ವೈರಸ್ ಈ ದೇಶವನ್ನು ಬಿಟ್ಟು ಹೋಗುವಂತೆ ಮಾಡಿ ಪ್ರತಿಯೊಬ್ಬರು ಲಸಿಕೆ ಹಾಕಿಸಿಕೊಂಡು ಕೊರೋನಾ ಮುಕ್ತ ದೇಶವನ್ನಾಗಿ ಮಾಡೋಣವೆಂದು ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಮೂರನೆ ಅಲೆಯ ಬಗ್ಗೆ ಜನರು ಜಾಗೃತರಾಗಿರುವಂತೆ ಮನವರಿಕೆ ಮಾಡಿಕೊಡುವ ಮೂಲಕ ಸಾರ್ವಜನಿಕರಿಗೆ ತಿಳಿಸಿದರು.

ಈ ಸಂದರ್ಭದಲ್ಲಿ
ಜಿಲ್ಲಾ ನಗರಾಭಿವೃದ್ಧಿ ಕೋಶದ ನಿರ್ದೇಶಕ ಎಂ ಗಂಗಪ್ಪ ,ರಾಜು ಪಿರಂಗಿ, ತಾವರಗೇರಾ ಪಟ್ಟಣ ಪಂಚಾಯತ
ಮುಖ್ಯಾಧಿಕಾರಿ ಶಂಕರ ಮಾಳ, ಪುರಸಭೆ ಕಚೇರಿಯ
ವ್ಯವಸ್ಥಾಪಕ ಷಣ್ಮುಖ,

ಪ್ರಹ್ಲಾದ್ ಜೋಷಿ,
ನೈರ್ಮಲ್ಯ ಅಧಿಕಾರಿಗಳನ್ನು ಮಹೇಶ್ ಅಂಗಡಿ, ಹುಲ್ಲಪ್ಪ ಸೇರಿದಂತೆ ಪುರಸಭೆ ಸಿಬ್ಬಂದಿಗಳು ಉಪಸ್ಥಿತರಿದ್ದರು

ವರದಿ-ಆರ್ ಶರಣಪ್ಪ ಗುಮಗೇರಾ
ಕೊಪ್ಪಳ.


Leave a Reply