Koppal

ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟ ಸಂಘದಿಂದ ಪರಣ್ಣ ಮುನವಳ್ಳಿ ಅವರಿಗೆ ಮನವಿಸಲ್ಲಿಸಿದರು


ಗಂಗಾವತಿ:ಕಲ್ಯಾಣ ಕರ್ನಾಟಕ ಭಾಗದ ಕಲಾವಿಧರ ಪ್ರಮುಖ ಬೇಡಿಕೆಗಳನ್ನು ತಾವುಗಳು ವಿಧಾನಸೌಧದಲ್ಲಿ ಚರ್ಚಿಸುವ ಜೊತೆಗೆ ಮಾನ್ಯ ಮುಖ್ಯಮಂತ್ರಿಗಳಿಗು ಹಾಗೂ ಸಂಬಂಧಪಟ್ಟ ಇಲಾಖೆಯ ಸಚಿವರಿಗೆ ಗಮನಕ್ಕೆ ತಂದು ನಮ್ಮ ಭಾಗದ ಕಲಾವಿಧರ ಬೆಡಿಕೆಗಳನ್ನು ಇಡೆರಿಸಬೇಕೆಂದು ಒತ್ತಾಯಿಸಿ ಕಲ್ಯಾಣ ಕರ್ನಾಟಕ ಕಲಾವಿಧರ ಒಕ್ಕೂಟದಿಂದ ಇಂದು ಗಂಗಾವತಿಯ ಶಾಸಕ ಪರಣ್ಣ ಮುನವಳ್ಳಿ ಅವರಿಗೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ತಾಲ್ಲೂಕು ಸಂಚಾಲಕರಾದ ದೇವರಾಜ್ ಮಾತನಾಡಿ ಕಲ್ಯಾಣ ಕರ್ನಾಟಕ ಕಲಾವಿಧರ ಒಕ್ಕೂಟದಿಂದ ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುವುದೆನೆಂದರೆ. ಈಗಾಗಲೆ ತಮಗೆ ತಿಳಿದಿರುವಂತೆ ಕಳೆದ ಹಲವು ವರ್ಷಗಳಿಂದ ಈ ಭಾಗದ ರಂಗಭೂಮಿ, ಜನಪದ, ಸಂಗೀತ, ನೃತ್ಯ, ಬಯಲಾಟ, ಬುಡಕಟ್ಟು ಸೇರಿದಂತೆ ಇತರೆ ಪ್ರಕಾರದ ಕಲಾವಿಧರು ನಿರಂತರವಾಗಿ ಸರಕಾರದ ಸೌಲಭ್ಯ ಹಾಗೂ ಸಾಂಸ್ಕಂತಿಕ ಚಟುವಟಿಕೆಗಳಿಂದ ಅವಕಾಶ ವಂಚಿತರಾಗುತ್ತಾ ಬರುತ್ತಿದ್ದಾರೆ, ಆ ಕಾರಣದಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಅನೇಕ ಜನ ಪ್ರತಿಭಾವಂತ ರಾಜ್ಯ, ರಾಷ್ಟç ಮತ್ತು ಅಂತರಾಷ್ಟಿಂಯ ಮಟ್ಟದ ಕಲಾವಿದರಿದ್ದರೂ ಕೂಡ, ಸರಕಾರ ಮಾತ್ರ ಗುರುತಿಸುವಲ್ಲಿ ವಿಫಲವಾಗುತ್ತಲೇ ಬಂದಿದೆ. ಈ ಎಲ್ಲಾ ಕಾರಣಗಳಿಂದ ನಮ್ಮ ಒಕ್ಕೂಟದ ಮೂಲಕ ತಮ್ಮಲ್ಲಿ ಮನವಿ ಸಲ್ಲಿಸುತ್ತಿದ್ದು ತಾವುಗಳು, ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿಮಾಡುವ ಮೂಲಕ ಈ ಕೆಳಕಂಡ ಬೇಡಿಕೆಗಳನ್ನು ಇಡೇರಿಸಬೇಕೆಂದು ಒತ್ತಾಯಿಸುತ್ತಿದ್ದೆವೆ.
ರಾಜ್ಯದಲ್ಲಿ ಪ್ರಸ್ತುತ ಅಸ್ತಿತ್ವದಲ್ಲಿರುವ ಸರಕಾರದ ಹಲವಾರು ಟ್ರಸ್ಟ್ ಹಾಗೂ ಪ್ರತಿಷ್ಠಾನದ ಮಾದರಿಯಲ್ಲಿ ಕೊಪ್ಪಳದಲ್ಲಿ ಡಾ|| ಸಿದ್ದಯ್ಯ ಪುರಾಣಿಕರ ಹೆಸರಿನಲ್ಲಿ ಟ್ರಸ್ಟ್ ಸ್ಥಾಪಿಸಬೇಕು ಹಾಗೂ ಕಲ್ಯಾಣ ಕರ್ನಾಟಕ ಭಾಗದ ಸಾಧಕ ಕಲಾವಿಧರ ಹೆಸರಿನಲ್ಲಿ ಸರಕಾರದಿಂದ ಎಲ್ಲಾ ಜಿಲ್ಲೆಗಳಲ್ಲಿಯು ಟ್ರಸ್ಟ್ ಸ್ಥಾಪಿಸಬೇಕು.
ಆಂದ್ರ ಸರಕಾರದ ಮಾದರಿಯಲ್ಲಿ ಕರ್ನಾಟಕದ ಎಲ್ಲಾ ಕಲಾವಿಧರಿಗು ಕನ್ನಡ ಮತ್ತು ಸಂಸ್ಕöÈತಿ ಇಲಾಖೆಯ ಮೂಲಕ ಕಲಾವಿಧರ ಗುರುತಿನ ಚೀಟಿ ನೀಡಬೇಕು.
ಕಲ್ಯಾಣ ಕರ್ನಾಟಕ ಭಾಗದಲ್ಲಿ, ಕರ್ನಾಟಕ ಸರಕಾರದಿಂದ “ಕಲ್ಯಾಣ ಕರ್ನಾಟಕ ಸಾಂಸ್ಕöÈತಿಕ ಅಕಾಡೆಮಿ” ಸ್ಥಾಪನೆಯಾಗಬೇಕು.
ಪ್ರಸ್ತುತ ಅಸ್ತಿತ್ವದಲ್ಲಿರುವ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಲ್ಲಿ ಸಾಂಸ್ಕöÈತಿಕ ಉದ್ದೇಶಕ್ಕೆ ಕ್ರೀಯಾಯೋಜನೆ ರೂಪಿಸಿ ಕಲ್ಯಾಣ ಕರ್ನಾಟಕದ ೭ ಜಿಲ್ಲೆಗಳಲ್ಲಿ, ಜಿಲ್ಲಾ ಉತ್ಸವಗಳನ್ನು ಆಚರಿಸಬೇಕು ಹಾಗೂ ಹಂಪಿಉತ್ಸವದ ಮಾದರಿಯಲ್ಲಿ ಈ ಭಾಗದ ಐತಿಹಾಸಿಕ ಕ್ಷೇತ್ರಗಳ ಉತ್ಸವ ನಡೆಸಬೇಕು.ಸಂತ ಶಿಶುನಾಳ ಶರೀಫರ ಕ್ಷೇತ್ರದ ಅಭಿವೃದ್ಧಿ ಮಾದರಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಪ್ರಸಿದ್ದ ತತ್ವಪದಕಾರ “ಕಡಕೋಳ ಮಡಿವಾಳಪ್ಪ” ನವರ ಅಭಿವೃದ್ಧಿ ಪ್ರಾಧಿಕಾರ ರಚಿಸಬೇಕು. ಕರ್ನಾಟಕ ಸರಕಾರದಿಂದ ನಡೆಯುವ ಎಲ್ಲಾ ಉತ್ಸವಗಳಲ್ಲಿ ಹಾಗೂ ರಾಜ್ಯ, ರಾಷ್ಟç ಮತ್ತು ಅಂತರರಾಷ್ಟಿಂಯ ಮಟ್ಟದ ಸಮಾರಂಭಗಳಲ್ಲಿ ಕಡ್ಡಾಯವಾಗಿ ಕಲ್ಯಾಣ ಕರ್ನಾಟಕ ಭಾಗದ ಕಲಾವಿಧರಿಗೆ ಅವಕಾಶ ನೀಡಬೇಕು.ತೆಲಂಗಾಣ ಸರಕಾರದ ಮಾದರಿಯಲ್ಲಿ ಕರ್ನಾಟಕ ರಾಜ್ಯದ ಪದ್ಮಶ್ರೀ, ಪದ್ಮಭೂಷಣ, ರಾಜ್ಯೋತ್ಸವ ಪುರಸ್ಕöÈತ ಕಲಾವಿಧರಿಗೆ ನಿರಂತರವಾಗಿ ಸರಕಾರದಿಂದ ರೂ: ೧೦,೦೦೦/- ಮಾಶಾಸನ ನೀಡಬೇಕು.ರಾಜ್ಯದ ಕಲಾವಿಧರ ಮಾಶಾನದ ವಯೋಮಾನ ೫೮ ರಿಂದ ೫೦ ಕ್ಕೆ ಇಳಿಸಬೇಕು ಹಾಗೂ ಮಾಶಾನದ ಮೊತ್ತ ರೂ: ೨೦೦೦/- ರಿಂದ ೫೦೦೦/- ಕ್ಕೆ ಹೆಚ್ಚಿಸಬೇಕು. ರಾಜ್ಯದ ಎಲ್ಲಾ ಶಾಲೆಗಳಲ್ಲಿ ಪ್ರಸ್ತುತ ಅಸ್ತಿತ್ವದಲ್ಲಿರುವ ಚಿತ್ರಕಲಾ ಶಿಕ್ಷಕರು ಹಾಗೂ ದೈಹಿಕ ಶಿಕ್ಷಕರ ಮಾದರಿಯಲ್ಲಿ ರಂಗ ಶಿಕ್ಷಕರು ಹಾಗೂ ಸಂಗೀತ ಶಿಕ್ಷಕರನ್ನು ನೇಮಿಸಬೇಕು, ಮತ್ತು ಸಮಾಜ ಕಲ್ಯಾಣ ಇಲಾಖೆ ಹಾಗೂ ಇತರೆ ಇಲಾಖೆಗಳಿಂದ ನಡೆಯುತ್ತಿರುವ ರಾಜ್ಯದ ಎಲ್ಲಾ ವಸತಿಶಾಲೆಗಳಲ್ಲಿ ಜನಪದ ಶಿಕ್ಷಕರನ್ನು ಸರಕಾರ ನೇಮಿಸಬೇಕು.ಪದವಿಧರರು ಹಾಗೂ ಶಿಕ್ಷಕರ ಕ್ಷೇತ್ರಗಳಂತೆ ಕಲಾವಿದರಿಗಾಗಿಯೇ ಪ್ರತ್ಯೇಕವಾಗಿ ವಿಧಾನಪರಿಷತ್ ಕ್ಷೇತ್ರ ರಚನೆಮಾಡಬೇಕು.ರಾಜ್ಯದ ಕಲಾವಿಧರಿಗೆ ಸರಕಾರದಿಂದ ಬಸ್ ಪಾಸ್ ವಿನಾಯಿತಿ ನೀಡಬೇಕು, ವಿಮಾ ಯೋಜನೆ ರೂಪಿಸಬೇಕು.

ಈ ಸಂದರ್ಭದಲ್ಲಿ ಜಿಲ್ಲಾ ಸಹ ಸಂಚಾಲಕರು ಖಾದರ್ ಸಾಬ್ .
ಗಂಗಾವತಿ ಗೌರವಾಧ್ಯಕ್ಷರು ಕೃಷ್ಣ ಆರ್ .ಸಹ ಸಂಚಾಲಕರು ದೇವರಾಜ್.ಗೌರವ ಸಲಹೆಗಾರರು ನಾಗರಾಜ್ ಇಂಗಳಗಿ.ಕಲಾವಿದರಾದ ರಾಮಕೃಷ್ಣ ಚನ್ನದಾಸರ .ಸಂತೋಷ್ ನಿಸ್ಸಾರ್ ಅಹ್ಮದ್ .ಮೌನೇಶ್ .ಸುಂದರ್ ಹರ್ಷವರ್ಧನ್ . ರಾಘವೇಂದ್ರ .ಸಿದ್ದು ಗೌಳಿ .ವೀರೇಶ್ ಮುತ್ತಿನಮಠ.ಯಂಕಣ್ಣh ಹುಲಿಹೈದರ್ ಹಾಗೂ ವಿವಿಧ ರಂಗ ಕಲಾ ಕ್ಷೇತ್ರದ ಕಲಾವಿದರು ಉಪಸ್ಥಿತರು ಇದ್ದರು

(ಹನುಮೇಶ್ ಬಟಾರಿ)


Leave a Reply