Koppal

ಸಾಧನೆ ಎಂಬುದು ತಪಸ್ಸು ಎಂದು ಸಾರಿದ” ಪತ್ತಿಕೊಂಡ ಹರ್ಷವರ್ಧನ


ಗಂಗಾವತಿ: ಆಗಸ್ಟ್ ೧೫ ರಂದು ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ನಗರದ ಟಿ.ಬಿ.ಡ್ಯಾಂ ನಲ್ಲಿರುವ ಜವಳಿಸ್ ಪದವಿ ಪೂರ್ವ ಕಾಲೇಜಿನಲ್ಲಿ ಆಚರಿಸಲಾಯಿತು. ಕಾರ್ಯಕ್ರಮಕ್ಕೆ ನಗರದ ಹೆಸರಾಂತ ದಾನಿಗಳ *ಶ್ರೀ ಪತ್ತಿಕೊಂಡ ಹರ್ಷವರ್ದನ್ ರವರು* ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು ಹಾಗೂ ಶಾಂತಪ್ರಭ ಎಜುಕೇಶನಲ್ ಟ್ರಸ್ಟ್ ನ ಕಾರ್ಯದರ್ಶಿಗಳಾದ *ಶ್ರೀ ಲೇಪಾಕ್ಷ .ಎಸ್ .ಜವಳಿ, ಕಾಲೇಜಿನ ಉಪನ್ಯಾಸಕರಾದ * ಶ್ರೀಮತಿ ಪ್ರತಿಭಾ, ಕು ಸಂಗೀತ, ಎನ್. ವೀರೇಶ ಮಸಲವಾಡ, ಶ್ರೀಮತಿ ಎಸ್ .ಮಂಜುಳ ಹಾಗೂ ಎಲ್ಲಾ ಉಪನ್ಯಾಸಕ ವರ್ಗದವರು ಹಾಜರಿದ್ದರು..ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ದಾನಿಗಳು *ಶ್ರೀ ಪತ್ತಿಕೊಂಡ ಹರ್ಷವರ್ದನ್ ರವರು* ಈ ದಿನಾಚರಣೆಯ ಹಿನ್ನೆಲೆ ,ಉದ್ದೇಶ ಹಾಗೂ ಸ್ವತಂತ್ರ ಮಹತ್ವವನ್ನು ತಿಳಿಸಿಕೊಟ್ಟರು .ಕರೋನ ಹಾವಳಿಯಿಂದ ಕಳೆದ ಎರಡು ವರ್ಷಗಳಿಂದ ವಿದ್ಯಾರ್ಥಿಗಳ ಭವಿಷ್ಯ ಮಸುಕಾಗಿದೆ ಇದನ್ನು ಮತ್ತೆ ನಾವು ಆತ್ಮ ವಿಶ್ವಾಸದಿಂದ ಬೆಳಗಬೇಕಾಗಿದೆ.ಆರೋಗ್ಯ ಹಾಗೂ ಶಿಕ್ಷಣ ಎರಡನ್ನೂ ಜೊತೆಜೊತೆಯಲ್ಲಿಯೇ ತೆಗೆದುಕೊಂಡು ಸಾಗಬೇಕಾಗಿದೆ ಎಂದು ತಿಳಿಸುತ್ತಾ,ಈ ದಿನ ಕೇವಲ ಸಂಭ್ರಮದ ದಿನ ಆಗಿರಬಾರದು ನಮ್ಮಲ್ಲಿ ಜಾತಿ-ಮತ , ಅಸೂಯೆ ಇಂತಹ ಭಾವನೆಗಳನ್ನು ದೂರ ಸರಿಸಿ ನಾವೆಲ್ಲರೂ ಒಂದೇ ಎನ್ನುವಂತೆ ಬಾಳ ಬೇಕು ಹಾಗೂ ಪ್ರತಿಯೊಬ್ಬರೂ ನಮ್ಮ ಸ್ವಾತಂತ್ರ್ಯವನ್ನು ಅರ್ಥೈಸಿಕೊಂಡು ಇದಕ್ಕೆ ಚ್ಯುತಿಬಾರದಂತೆ ನಡೆದುಕೊಳ್ಳಬೇಕೆಂದು ತಿಳಿಸಿದರು. ನಮ್ಮ ದೇಶ ಪ್ರಜಾಪ್ರಭುತ್ವವನ್ನು ಹೊಂದಿದ ದೊಡ್ಡ ದೇಶವಾಗಿದೆ. ಇಲ್ಲಿ ಎಲ್ಲರಿಗೂ ಸಮಾನವಾಗಿ ಜೀವಿಸುವ ಹಕ್ಕಿದೆ ಇಂತಹ ದೇಶದಲ್ಲಿ ಹುಟ್ಟಿದ ನಾವು ಧನ್ಯರು ಎಂದು ತಿಳಿಸಿದರು.ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಮತ್ತು ಸಮಯದ ಮಹತ್ವವನ್ನು ತಿಳಿಸಿ ವಿದ್ಯಾರ್ಥಿಗಳಿಗೆ ಉತ್ತಮ ಗುರಿಯನ್ನು ಹೊಂದಿದ್ದರೆ ಸಾಲದು ಅದಕ್ಕೆ ತಕ್ಕಂತೆ ಶ್ರಮ ಹಾಗೂ ಮನೋಬಲವನ್ನು ಹೊಂದಿರಬೇಕೆಂದು ಮತ್ತು ವಿದ್ಯಾರ್ಥಿಗಳು ತಮ್ಮ ಗುರಿ ಮುಟ್ಟಿದರೆ ಅವರ ತಂದೆ ತಾಯಿ ಹಾಗೂ ವಿದ್ಯಾಸಂಸ್ಥೆ ಹೆಮ್ಮೆ ಪಡುತ್ತದೆ ಎಂದು ತಿಳಿಸುತ್ತಾ ಉಪನ್ಯಾಸಕರು ವಿದ್ಯಾರ್ಥಿಗಳ ಮನೋಬಲವನ್ನು ಹೆಚ್ಚಿಸುವ ಕೆಲಸ ಮಾಡಬೇಕಿದೆ ಎಂದು ತಿಳಿಸಿದರು. ಹಾಗೆಯೇ ಶಾಂತ ಪ್ರಭ ಎಜುಕೇಶನಲ್ ಟ್ರಸ್ಟ್ ನ ಕಾರ್ಯದರ್ಶಿಗಳಾದ *ಶ್ರೀ ಲೇಪಾಕ್ಷ . ಎಸ್. ಜವಳಿ* ರವರು ಮಾತನಾಡುತ್ತಾ *ವಿದ್ಯಾರ್ಥಿಗಳ ಚಿತ್ತ ದೇಶದತ್ತ* ಇರಬೇಕೆಂದು ದೇಶದ ಪ್ರತಿಯೊಬ್ಬ ನಾಗರಿಕನು ಭ್ರಾತೃತ್ವ ಭಾವದಿಂದ ಸಾಗುತ್ತಾ ದೇಶಾಭಿಮಾನವನ್ನು ಮೈಗೂಡಿಸಿಕೊಳ್ಳಬೇಕೆಂದು ತಿಳಿಸಿದರು.ಶ್ರೀಕಮಲ್ ಅಸೋಸಿಯೇಟ್ಸ್ ವತಿಯಿಂದ ಶ್ರೀ ಪತ್ತಿಕೊಂಡ ಹರ್ಷವರ್ಧನ್ ತಂದೆ: ದಿ||ಶ್ರೀ ಪತ್ತಿಕೊಂಡ ಪ್ರಭಾಕರ್ ರವರು ನಗರದ ಜವಳಿಸ್ ಪ.ಪೂ.ಕಾಲೇಜಿಗೆ CC TV,Ups.Sanitisor stand ಇನ್ನೂ ಮುಂತಾದ ಸಾಮಾಗ್ರಿಗಳನ್ನು ದಾನವಾಗಿ ನೀಡಿದ್ದಕ್ಕೆ ತುಂಬು ಹೃದಯದಿಂದ ಶಾಂತಪ್ರಭ ಟ್ರಸ್ಟ್ ನ ವತಿಯಿಂದ ನಮನ ಅಭಿನಂದಿಸಲಾಯಿತು.ಕಾರ್ಯಕ್ರಮದಲ್ಲಿ ಉಪನ್ಯಾಸಕಿ ಶ್ರೀಮತಿ. ಮೆಹತಾಬ್ ಹಾಗೂ ಅಶೋಕ್ ಹಾಜರಿದ್ದರು.

(ಹನುಮೇಶ್ ಬಟಾರಿ)


Leave a Reply