karanatakaKoppal

ಸಂದೀಪ್ ಉನ್ನಿಕೃಷ್ಣನ್ ರವರ ನಾಮ ಫಲಕ ಅನಾವರಣ


ಕುಷ್ಟಗಿ .  ಕುಷ್ಟಗಿ:  ಪ್ರಸಕ್ತ ಸಾಲಿನ 75ನೆ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸವಿನೆನಪಿನ ಸಂದರ್ಭದಲ್ಲಿ ಪುರಸಭೆ ಕುಷ್ಟಗಿ, ಮಾಜಿ ಸೈನಿಕರ ಸಂಘ ಕುಷ್ಟಗಿ ಹೈದರಾಬಾದ್ ಕರ್ನಾಟಕ ಯುವಶಕ್ತಿ (ರಿ),ಯ ಸಂಯುಕ್ತಾಶ್ರಯದಲ್ಲಿ

ಕುಷ್ಟಗಿ ನಗರದ ಗಜೇಂದ್ರಗಡ ರಸ್ತೆಗೆ ಹೊಂದಿಕೊಂಡಿರುವ ಪುರಸಭೆಯ ಆಶ್ರಯ ಬಡಾವಣೆಗೆ ಮೇಜರ್ ಸಂದೀಪ್ ಉನ್ನಿಕೃಷ್ಣನ್ ರವರ ನಾಮಕರಣ ಮಾಡಿ ನಾಮಫಲಕ ಅಳವಡಿಸಲಾಗಿತ್ತು. ಆದರೆ, ಕಾರಣಾಂತರಗಳಿಂದ ಹಾನಿಗೀಡಾಗಿದ್ದ ನಾಮಫಲಕವನ್ನು ಹೈದರಾಬಾದ್ ಕರ್ನಾಟಕ ಯುವಶಕ್ತಿ ಸಂಘಟನೆ , ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಪ್ರಗತಿಪರ ಚಿಂತಕರ ಒತ್ತಾಯದ ಮೇರೆಗೆ ಮರು ಅಳವಡಿಸಲಾಗಿದೆ.
ಹುತಾತ್ಮ ವೀರಯೋಧ ಮೆ.ಸಂದೀಪ್ ಉನ್ನಿಕೃಷ್ಣನ್ ರವರ ನಾಮಫಲಕ ಅನಾವರಣ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಜಿ.ಕೆ ಹಿರೇಮಠ ಅಧ್ಯಕ್ಷರು, ಪುರಸಭೆ ಕುಷ್ಟಗಿ ವಹಿಸಿದ್ದರು.. ಮಾಜಿ ಸೈನಿಕರಾದ
ಭೀಮನಗೌಡ ಜಾಲಿಹಾಳ ಮೆ.ಸಂದೀಪ್ ಉನ್ನಿಕೃಷ್ಣನ್ ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ನಂತರ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ನಜೀರಸಾಬ್ ಮೂಲಿಮನಿ ಪ್ರಸ್ತಾವಿಕವಾಗಿ ಮಾತನಾಡಿ,ಪುರಸಭೆಯ ಆಶ್ರಯ ಬಡಾವಣೆಗೆ ಮೇಜರ್ ಸಂದೀಪ್ ಉನ್ನಿಕೃಷ್ಣನ್ ರವರ ನಾಮಕರಣ ಮಾಡಿ ನಾಮಫಲಕ ಅಳವಡಿಸಲಾಗಿತ್ತು. ಆದರೆ, ಕಾರಣಾಂತರಗಳಿಂದ ಹಾನಿಗೀಡಾಗಿದ್ದ ನಾಮಫಲಕವನ್ನು ಹೈದರಾಬಾದ್ ಕರ್ನಾಟಕ ಯುವಶಕ್ತಿ ಸಂಘಟನೆ , ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಪ್ರಗತಿಪರ ಚಿಂತಕರು ತಹಶೀಲ್ದಾರರು, ಪುರಸಭೆ ಮುಖ್ಯಾಧಿಕಾರಿಗಳು ಹಾಗೂ ಅಧ್ಯಕ್ಷರಿಗೆ ಮನವಿ ಪತ್ರ ಸಲ್ಲಿಸಿ ನಾಮಫಲಕ ಅಳವಡಿಕೆಗೆ ಹೈದರಾಬಾದ್-ಕರ್ನಾಟಕ ಯುವಶಕ್ತಿ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳು ಒತ್ತಾಯಿಸಿದಾಗ ಕೂಡಲೇ ಸ್ಪಂದಿಸಿದ ಅಧಿಕಾರಿ ವರ್ಗ ಹಾಗೂ ಜನಪ್ರತಿನಿಧಿಗಳು ಆಗಸ್ಟ್ 15 ರೊಳಗಾಗಿ ನಾಮಫಲಕ ಮರು ಅಳವಡಿಕೆ ಭರವಸೆ ನೀಡಿದ್ದರು. 75ನೇ ಸ್ವಾತಂತ್ರ ಅಮೃತಮಹೋತ್ಸವ ಕಾರ್ಯಕ್ರಮದಂದು ಹುತಾತ್ಮ ವೀರಯೋಧನ ನಾಮಫಲಕ ಅನಾವರಣಗೊಳಿಸಿದ್ದು ತುಂಬಾ ಹೆಮ್ಮೆಯ ಸಂಗತಿ ಎಂದರು. ತಹಶೀಲ್ದಾರ ಸಿದ್ಧೇಶ್ ಎಂ. ನಾಮಫಲಕ ಅನಾವರಣಗೊಳಿಸಿದರು.
ಸಿಪಿಐ ನಿಂಗಪ್ಪ ಆರ್.ಹೈದರಾಬಾದ್ ಕರ್ನಾಟಕ ಯುವಶಕ್ತಿಯ ಸಾಮಾಜಿಕ ಚಟುವಟಿಕೆಗಳ ವಿಡಿಯೋ ಪ್ರೋಮೋ ಬಿಡುಗಡೆಗೊಳಿಸದರು..
ರೈತ ಮುಖಂಡ ನಜೀರ್ ಸಾಬ್ ಮೂಲಿಮನಿ, ನಾಮಫಲಕ ಚಿತ್ರಕಲಾವಿದ ತಿಮ್ಮಣ್ಣ ಮೆಣೆದಾಳ ಮತ್ತು ವಿವೇಕ ಕಂಪ್ಯೂಟರ್ಸ್ ಶಿಕ್ಷಣ ಸಂಸ್ಥೆ ಗಣಕಯಂತ್ರ ಶಿಕ್ಷಕ ಬಸವರಾಜ್ ಹಜಾಳದ ಸಾಧಕರನ್ನು ಹೈ-ಕ ಯುವಶಕ್ತಿ ಯ ವತಿಯಿಂದ ಸನ್ಮಾನಿಸಲಾಯಿತು.
ಉದ್ಯಮಿ ಶರಣಪ್ಪ ಕತ್ತಿ ಮತ್ತು ಮರಸಣ್ಣ ತಾಳದ ಹಾಗೂ ಹೈ-ಕ ಯುವಶಕ್ತಿ ಸಂಘಟನೆಯ ಕಿರಣ್ ಜ್ಯೋತಿ,ಮರಿಯಪ್ಪ ಗುಮಗೇರಾ,ಬಸವರಾಜ್ ತಿಮ್ಮಾಪೂರ,ರಮೇಶ ತೊಂಡಿಹಾಳ,ಶ್ರೀಧರ ಹಿರೇಮಠ, ಪರಶುರಾಮ ಬೋದೂರ, ಮಂಜುನಾಥ ತಳವಗೇರಾ, ವೀರೇಶ
ಬಳ್ಳೊಳ್ಳಿ ಹಾಗೂ ರೈತ ಸಂಘ, ತಾಲೂಕ ಮಾಜಿ ಸೈನಿಕರ ಸಂಘದ ಸದಸ್ಯರು ಮತ್ತು ಮೆ. ಸಂದೀಪ್ ಉನ್ನಿಕೃಷ್ಣನ್ ನಗರದ ನಿವಾಸಿಗಳು ಹಾಜರಿದ್ದರು.
ಹೈ-ಕ ಯುವಶಕ್ತಿಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಬಸವರಾಜ್ ಗಾಣಿಗೇರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ವರದಿ-ಆರ್ ಶರಣಪ್ಪ ಗುಮಗೇರಾ.

ಕೊಪ್ಪಳ


Leave a Reply