vijayapur

ಸರ್ಕಾರಿ ನೌಕರರು ಸೇವೆಗೆ ಹಾಜರಾಗುವಂತೆ ಅಂತಿಮ ಸೂಚನೆ


ವಿಜಯಪುರ: ಆ. : ಜಿಲ್ಲೆಯ ಈ ಕೆಳಕಂಡ ಬೋಧಕ, ಬೋಧಕೇತರರ ಸರಕಾರಿ ನೌಕರರು ಇಲ್ಲಿ ತಿಳಿಸಿದ ದಿನಾಂಕದಿAದ ಕರ್ತವ್ಯಕ್ಕೆ ಅನಧಿಕೃತ ಗೈರು ಉಳಿದು, ಕರ್ತವ್ಯಲೋಪ ಎಸಗಿದ್ದಾರೆ. ಹಲವಾರು ಬಾರಿ ಅವರುಗಳಿಗೆ ಲಿಖಿತ ರೂಪದಲ್ಲಿ ಕರ್ತವ್ಯಕ್ಕೆ ಹಾಜರಾಗಲು ತಿಳಿಸಿದರೂ ಸಹ ಹಾಜರಾಗದೆ ಮತ್ತು ಲಿಖಿತ ವಿವರಣೆ ನೀಡದೆ ಮೇಲಾಧಿಕಾರಿಗಳ ಆದೇಶಕ್ಕೆ ಗೌರವ ತೋರಿಸುತ್ತಾರೆ.
ಇದರಿಂದ ಅವರುಗಳಿಗೆ ಸರಕಾರಿ ಸೇವೆಯಲ್ಲಿ ಮುಂದುವರೆಯುವ ಇಚ್ಚೆ ಹೊಂದಿರುವುದಿಲ್ಲವೆAದು ಸ್ಪಷ್ಟವಾಗುತ್ತದೆ. ಆದಾಗ್ಯೂ ಈಗಲಾದರೂ ಕರ್ತವ್ಯಕ್ಕೆ ಹಾಜರಾಗಲು ಪ್ರಕಟಣೆಯ ದಿನಾಂಕದಿAದ ೧೫ ದಿನಗಳ ಗಡುವು ನೀಡಲಾಗಿದೆ ಎಂದು ವಿಜಯಪುರ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು (ಆಡಳಿತ) ಅವರು ತಿಳಿಸಿದ್ದಾರೆ.
ಈ ಅವಧಿಯಲ್ಲಿ ಅವರು ಹಾಜರಾಗದಿದ್ದಲ್ಲಿ ಈ ನೌಕರರುಗಳಿಗೆ ಸೇವೆಯಲ್ಲಿ ಮುಂದುವರೆಯುವ ಇಚ್ಚೆ ಇಲ್ಲವೆಂದು ಪರಿಗಣಿಸಿ ಕರ್ನಾಟಕ ಸೇವಾ ವರ್ತನೆ ನಿಯಮ ೨೦೦೧ ರ ನಿಯಮ ೩(೧) (೨) (೩) ಉಪನಿಯಮಗಳು ವಿರುದ್ಧವಾಗಿದ್ದು, ಮತ್ತು ಕರ್ನಾಟಕ ನಾಗರೀಕ ಸೇವಾ ನಿಯಮಾವಳಿ ೧೯೫೮ ರ ನಿಯಮ ೧೦೮ ರ ಮೇರೆಗೆ ಹಾಗೂ ೧೯೫೭ ರ ಕರ್ನಾಟಕ ನಾಗರೀಕ ಸೇವಾ ನಿಯಮ (ವರ್ಗೀಕರಣ ನಿಯಂತ್ರಣ ಹಾಗೂ ಮೇಲ್ಮನವಿ) ನಿಯಮ ೮ ರ ಮೇರೆಗೆ ಸೇವೆಯಿಂದ ವಜಾ ಮಾಡಬಹುದಾಗಿದೆ ಎಂದು ಈ ಮೂಲಕ ಅಂತಿಮವಾಗಿ ತಿಳಿಸಲಾಗಿದೆ ಅವರು ತಿಳಿಸಿದ್ದಾರೆ.
ಎಮ್.ಆಯ್ ಪೂರ್ವಾ ಟಿ ಜಿ ಟಿ (ಹಿಂದಿನ) ಸರಕಾರಿ ಕನ್ನಡ ಗಂಡು ಮಕ್ಕಳ ಶಾಲೆ, ದಿಂಡವಾರ ತಾ.ಬ.ಬಾಗೇವಾಡಿ (ಹಾಲಿ) ಸರ್ಕಾರಿ ಪ್ರೌಢಶಾಲೆ ಬೋಳಚಿಕ್ಕಲಕಿ, ತಾ.ಜಿ :ಗ್ರಾಮೀಣ ವಿಜಯಪುರ, ಇವರು ಗೈರ ಉಳಿದ ದಿನಾಂಕ : ೮-೩-೨೦೧೬, ಎಸ್ ಎಸ್ ಬನಸೋಡೆ ಡಿ ದರ್ಜೆ ನೌಕರರು: ಸರಕಾರಿ ಪ್ರೌಢಶಾಲೆ ಮಲಘಾಣ, ತಾ. ಬಸವನ ಬಾಗೇವಾಡಿ ಜಿ. ವಿಜಯಪುರ ಇವರು ಗೈರು ಉಳಿದ ದಿನಾಂಕ ೩-೧-೨೦೧೮, ಶ್ರೀಮತಿ ರೇಣುಕಾಬಾಯಿ ಶಿವಪ್ಪ ಬಾಗೇವಾಡಿ, ಡಿ ದರ್ಜೆ ನೌಕರರು, ಸರಕಾರಿ ಪದವಿ ಪೂರ್ವ ಕಾಲೇಜು, ಪ್ರೌಢಶಾಲಾ ವಿಭಾಗ, ಲಚ್ಯಾಣ, ತಾ : ಇಂಡಿ, ಗೈರು ಉಳಿದ ದಿನಾಂಕ : ೧೬-೯- ೨೦೨೦ ಆಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply