Belagavi

ವ್ಯಕ್ತಿ ನಾಪತ್ತೆ


ಬೆಳಗಾವಿ,ಆ.೧೭: ಬೆಳಗಾವಿ ಹಿಂಡಲಗಾದ ರಾಮದೇವಗಲ್ಲಿಯ ಮೂಲನಿವಾಸಿಯಾದ ರಾಜು ವಿಠ್ಠಲರಾವ ಪಿಸೆ ಅವರ ಆ.೧೨ ರಂದು ಮಧ್ಯಾಹ್ನ ೧೨ ಗಂಟೆ ಸುಮಾರಿಗೆ ಮನೆಯಿಂದ ಹೊರಗೆ ಹೋಗಿ ಮನೆಗೆ ವಾಪಸ್ಸು ಬಾರದೇ ಕಾಣೆಯಾಗಿದ್ದಾರೆ ಎಂದು ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಗೆ ಪ್ರಕರಣ ದಾಖಲಾಗಿದೆ.
ರಾಜು ವಿಠ್ಠಲರಾವ ಪಿಸೆ (೫೮ ವರ್ಷ) ಅವರ ೫ ಫೂಟ್ ೪ ಇಂಚು ಉದ್ದ, ಕೋಲು ಮುಖ, ಸಾದಾಗೆಂಪು ಮೈಬಣ್ಣ, ಸಡಪಾತಳ ಮೈಕಟ್ಟು ಹೊಂದಿರುತ್ತಾರೆ. ಮರಾಠಿ, ಕನ್ನಡ, ಹಿಂದಿ ಭಾಷೆ ಮಾತನಾಡುತ್ತಾರೆ.
ಬಿಳಿ ಬಣ್ಣದ ಫುಲ್ ಶರ್ಟ, ಕಪ್ಪು ಬಣ್ಣದ ಪ್ಯಾಂಟ್ ಧರಿಸುತ್ತಾರೆ.
ಈ ಪ್ರಕಾರ ಚಹರೆಯುಳ್ಳ ವ್ಯಕ್ತಿಯ ಬಗ್ಗೆ ಮಾಹಿತಿ ದೊರೆತಲ್ಲಿ ಬೆಳಗಾವಿ ನಗರದ ಪೊಲೀಸ್ ಆಯುಕ್ತರು ಅಥವಾ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಸಂಪರ್ಕಿಸಿ ಅಥವಾ ಪೊಲೀಸ್ ಕಂಟ್ರೊಲ್ ರೂಂ ಫೋನ್ ನಂ.೦೮೩೧-೨೪೦೫೨೩೩ ಗೆ ಸಂಪರ್ಕಿಸಿ ಎಂದು ಗ್ರಾಮೀಣ ಪೊಲೀಸ್ ಠಾಣೆಯ ಪಿ.ಐ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply