Belagavi

ಭಾರತ @ ೭೫ ಆಜಾದಿ ಕಾ ಅಮೃತ ಮಹೋತ್ಸವ:ಗ್ರಾಮೀಣ ರಸ್ತೆಗಳ ಕುರಿತು ಕಾರ್ಯಾಗಾರ


ಬೆಳಗಾವಿ,ಆ.: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ದಿ ಸಂಸ್ಥೆ ವತಿಯಿಂದ “ ಭಾರತ @೭೫ ಆಜಾದಿ ಕಾ ಅಮೃತ ಮಹೋತ್ಸವ ” ಅಂಗವಾಗಿ ಗ್ರಾಮೀಣ ರಸ್ತೆಗಳ ಕುರಿತು ಅಗಸ್ಟ್ ೧೯ ರಂದು ಬೆಳಿಗ್ಗೆ ೧೧ ಗಂಟೆಗೆ ಒಂದು ದಿನದ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.
ಕಾರ್ಯಾಗಾರವು ಚಿಕ್ಕೋಡಿಯ ಇಂದಿರಾ ನಗರದ ಹತ್ತಿರವಿರುವ ಲೋಕೋಪಯೋಗಿ ಸಭಾಭವನದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾಧಿಕಾರಿಗಳಾದ ಎಂ.ಜಿ.ಹಿರೇಮಠ ವಹಿಸಲಿದ್ದು, ಮುಖ್ಯ ಅತಿಥಿಯಾಗಿ ಜಿಲ್ಲಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಾದ ದರ್ಶನ ಎಚ್.ವಿ ಮತ್ತು ಪಂಚಾಯತ ರಾಜ್ ಇಂಜನಿಯರಿAಗ್ ವೃತ್ತದ ಅಧಿಕ್ಷಕ ಅಭಿಯಂತರರಾದ ಎಸ್.ಜಿ.ಲೋಕೂರ ಆಗಮಿಸಲಿದ್ದಾರೆ.
ನಿವೃತ್ತ ಅಧಿಕ್ಷಕ ಅಭಿಯಂತರರಾದ ಬಿ.ಡಿ.ನಸಲಾಪೂರೆ, ನಿವೃತ್ತ ಕಾಂiÀiðನಿರ್ವಾಹಕ ಅಭಿಯಂತರರಾದ ಎನ್.ಸಿ ಬಾಗಲಕೋಟ ಹಾಗೂ ಮುಂಬಯಿಯ ಟೆಕ್ ಪ್ಯಾಬ್ ಇಂಡಿಯಾ ಸಂಸ್ಥೆಯ ಪಿ.ಸಾಳವೇಕರ ಅವರು ಉಪನ್ಯಾಸವನ್ನು ನೀಡಲಿದ್ದಾರೆ.
ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ವಿಭಾಗ ಮತ್ತು ಉಪ ವಿಭಾಗಗಳ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಕಾರ್ಯಾಗಾರದಲ್ಲಿ ಭಾಗವಹಿಸಲಿದ್ದಾರೆ ಎಂದು ಯೋಜನಾ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರಾದ ಎಸ್.ಎಮ್.ಮೇಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply