vijayapur

ವಿಜಯಪುರ ನಗರ ವ್ಯಾಪ್ತಿಯ ಉದ್ಯೋಗಿನಿ ಯೋಜನೆಯಡಿ ಅರ್ಜಿ ಆಹ್ವಾನ


ವಿಜಯಪುರ:ಆ.೧೯: ೨೦೨೧-೨೨ನೇ ಸಾಲಿನ ಉದ್ಯೋಗಿನಿ ಯೋಜನೆಯಡಿ ವಿಜಯಪುರ ನಗರ ಮತಕ್ಷೇತ್ರಕ್ಕೆ ಯೋಜನೆಗೆ ಒಟ್ಟು ೦೬ ಹಾಗೂ ನಾಗಠಾಣ ಮತಕ್ಷೇತ್ರಕ್ಕೆ ಒಟ್ಟು ೦೧ ಹಾಗೂ ಧನಶ್ರೀ ಯೋಜನೆಯಡಿ ಒಟ್ಟು ೦೬ ಗುರಿಯನ್ನು ನಿಗದಿಪಡಿಸಿದ್ದು, ಫಲಾನುಭವಿಗಳಿಂದ ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಕಾರಣ ಅರ್ಜಿ ಸಲ್ಲಿಸ ಬಯಸುವವರು ಹೆಚ್ಚಿನ ಮಾಹಿತಿಗಾಗಿ ವಿಜಯಪುರ ನಗರ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿಯನ್ನು ಸಂಪರ್ಕಿಸಬೇಕು ಹಾಗೂ ಉದ್ಯೋಗಿನಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:೦೩/೦೯/೨೦೨೧ ಹಾಗೂ ಧನಶ್ರೀ ಅರ್ಜಿಯ ಕೊನೆಯ ದಿನಾಂಕ:೨೪/೦೮/೨೦೨೧ ರೊಳಗೆ ಇರುತ್ತದೆ ಎಂದು ವಿಜಯಪುರ ನಗರ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply