vijayapur

ಅನಾವಶ್ಯಕವಾಗಿ ಆಯುಧ ಲೈಸನ್ಸ್ ಪಡೆಯುತ್ತಿರುವುದಕ್ಕೆ ಕಡಿವಾಣ


ವಿಜಯಪುರ :ಅ.೧೯. : ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ದಿನಾಂಕ.೧೭/೦೮/೨೦೨೧ ರಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರು, ತಹಶೀಲದಾರರು ಹಾಗೂ ಪೊಲೀಸ್ ವೃತ್ತ ನಿರೀಕ್ಷಕರೊಂದಿಗೆ ಆಯುಧ ಲೈಸನ್ಸ್ ಮಂಜೂರಿಸುವ ಕುರಿತು ಸಭೆಯನ್ನು ಏರ್ಪಡಿಸಿ, ಹೊಸದಾಗಿ ಆಯುಧ ಲೈಸನ್ಸ್ ಮಂಜೂರಾತಿ, ಲೈಸನ್ಸ್ ನವೀಕರಣ, ಮರುನೋಂದಣಿ, ವರ್ಗಾವಣೆ ಹಾಗೂ ಮಾರಾಟ, ಹೆಚ್ಚುವರಿ ಆಯುಧ ಹೊಂದುವ ಕುರಿತಾಗಿ ಪ್ರಕರಣಗಳನ್ನು ಪರಿಶೀಲಿಸಲಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ ಕುಮಾರ್ ಅವರು ತಿಳಿಸಿದ್ದಾರೆ.
ಅದರಂತೆ ಬಹುತೇಕ ಪ್ರಕರಣಗಳಲ್ಲಿ ಸಾರ್ವಜನಿಕ ತಮಗೆ ತೀರ ಅವಶ್ಯಕತೆ ಇಲ್ಲದಿದ್ದರೂ, ಆತ್ಮರಕ್ಷಣೆ ಮತ್ತು ಬೆಳಸಂರಕ್ಷಣೆ ಹಾಗೂ ಇತರೆ ಕಾರಣಗಳನ್ನು ನೀಡಿ, ಆಯುಧ ಲೈಸನ್ಸ್ ಪಡೆಯುತ್ತಿದ್ದು, ಬಹುತೇಕ ಪ್ರಕರಣಗಳಲ್ಲಿ ಇದರ ಅವಶ್ಯಕತೆ ಇಲ್ಲದಿರುವುದು ಹಾಗೂ ಕೇವಲ ಘನತೆಗಾಗಿ ಹಾಗೂ ಸಾಮಾನ್ಯ ಜನರನ್ನು ಹೆದರಿಸುವ ಉದ್ದೇಶಕ್ಕಾಗಿ ಪರವಾನಿಗೆ ಪಡೆಯುತ್ತಿರುವುದು ಮೇಲ್ನೋಟಕ್ಕೆ ಕಂಡುಬAದಿರುತ್ತದೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಸಾರ್ವಜನಿಕ ಹಿತದೃಷ್ಟಿಯಿಂದ ಹಾಗೂ ಕಾನೂನು ಸುವ್ಯವಸ್ಥೆ ಹಿತದೃಷ್ಟಿಯಿಂದ ತೀರ ಅನಿವಾರ್ಯ ಪ್ರಕರಣಗಳಲ್ಲಿ ಮಾತ್ರ ಆಯುಧ ಲೈಸನ್ಸ್ ಮಂಜೂರಾತಿ, ಲೈಸನ್ಸ್ ನವೀಕರಣ ಮಾಡಲು ಹಾಗೂ ಅನಗತ್ಯ ಪ್ರಕರಣಗಳಲ್ಲಿ ಕಡಿವಾಣ ಹಾಕಲು ತೀರ್ಮಾನಿಸಲಾಗಿರುತ್ತದೆ.
ಕಾರಣ ಇನ್ನು ಮುಂದೆ ಸಾರ್ವಜನಿಕರ ಹಿತದೃಷ್ಟಿಯಿಂದ ಹಾಗೂ ಕಾನೂನು ಸುವ್ಯವಸ್ಥೆ ಹಿತದೃಷ್ಟಿಯಿಂದ ಪೊಲೀಸ್ ಅಧೀಕ್ಷಕರು, ಆಯುಧ ಮಂಜೂರಾತಿಗಾಗಿ ಶಿಫಾರಿಸುವ ಪೂರ್ವದಲ್ಲಿ ಅರ್ಜಿದಾರರ ಪೂರ್ವಚರಿತೆ ಪರಿಶೀಲಿಸಿ, ತೀರ ಅವಶ್ಯವಿದ್ದಲ್ಲಿ ಸಂದರ್ಶನ ಜರುಗಿಸಿ, ಆಯುಧ ಪರವಾನಿಗೆಯ ಅವಶ್ಯಕತೆಯಿರುವ ವ್ಯಕ್ತಿಗೆ ಪರವಾನಿಗೆ ಹೊಂದಲು ಸೂಕ್ತ ಕಾರಣಗಳಿವೆಯೆಂದು ಮನಗಂಡು ಮಂಜೂರಾತಿಗಾಗಿ ಶಿಫಾರಸ್ಸು ಮಾಡಿದ ವರದಿ ಆಧರಿಸಿ ಜಿಲ್ಲಾಧಿಕಾರಿಗಳು ಸಂದರ್ಶನದ ಮೂಲಕ ಆಯುಧ ಲೈಸನ್ಸ್ ಅವಶ್ಯಕತೆ ಇರುವ ಬಗ್ಗೆ ಪ್ರಕರಣಗಳ ಕುರಿತು ಪರಿಶೀಲಿಸಿ ಕ್ರಮ ಜರುಗಿಸಲಾಗುವುದು.
ಆದ್ದರಿಂದ ಮೇಲೆ ವಿವರಿಸಿದಂತೆ ಇನ್ನು ಮುಂದೆ ತೀರ ಅವಶ್ಯ ಪ್ರಕರಣಗಳಲ್ಲಿ ಮಾತ್ರ ಆಯುಧ ಲೈಸನ್ಸ್ ಮಂಜೂರಾತಿ/ಲೈಸನ್ಸ್ ನವೀಕರಣ / ಮರುನೋಂದಣಿ / ವರ್ಗಾವಣೆ ಹಾಗೂ ಮಾರಾಟ / ಹೆಚ್ಚುವರಿ ಆಯುಧ ಹೊಂದಲು ಕ್ರಮವಹಿಸಲಾಗುವುದು ಹಾಗೂ ಘನತೆಗಾಗಿ ಅಥವಾ ಸಾರ್ವಜನಿಕ ಶಾಂತಿಭAಗ ಉಂಟುಮಾಡುವ ದೃಷ್ಟಿಯಿಂದ ಆಯುಧ ಲೈಸನ್ಸ್ ಪಡೆಯುತ್ತಿರುವುದಕ್ಕೆ ಕಡಿವಾಣ ಹಾಕಿ ನಿಯಮಾನುಸಾರ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.


Leave a Reply