vijayapur

ಪರೀಕ್ಷಾ ವೇಳೆಯಲ್ಲಿ ಅಧಿಕಾರಿ ಸಿಬ್ಬಂದಿಗಳು ಮೊಬೈಲ್ ಫೋನ್ ಬಳಸುವಂತಿಲ್ಲ ಜಿಲ್ಲಾಧಿಕಾರಿ ಆದೇಶ


ವಿಜಯಪುರ : ಅ.೧೯.: ಅಗಸ್ಟ್-ಸೆಪ್ಟಂಬರ ೨೦೨೧ನೇ ಸಾಲಿನ ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಗಳು ವಿಜಯಪುರ ಜಿಲ್ಲೆಯ ವಿಜಯಪುರ, ಬ,ಬಾಗೇವಾಡಿ, ಮುದ್ದೇಬಿಹಾಳ ಇಂಡಿ, ಸಿಂದಗಿ ತಾಲೂಕು ಕೇಂದ್ರಗಳಲ್ಲಿ (ಒಟ್ಟು ೦೫ ಪರೀಕ್ಷಾ ಕೇಂದ್ರಗಳು) ದಿನಾಂಕ :೧೯-೦೮-೨೦೨೧, ೨೧-೦೮-೨೦೨೧, ೨೩-೦೮-೨೦೨೧, ೨೪-೦೮-೨೦೨೧, ೨೫-೦೮-೨೦೨೧, ೨೬-೦೮-೨೦೨೧.೨೭-೦೮-೨೦೨೧. ೨೮-೦೮-೨೦೨೧, ೨೯-೦೮-೨೦೨೧. ೩೦-೦೮-೨೦೨೧, ೩೧-೦೮-೨೦೨೧, ೦೧-೦೯-೨೦೨೧ ೦೨-೦೯-೨೦೨೧ ಹಾಗೂ ದಿ:೦೩-೦೯-೨೦೨೧ ರಂದು ಜರುಗುತ್ತವೆ.
ಪರೀಕ್ಷಾ ಕಾರ್ಯದಲ್ಲಿ ತೊಡಗಿರುವ ಯಾವುದೇ ಅಧಿಕಾರಿ ಹಾಗೂ ಸಿಬ್ಬಂದಿಗಳು ಮತ್ತು ಇತರರು ಮೊಬೈಲ್ ಫೋನನ್ನು ತರುವುದನ್ನು ಹಾಗೂ ಬಳಸುವುದನ್ನು ನಿಷೇಧಿಸಲಾಗಿದೆ.
ಕೇವಲ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು ಮಾತ್ರ ಬೇಸಿಕ್ ಮೊಬೈಲ್ ಸೆಟ್‌ನ್ನು ಮಾತ್ರ ಬಳಸಬಹುದಾಗಿದೆ, ಪರೀಕ್ಷಾ ಕೇಂದ್ರದ ಸುತ್ತಲಿನ ೨೦೦ ಮೀಟರ ವ್ಯಾಪ್ತಿಯ ಪ್ರದೇಶವನ್ನು ಬೆಳ್ಳಿಗೆ ೦೮-೦೦ ಗಂಟೆಯಿAದ ಪರೀಕ್ಷೆ ಮುಗಿಯುವವರೆಗೆ ನಿಷೇಧಿತ ಪ್ರದೇಶವೆಂದು ಘೋಷಿಸಿ, ಪರೀಕ್ಷಾ ಕೇಂದ್ರಗಳ ಸಮೀಪದಲ್ಲಿರುವ ಝರಾಕ್ಸ್ ಅಂಗಡಿಗಳು, ಕಂಪ್ಯೂಟರ ಸೆಂಟರಗಳು, ಸೈಬರ್ ಕೆಫೆಗಳು, ಕೋಚಿಂಗ್ ಕೇಂದ್ರಗಳು, ಪರೀಕ್ಷೆ ಜರುಗುವ ಅವಧಿಯಲ್ಲಿ ತೆರೆಯದಂತೆ ಸಂಬAಧಪಟ್ಟ ಅಧಿಕಾರಿಗಳು ನೋಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಪಿ.ಸುನೀಲ ಕುಮಾರ್ ಅವರು ಆದೇಶ ಹೊರಡಿಸಿದ್ದಾರೆ.


Leave a Reply