Koppal

ಸಂಚಾರ ನಿಯಮದ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿದ ಕೊಪ್ಪಳ ಆರ್ ಟಿ ಓ ಇಲಾಖೆ ಅಧಿಕಾರಿಗಳು


ಕುಷ್ಟಗಿ:ಪ್ರತಿ ತಿಂಗಳಿಗೊಮ್ಮೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ಹೊರವಲಯದಲ್ಲಿರುವ ಪ್ರವಾಸಿ ಮಂದಿರದ ಹತ್ತಿರ ವಾಹನ ನೋಂದಣಿ ಹಾಗೂ ಚಾಲಕರ ತರಬೇತಿಗೆ ಸಂಬಂಧಿಸಿದಂತೆ ಆರ್ ಟಿ ಓ ಕ್ಯಾಂಪ್ ಮಾಡಲಾಗುತ್ತಿದೆ.

ವಾಹನ ನೋಂದಣಿ ಮತ್ತು ಚಾಲಕರ ತರಬೇತಿಯ ಜೊತೆಗೆ ವಾಹನ ಸವಾರರು ಮತ್ತು ವಾಹನ ಮಾಲೀಕರು ಅನುಸರಿಸಬೇಕಾದ ನಿಯಮಗಳ ಕುರಿತು ಸ್ಪಷ್ಟವಾಗಿ ಆರ್ ಟಿ ಓ ಅಧಿಕಾರಿಯಾದ ಬಿ ಪಿ ಕೃಷ್ಣೇಗೌಡ ಮಾಹಿತಿ ನೀಡಿದರು. ಇದಕ್ಕೂ ಮುಂಚೆ ವಾಹನ ತಪಾಸಣೆ ಮತ್ತು ವಾಹನ ಚಾಲಕರ ಲೈಸೆನ್ಸ್ ನೀಡುವುದರ ಬಗ್ಗೆ ದಾಖಲೆಗಳನ್ನು ಪರಿಶೀಲಿಸಲಾಯಿತು.

ಸಾರಿಗೆ ಇಲಾಖೆಯ ಅಧಿಕಾರಿಗಳು ಮತ್ತು ಪೋಲಿಸ್ ಅಧಿಕಾರಿಗಳು ವಾಹನ ತಪಾಸಣೆ ಮಾಡುವ ಸಂದರ್ಭದಲ್ಲಿ ನಿಮ್ಮಮ್ಮ ತಡೆದರೆ ವಾಹನವನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿ ನಿಮ್ಮ ವಾಹನದ ದಾಖಲೆಗಳನ್ನು ಅಧಿಕಾರಿಗಳಿಗೆ ತೋರಿಸಿ, ಅಲ್ಲಿಂದ ಹೊರಡಿ,ಅದು ಬಿಟ್ಟು ಅಧಿಕಾರಿಗಳು ವಾಹನವನ್ನು ನಿಲ್ಲಿಸಲು ಬಂದಾಗ ತಪ್ಪಿಸಿಕೊಳ್ಳಲು ಹೋಗಬೇಡಿ,ಇದರಿಂದ ವಾಹನ ಅಪಘಾತಗಳಾಗಬಹುದು. ಎಂದು ಆರ್ ಟಿ ಓ ಅಧಿಕಾರಿ ಬಿ.ಪಿ ಕೃಷ್ಣೇಗೌಡ ವಾಹನ ಸವಾರರಿಗೆ ಹೇಳಿದರು.

ಸಾರ್ವಜನಿಕ ವಲಯಗಳಲ್ಲಿ ಆರ್ ಟಿ ಓ ಇಲಾಖೆ ಉತ್ತಮ ಕೆಲಸ ಮಾಡುತ್ತಿದೆ ಈ ಕೆಲಸಕ್ಕೆ ಸಾರ್ವಜನಿಕ ರ ಮೆಚ್ಚುಗೆಗೆ ಪಾತ್ರರಾದರು , ಅಧಿಕಾರಿಗಳು ಈ ರೀತಿ ತರಬೇತಿ ಸಂದರ್ಭದಲ್ಲಿ ಮತ್ತು ವಾಹನ ತಪಾಸಣೆ ಮಾಡುವ ಸಂದರ್ಭದಲ್ಲಿ ಚಾಲಕರಿಗೆ ಮತ್ತು ಮಾಲಕರಿಗೆ ಇಲಾಖೆಯಿಂದ ಮತ್ತು ಸರಕಾರದ ನಿಯಮಗಳನ್ನು ಹೇಗೆ ಪಾಲನೆ ಮಾಡಬೇಕು ಮತ್ತು ಅಪರಾಧ ತಡೆಗಟ್ಟುವ ನಿಟ್ಟಿನಲ್ಲಿ ಯಾವ ರೀತಿ ವಾಹನ ಚಲಾವಣೆ ಮಾಡಬೇಕೆಂದು ಇದರ ಬಗ್ಗೆ ಸಾರ್ವಜನಿಕ ತಿಳಿಸಿರುವುದು ಸಂತೋಷಕರ ವಿಚಾರವಾಗಿದೆ ಇದೇ ರೀತಿ ಮುಂದಿನ ದಿನಮಾನಗಳಲ್ಲಿ ಅಧಿಕಾರಿಗಳು ಈ ರೀತಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿಕೊಂಡು ಸಾರ್ವಜನಿಕರಿಗೆ ಅನುಕೂಲವಾಗುವ ರೀತಿ ಮಾಡಿ, ಅಪರಾಧ ಪ್ರಕರಣಗಳು ತಡೆಗಟ್ಟುವ ನಿಟ್ಟಿನಲ್ಲಿ, ಆಕ್ಸಿಡೆಂಟ್ , ತಪ್ಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಹರ್ಷ ವ್ಯಕ್ತಪಡಿಸಿದ್ದಾರೆ.

ಒಟ್ಟಾರೆ ಇಲಾಖೆಯ ಬಗ್ಗೆ ಸಾರ್ವಜನಿಕರಲ್ಲಿ ಉತ್ತಮ ಪ್ರತಿಕ್ರಿಯೆ ಬಂದಿದೆ.ಮುಂದಿನ ದಿನಮಾನಗಳಲ್ಲಿ ಸಾರಿಗೆ ಅಧಿಕಾರಿಗಳು ಇನ್ನೂ ಹೆಚ್ಚಿನ ಕೆಲಸ ಮಾಡಿ ಸಾರ್ವಜನಿಕರಿಗೆ ಇಲಾಖೆ ಬಗ್ಗೆ ಇಟ್ಟಿರುವ ಗೌರವಕ್ಕೆ ಧಕ್ಕೆ ಬರದ ಹಾಗೆ ನೋಡಿ ಕೊಳ್ಳಬೇಕಾಗಿದೆ ಎಂದು ಸಾರ್ವಜನಿಕ ರ ಅಭಿಪ್ರಾಯವಾಗಿದೆ.

ವರದಿ- ಶೇಖರ್ ಎಸ್ ಕನಸಾವಿ

ಕುಷ್ಟಗಿ


Leave a Reply