Koppal

2023 ನೇ ಸಾಲಿನ ಗಂಗಾವತಿ ವಿಧಾನಸಭಾ ಕ್ಷೇತ್ರಕ್ಕೆ ಸಂಗಮೇಶ್ ಸುಗ್ರೀವ ಸ್ಪರ್ಧೆ


ಗಂಗಾವತಿ:ಇಂದು ಗಂಗಾವತಿಯ ಪತ್ರಿಕಾಭವನದಲ್ಲಿ ಸಂಗಮೇಶ್ ಸುಗ್ರೀವ ಇವರ ಅಭಿಮಾನ ಬಳಗ ದಿಂದ ಪತ್ರಿಕಾಗೋಷ್ಠಿ ನಡೆಸಲಾಯಿತು
ಪತ್ರಿಕಾಗೋಷ್ಠಿಯಲ್ಲ ಹಂಪೇಶ್ ಹರಿಗೋಲ್ ಕೊಪ್ಪಳ ಜಿಲ್ಲಾ ಸಂಚಾಲಕರು ಕರ್ನಾಟಕ ದಲಿತ ಸಂಘರ್ಷ ಸಮಿತಿ ಇವರು ಮಾತನಾಡಿದರು 2023ನೇ ಸಾಲಿನ ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುವ ಚುನಾವಣೆಯಲ್ಲಿ ಸಂಗಮೇಶ್ ಸುಗ್ರೀವ ಇವರನ್ನು ಸ್ಪರ್ಧಿಸಲು ಅವರ ಅಭಿಮಾನ ಬಳಗ ಹಾಗೂ ವಿವಿಧ ಸಂಘಟನೆಗಳ ಅವರ ಜೊತೆಗೆ ಕೈಜೋಡಿಸಲಿದ್ದಾರೆ ನಾವು ಕೇಳಿಕೊಳ್ಳುತ್ತಿದ್ದು ಮುಂದಿನ ಚುನಾವಣೆಯಲ್ಲಿ ಗಂಗಾವತಿ ಕ್ಷೇತ್ರಕ್ಕೆ ಇವರನ್ನು ಯಶಸ್ವಿಯಾಗಿ ಚುನಾವಣೆಯಲ್ಲಿ ಪಾದಾರ್ಪಣೆ ಮಾಡಿಸಿ ಇವರನ್ನು ನಾವು ಯಶಸ್ವಿಯಾಗಿ ವಿಜಯಶಾಲಿ ಗಳನ್ನಾಗಿ ಆಯ್ಕೆ ಮಾಡುತ್ತೇವೆ ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು
ದೇವಪುತ್ರಪ್ಪ ಅಯೋಧ್ಯಾ ಜಿಲ್ಲಾ ಅಧ್ಯಕ್ಷರು ಭಾರತೀಯ ಪ್ರಜಾ ಸಂಘ ಇವರು ಮಾತನಾಡಿದರು ಮುಂದಿನ ಚುನಾವಣೆಯಲ್ಲಿ ಇವರು ಗೆದ್ದರೆ ಕ್ಷೇತ್ರಕ್ಕೆ ಅಪಾರ ಕೊಡುಗೆಯನ್ನು ಕೊಡುವ ಭರವಸೆ ನಮಗಿದೆ ಅವರ ಭರವಸೆಗಳು ಕೊಡುವ ನಂಬಿಕೆ ನಮಗಿದೆ
ಕ್ಷೇತ್ರದಲ್ಲಿ ಎಲ್ಲ ಧರ್ಮಗಳ ಶಾಂತಿಯನ್ನು ಕಾಪಾಡುವುದು ಅವರ ಉದ್ದೇಶ.

ಕ್ಷೇತ್ರದ ಸ್ವಚ್ಛತೆ ಮತ್ತು ಬೆಳವಣಿಗೆ.
ನಮ್ಮ ಕ್ಷೇತ್ರದಲ್ಲಿ ಮುಂದೆ ಆಗಬೇಕಾದ ಹಲವು ಅಭಿವೃದ್ಧಿ ಯೋಜನೆಗಳನ್ನು ರೂಪಿಸಿ ಅವುಗಳನ್ನು ಕಾರ್ಯರೂಪಕ್ಕೆ ತರುವ ಮುಖ್ಯ ಉದ್ದೇಶ .
ಕ್ಷೇತ್ರದಲ್ಲಿ ನಿರುದ್ಯೋಗ ಯುವಕ ಯುವತಿಯರಿಗೆ ಉದ್ಯೋಗ ಅವಕಾಶ ಕಲ್ಪಿಸುವುದು .
ಕ್ಷೇತ್ರದಲ್ಲಿ ಬಡವ ದೀನ ದಲಿತ ಅಲ್ಪಸಂಖ್ಯಾತ ಹಿಂದುಳಿದ ಮತ್ತು ಸಹಾಯಕ ವರ್ಗದ ಜನರ ಸಮಸ್ಯೆಗಳನ್ನು ಬಗೆಹರಿಸುವುದು. ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರನ್ನು ಕುಂದು ಕೊರತೆಯನ್ನು ನೀಗಿಸುವುದು .
ಹಳ್ಳಿ ಹಳ್ಳಿಗೂ ಮೂಲ ಸೌಕರ್ಯಗಳಾದ ವಿದ್ಯುತ್ ರಸ್ತೆ ಕುಡಿಯುವ ಶುದ್ಧ ನೀರು ಇನ್ನೂ ಹಲವು ಸೌಕರ್ಯವನ್ನು ಕಾರ್ಯರೂಪಕ್ಕೆ ತರುವುದು .
ಕರ್ನಾಟಕದಲ್ಲಿ ಇರುವಂಥ ಸರಕಾರಿ ಶಾಲೆಗಳನ್ನು ಉಳಿಸುವುದು ಮತ್ತು ಬೆಳೆಸುವುದು ನಮ್ಮ ಸನ್ನಿವೇಶ ಸುಗ್ರೀವ ಅವರ ಉದ್ದೇಶವಾಗಿದೆ .
ಈ ಸಂದರ್ಭದಲ್ಲಿ ಹನುಮಂತಪ್ಪ ಐಹೊಳೆ ಅಧ್ಯಕ್ಷರು ಹೈದ್ರಾಬಾದ್ ಕರ್ನಾಟಕ ಕಟ್ಟಡ ನಿರ್ಮಾಣ ಮತ್ತು ಇತರ ಕಾರ್ಮಿಕರ ಸೇವಾ ಸಂಘ ಗಂಗಾವತಿ. ಹುಲಿಗೇಶ್ ಕೊಚ್ಚಿ ಜಿಲ್ಲಾ ಅಧ್ಯಕ್ಷರು ದಲಿತ ಸೇನೆ ಗಂಗಾವತಿ ಹಾಗೂ ಸಂಗಮೇಶ್ ಸುಗ್ರೀವ ಅಭಿಮಾನ ಬಳಗದ ಯುವಕರು ಈ ಸಂದರ್ಭದಲ್ಲಿದ್ದರು

(ಹನುಮೇಶ್ ಬಟಾರಿ)

ಸುದ್ದಿಗಾಗಿ ಈ ನಂಬರ್ ಗೆ ಸಂಪರ್ಕಿಸಿ
9901465990


Leave a Reply