karanatakaKoppal

ಸ್ವಾಭಿಮಾನ ವ್ಯಕ್ತಿತ್ವ ವಿಕಸನ ತರಬೇತಿ ಶಿಬಿರದಲ್ಲಿ ಪಂಚಮಿ ಶಾಲೆ ಬಾಂಧವರು ಪಾಲ್ಗೊಳ್ಳುವ ಕುರಿತು ಸಭೆ.


ಕುಷ್ಟಗಿ:ಪಂಚಮಸಾಲಿ ಸಮಾಜದ ಯುವಕರಿಗೆ ರಾಜ್ಯ ಪಂಚಮಸಾಲಿ ಯುವ ಘಟಕದ ನೇತೃತ್ವದಲ್ಲಿ ರಾಜ್ಯಮಟ್ಟದ ಸ್ವಾಭಿಮಾನ ವ್ಯಕ್ತಿತ್ವ ತರಬೇತಿ ಶಿಬಿರವನ್ನು ಇದೇ ಆಗಸ್ಟ್ 28 ಹಾಗೂ 29ರಂದು ಶನಿವಾರ ಹಾಗೂ ಭಾನುವಾರ ಹೇಮಗುಡ್ಡದಲ್ಲಿ ಆಯೋಜಿಸಲಾಗಿದೆ .ಜಗದ್ಗುರುಗಳಾದ ಶ್ರೀ ವಚನಾನಂದ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದಾರೆ.

ಅಂದಿನ ಶಿಬಿರದಲ್ಲಿ ಚರ್ಚಿಸುವ ವಿಷಯಗಳು.

ಪರಸ್ಪರ ಪರಿಚಯ, ಸಂಘಟನೆ, ಪರಿಣಾಮಕಾರಿ ಭಾಷಣ ಕಲೆ,ಸೃಜನಶೀಲತೆ,ಹೊಸ ವ್ಯಾಪಾರ ಅಭಿವೃದ್ಧಿ,ವ್ಯವಸಾಯದ ಜೊತೆಗೆ ವ್ಯಾಪಾರ, ಕೃಷಿಯಲ್ಲಿ ಪ್ರಗತಿ, ಆತ್ಮವಿಶ್ವಾಸ, ಮಾನವೀಯತೆಯ ಸಂಬಂಧಗಳು, ಪರಿಣಾಮಕಾರಿ ನಿರ್ಧಾರದ ಕಲೆ, ಉತ್ತಮ ನಾಯಕತ್ವ, ಗುರಿ ತಲುಪುವುದು, ಸ್ಪರ್ಧಾತ್ಮಕ ಪರೀಕ್ಷೆ ಪೂರಕ ಜ್ಞಾನ ಕೆಎಎಸ್ ಮತ್ತು ಐಎಎಸ್,ಯೋಗ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ, ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ, ಹೀಗೆ ಹಲವು ವಿಷಯಗಳ ಬಗ್ಗೆ ಎರಡು ದಿನಗಳಲ್ಲಿ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ ಏರ್ಪಡಿಸಲಾಗಿದ್ದು, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿನ ಪಂಚಮಸಾಲಿ ಪಿಯುಸಿ ಪದವಿ ವ್ಯಾಸಂಗ ಪೂರ್ಣಗೊಳಿಸಿದ ವಿದ್ಯಾರ್ಥಿಗಳು ಹೆಚ್ಚು ಭಾಗವಹಿಸಬೇಕಾಗಿದೆ ಊಟ, ಉಪಹಾರ ಜೊತೆಗೆ ಪ್ರವೇಶಾತಿ ಉಚಿತ ಇರುತ್ತದೆ. ಸಚಿವರಾದ ಮುರುಗೇಶ್ ನಿರಾಣಿ, ಸಿಸಿ ಪಾಟೀಲ್ ಪಾಟೀಲ್,ಶಂಕರ್ ಪಾಟೀಲ್ ಮುನೇಕೊಪ್ಪ, ಹಾಗೂ ರಾಜ್ಯಾಧ್ಯಕ್ಷರಾದ ನಾಗನಗೌಡರು ಶ್ರೀ ಬಾವಿ ಬೆಟ್ಟಪ್ಪ, ಇವರ ಜೊತೆಗೆ ರಾಜ್ಯದ ಎಲ್ಲಾ ಜಿಲ್ಲೆಗಳ ಪಂಚಮಸಾಲಿ ಸಮುದಾಯದವರು ಭಾಗವಹಿಸಲಿದ್ದಾರೆ.

ಸ್ವಾಭಿಮಾನ ವ್ಯಕ್ತಿತ್ವ ವಿಕಸನ ಶಿಬಿರವನ್ನು ರಾಜ್ಯ ಯುವ ಘಟಕ ವಹಿಸಲಿದೆ .ರಾಜ್ಯ ಅಧ್ಯಕ್ಷರಾದ ಶ್ರೀ ಮಂಜುನಾಥ ನವಲಗುಂದ ರಾಜ್ಯ ಯುವ ಘಟಕದ ಕಾರ್ಯಧ್ಯಕ್ಷ ಶಿವು ಗುಡ್ಲಾನೂರ್ ರಾಜ್ಯ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಕಿಚಡಿ ಕೊಟ್ರೇಶ್ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ.

ಆದ್ದರಿಂದ ಕುಷ್ಟಗಿ ತಾಲೂಕಿನ ಪಂಚಮಸಾಲಿ ಸಮಾಜದ ಗುರುಹಿರಿಯರು ಹಾಗೂ ಪಂಚಮಸಾಲಿ ಸಮಾಜದ ತಾಲೂಕ ಅಧ್ಯಕ್ಷರು ಪ್ರಧಾನ ಕಾರ್ಯದರ್ಶಿಗಳು ಹಾಗೂ ನೌಕರರ ಸಂಘದ ಅಧ್ಯಕ್ಷರು ಪ್ರಧಾನ ಕಾರ್ಯದರ್ಶಿಗಳು ಹಾಗೂ ಯುವ ಘಟಕದ ಅಧ್ಯಕ್ಷರು ಪ್ರಧಾನ ಕಾರ್ಯದರ್ಶಿಗಳು ನಗರ ಘಟಕದ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು ಹಾಗೂ ಪದಾಧಿಕಾರಿಗಳು ಸಮಾಜದ ಎಲ್ಲ ಯುವಕರು ಈ ತರಬೇತಿಯಲ್ಲಿ ಶಿಬಿರದಲ್ಲಿ ಪಾಲ್ಗೊಂಡು ತರಬೇತಿಯನ್ನು ಸದುಪಯೋಗ ಪಡೆದುಕೊಂಡು ಯಶಸ್ವಿಗೊಳಿಸಬೇಕೆಂದು ದೃಶ್ಯ ಮಾಧ್ಯಮ ಹಾಗೂ ಪ್ರಿಂಟ್ ಮೀಡಿಯಾದವರ ಮೂಲಕ ವಿನಂತಿಸಿಕೊಂಡಿದ್ದಾರೆ.

ವರದಿ-ಆರ್ ಶರಣಪ್ಪ ಗುಮಗೇರಾ
ಕೊಪ್ಪಳ


Leave a Reply