Belagavi

ಬೈಲಹೊಂಗಲ : ಬಿ ಜೆ ಪಿ ಯಿಂದ ಸೈಕಲ್ ಜಾಥಾ, ಬಾಗಿನ ಅರ್ಪಣೆ


ಬೈಲಹೊಂಗಲ ೨೩ – ದೇಶದ ೭೫ ನೇ ಸ್ವಾತಂತ್ರೋತ್ಸವ ಅಂಗವಾಗಿ ಇಲ್ಲಿಯ ಬಿಜೆಪಿ ಯುವ ಮೋರ್ಚಾ ಹಾಗೂ ಮಂಡಲ ವತಿಯಿಂದ ಮಂಗಳವಾರ ದಿ. ೨೪ ರಂದು ಬಾಗಿನ ಅರ್ಪಣೆ ಕಾರ್ಯಕ್ರಮ ಜರುಗಲಿದೆ.
ಕಾಡಾ ಅಧ್ಯಕ್ಷ ಮಾಜಿ ಶಾಸಕ ಡಾ. ವಿಶ್ವನಾಥ ಪಾಟೀಲ ಅವರು ಬಿಜೆಪಿ ಕಾರ್ಯಾಲಯದಲ್ಲಿ ಬೆಳಗ್ಗೆ ೮-೩೦ ಕ್ಕೆ ಪ್ರಾರಂಭವಾಗಿ ಬಸ £ಲ್ದಾಣ, ಸಂಗೊಳ್ಳಿ ರಾಯಣ್ಣ ವೃತ್ತ ಬಜಾರ ರಸ್ತೆ ಮುಖಾಂತರ ನಯಾನಗರದಲ್ಲಿರುವ ಸುಖಾದೇವನಂದ ಮಠಕ್ಕೆ ತೆರಳುವುದು. ನಂತರ ಅಲ್ಲಿಂದ ಪೂಜ್ಯ ಅಭಿನವ ಸಿದ್ದಲಿಂಗಸ್ವಾಮಿಗಳ ಸಾ£ಧ್ಯದಲ್ಲಿ ಡಾ. ವಿಶ್ವನಾಥ ಪಾಟೀಲ ಅವರ ನೇತೃತ್ವದಲ್ಲಿ ಪಾದಯಾತ್ರೆ ಮೂಲಕ ತೆರಳಿ ಈ ನಾಡಿನ ಜೀವನದಿ ಮಲಪ್ರಭಾ ನದಿಗೆ ಬಾಗಿನ ಅರ್ಪಿಸಲಾಗುವುದು
ಕಾರಣ ಈ ಕಾರ್ಯಕ್ರಮಕ್ಕೆ ಬಿಜೆಪಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

 


Leave a Reply