vijayapur

ವಿಧ್ಯಾರ್ಥಿಗಳು ಧೈರ್ಯದಿಂದ ಕಲಿಕಾ ಪ್ರಕ್ರೀಯೆಗಳಲ್ಲಿ ಭಾಗವಹಿಸಿ: ಉಪನಿರ್ದೇಶಕ ಎನ್.ವ್ಹಿ.ಹೊಸೂರ


ವಿಜಯಪುರ, ಆ.೨೩-ವಿಧ್ಯಾರ್ಥಿಗಳ ಆಗಮನದಿಂದ ಶಾಲೆಗಳಿಗೆ ಜೀವ ಕಳೆ ತುಂಬಿ ಬಹಳ ದಿನಗಳ ನಂತರ ಶಾಲೆಗಳು ಪ್ರಾರಂಭವಾಗಿದ್ದು, ವಿಧ್ಯಾರ್ಥಿಗಳು ಧೈರ್ಯದಿಂದ ಕಲಿಕಾ ಪ್ರಕ್ರೀಯೆಗಳಲ್ಲಿ ಭಾಗವಹಿಸಿ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎನ್.ವ್ಹಿ.ಹೊಸೂರ ಹೇಳಿದರು.
ಅವರು ಇಲ್ಲಿನ ಪ್ರತಿಷ್ಠಿತ ವಿದ್ಯಾ ಸಂಸ್ಥೆಯಾದ ಶ್ರೀರುಕ್ಮಾಂಗದ ಶಿಕ್ಷಣ ಸಂಸ್ಥೆಯಲ್ಲಿ ಶಾಲಾ ಪ್ರಾರಂಬೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಈಗಾಗಲೇ ಎಸ್.ಓ.ಪಿ ಪ್ರಕಾರ ಶಾಲೆಗಳನ್ನುಗೊಳಿಸಿ ವಿದ್ಯಾರ್ಥಿಗಳು ಭಯಮುಕ್ತ ವಾತವರಣದಲ್ಲಿ ಕಲಿಯುವಂತೆ ಎಲ್ಲ ವ್ಯವಸ್ಥೆಯನ್ನು ಮಾಡಲಾಗಿದೆ ಎಂದರು.
ವಿದ್ಯಾರ್ಥಿಗಳು ಕೂಡಾ ಯಾವುದೇ ಕೋವಿಡ್ ಭಯವಿಲ್ಲದಂತೆ ಅಂತರ ಕಾಯ್ದುಕೊಂಡು ಕಲಿಕಾ ಪ್ರಕ್ತೀಯೆಯಲ್ಲಿ ಭಾಗವಹಿಸುವಂತೆ ಕರೆ ನೀಡಿದ ಅವರು ಮಕ್ಕಳು ಕೇವಲ ಪುಸ್ತಕ ಜ್ಞಾನ ಪಡೆಯದೇ ಸಮಾಜ ಸೇವೆ ಹಾಗೂ ಮೌಲ್ಯ ಶಿಕ್ಷಣವನ್ನು ಪಡೆಯುವಂತಾಗಬೇಕು ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಶ್ರೀರುಕ್ಮಾಂಗದ ಪ್ರೌಢ ಶಾಲೆಯ ಮುಖ್ಯ ಗುರುಗಳಾದ ಎಲ್.ಎಚ್.ಕುಲಕರ್ಣಿ ಮಾತನಾಡಿ ವಿಧ್ಯಾರ್ಥಿಗಳ ಆಗಮನದಿಂದ ಶಾಲೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಅರುಣ ಸೋಲಾಪುರಕರ, ಗೌರವ ಕಾರ್ಯದರ್ಶಿ ಮುಕುಂದ ಕುಲಕರ್ಣಿ, ಸಹಗೌರವ ಕಾರ್ಯದರ್ಶಿ ರಾಘವೇಂದ್ರ ದೇಶಪಾಂಡೆ, ಸಿಆರ್‌ಪಿ ಆರ್.ಯು.ನಾಯಕ, ಬಿ.ಆರ್.ಸಿ. ವ್ಹಿ.ಬಿ.ಜಂಗಿನ ಹಾಗೂ ಸಂಸ್ಥೆಯ ಎಲ್ಲ ಶಿಕ್ಷಕ ವೃಂದ ಭಾಗವಹಿಸಿದ್ದರು.
ಪ್ರಾರಂಭದಲ್ಲಿ ಪ್ರೌಢ ಶಾಲೆಯ ಮುಖ್ಯ ಗುರುಗಳಾದ ಎಲ್.ಎಚ್.ಕುಲಕರ್ಣಿ ಸ್ವಾಗತಿಸಿದರು. ಕೊನೆಯಲ್ಲಿ ಮುಖ್ಯ ಗುರುಗಳಾದ ಪಿ.ಎ.ದಿಕ್ಷೀತ ವಂದಿಸಿದರು ಎಂದು ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಅನಂದ ಕುಲಕರ್ಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 


Leave a Reply