Koppal

ಕೋವಿಡ್ ಲಸಿಕೆ ಮಹತ್ವದ ಕುರಿತು ಕುಷ್ಟಗಿ ಆರೋಗ್ಯ ಇಲಾಖೆ ಅಧಿಕಾರಿಗಳಿಂದ ಸಾರ್ವಜನಿಕರಿಗೆ ಜಾಗೃತಿ


ಕುಷ್ಟಗಿ:ನಗರದ ಅಂಬೇಡ್ಕರ್ ನಗರಕ್ಕೆ ಮಾನ್ಯ ತಾಲೂಕು ಆರೋಗ್ಯ ಅಧಿಕಾರಿಗಳು ಡಾ.ಆನಂದ್ ಗೋಟೂರ್ ಮತ್ತು ಸಾರ್ವಜನಿಕ ಆಸ್ಪತ್ರೆಯ ಮುಖ್ಯ ಆಡಳಿತ ವೈದ್ಯಾಧಿಕಾರಿ ಡಾಕ್ಟರ್ ಕೆಎಸ್ ರೆಡ್ಡಿ ಸರ್ ಕೋವಿಡ್ ಲಸಿಕೆ ನಿರಾಕರಣೆ ಮಾಡಿರುವ ಸಾರ್ವಜನಿಕರಿಗೆ ಮನೆಗೆ ಭೇಟಿ ನೀಡಿ ಸಾರ್ವಜನಿಕರಿಗೆ ಕೋವಿಡ್ ಲಸಿಕೆಯ ಮಹತ್ವವನ್ನು ತಿಳಿಸಿದರು.

ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಸಾರ್ವಜನಿಕರಿಗೆ ಸೂಚಿಸಿದರು.ಕೋವಿಡ್ ನಿಯಂತ್ರಣ ಮಾಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಲಸಿಕಾ ಜಾಗೃತಿ ಮಾಡುತ್ತಿವೆ,ಲಸಿಕೆ ಪಡೆದವರಿಗೆ ಕೊವೀಡ್ ನಿಂದ ದೂರವಿರಬಹುದು ಹಾಗಾಗಿ ಎಲ್ಲರೂ ಲಸಿಕೆ ಕಡ್ಡಾಯವಾಗಿ ಹಾಕಿಸಿಕೊಳ್ಳಬೇಕು.ಎಂದು ಡಾ.ಕೆ ಎಸ್ ರಡ್ಡಿ ಹೇಳಿದರು. ಇದೇ ಸಂದರ್ಭದಲ್ಲಿ ತಾಲೂಕ ಹಿರಿಯ ಆರೋಗ್ಯ ನಿರೀಕ್ಷಣ ಅಧಿಕಾರಿಯಾದ ಶ್ರೀ ಸೋಮಶೇಖರ್ ಮೇಟಿ ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ ಶ್ರೀಮತಿ ಶಿಲ್ಪಾ ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಆಶಾ ಕಾರ್ಯಕರ್ತೆಯರು ಹಾಜರಿದ್ದರು.

ಆರ್ ಶರಣಪ್ಪ ಗುಮಗೇರಾ
ಕೊಪ್ಪಳ


Leave a Reply