Koppal

ಕಸಾಪ ಚುನಾವಣೆ ನಡೆಸಲು ಒತ್ತಾಯ, ಕಸಾಪ ರಾಜ್ಯಾದ್ಯಕ್ಷ ಸ್ಥಾನದ ಅಭ್ಯರ್ಥಿ ಶೇಖರಗೌಡ ಮಾಲಿ ಪಾಟೀಲ್


ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯನ್ನು ಕೋವಿಡ್ ಎರಡನೇ‌ ಅಲೆಯ ಕಾರಣಕ್ಕೆ ಮುಂದೂಡಲಾಗಿದ್ದು ಈಗ ಚುನಾವಣೆ ನಡೆಸಲು ಕಾಲ ಪಕ್ವವಾಗಿದೆ. ಹೀಗಾಗಿ ಆದಷ್ಟು ಬೇಗ ಚುನಾವಣೆ ನಡೆಸಬೇಕು ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಸ್ಥಾನದ ಅಭ್ಯರ್ಥಿ ಶೇಖರಗೌಡ ಮಾಲಿಪಾಟೀಲ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಬುಧವಾರ ಸಂಜೆ ನಗರದ ಚಾಮರಾಜಪೇಟೆಯ ಚುನಾವಣಾ ಕಚೇರಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರನ್ನುದ್ದೇಶಿಸಿ ಅವರು ಮಾತಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು ಕನ್ನಡ ಸಾಹಿತ್ಯ ಪರಿಷತ್ತಿಗೆ ಚುನಾವಣೆ ನಡೆಸಬಹುದು ಎಂದು ಹೇಳಿರುವುದು‌ ಸ್ವಾಗತಾರ್ಹ. ನಮ್ಮ ಆಶಯಕ್ಕೆ ಬೆಂಬಲ ಸೂಚಿಸಿರುವ ಮಾನ್ಯ ಸಚಿವರನ್ನು ಅಭಿನಂದಿಸುವೆ ಎಂದು ಅವರು ಹೇಳಿದರು.
ಈಗಾಗಲೇ ಹುಬ್ಬಳ್ಳಿ – ಧಾರವಾಡ ಹೈಕೋರ್ಟ್ ಬೆಂಚಲ್ಲಿ ಕಸಾಪಕ್ಕೆ ಚುನಾವಣೆ ನಡೆಸಬೇಕೆಂಬ ಬಗ್ಗೆ ರಿಟ್ ಹಾಕಲಾಗಿದೆ ಎಂದು ಶೇಖರಗೌಡ ಸಭೆಗೆ ತಿಳಿಸಿದರು.
ಆಗಸ್ಟ್‌ 27, 28 ರಂದು ತುಮಕೂರು ಜಿಲ್ಲೆ, ದಾವಣಗೆರೆ, ಹರಿಹರಗಳಲ್ಲಿ ಆಜೀವ ಸದಸ್ಯರನ್ನು ಭೇಟಿ‌ಮಾಡಿ ಚರ್ಚಿಸಲಾಗುವುದು. ಬೆಂಗಳೂರಿನಲ್ಲಿ 28 ವಿಧಾನಸಭೆ ಘಟಕಗಳಲ್ಲೂ ಸೆಪ್ಟೆಂಬರ್ ತಿಂಗಳಲ್ಲಿ ಸಭೆಗಳನ್ನು ನಡೆಸಿ, ಮತದಾರರ ಭೇಟಿ ‌ಮಾಡಲಾಗುವುದು ಎಂದು ಅವರು ಪ್ರಕಟಿಸಿದರು.
ಸಭೆಯಲ್ಲಿ 60ಕ್ಕು ಹೆಚ್ಚು ಸದಸ್ಯರು ಭಾಗಿಯಾಗಿ ಅಭಿಪ್ರಾಯ ಹಂಚಿಕೊಂಡರು. ಸಾಹಿತಿ ಆರ್ ಜಿ ಹಳ್ಳಿ ನಾಗರಾಜ, ಬೆಂಗಳೂರು ನಗರ ಜಿಲ್ಲೆ ನಿಕಟಪೂರ್ವ ಅಧ್ಯಕ್ಷ ಟಿ.ತಿಮ್ಮೇಶ್, ಜಾನಪದ ‌ಅಕಾಡೆಮಿ ಮಾಜಿ ರಿಜಿಸ್ಟ್ರಾರ್ ಪರಡ್ಡಿ, ಕಿರುಚಿತ್ರ ನಿರ್ದೇಶಕ ಸಿರಿಗಂಧ‌ ಶ್ರೀನಿವಾಸಮೂರ್ತಿ, ಬೆಳ್ಳಿಚುಕ್ಕಿ ವೀರೇಂದ್ರ, ಸಾಹಿತಿಗಳಾದ ಕಾಂತರಾಜಪುರ ಸುರೇಶ, ವಸಂತಕುಮಾರ, ವಿಶ್ವನಾಥ್ ಗುಂಡಿಗೇರಿ, ಸಂಘಟಕರಾದ ಭಾರತಿ‌ ಪ್ರಕಾಶ, ಬಾಬಾಗೌಡ ಪಾಟೀಲ, ಶಿವಕುಮಾರ, ಪ್ರಭಾಕರ, ಮೈಕೋ ಮಂಜು, ಉಮೇಶ ಮೊದಲಾದವರು ಭಾಗವಹಿದ್ದರು.

ಆರ್ ಶರಣಪ್ಪ ಗುಮಗೇರಾ.
ಕೊಪ್ಪಳ


Leave a Reply