Koppal

ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಅಧ್ಯಕ್ಷರಾಗಿ ಶ್ರೀ ಶರಣಪ್ಪ ವಡಗೇರಿ ನೇಮಕ


ಕೊಪ್ಪಳ: ನಾಡೋಜ ಹೆಚ್.ಎಲ್.ನಾಗೇಗೌಡ ರಿಂದ,
೧೯೭೯ರಲ್ಲಿ ಸ್ಥಾಪನೆಯಾದ ಕರ್ನಾಟಕ ಜಾನಪದ ಪರಿಷತ್ ನಾಡಿನ ಮೂಲ ಜಾನಪದ ಕಲೆ ಕಲಾವಿದರ ಪರಂಪರೆಯ ಉಳಿವಿಗಾಗಿ ಶ್ರಮಿಸುತ್ತಿದೆ .
ದಿ. ಡಾ ಬಸವರಾಜ ಆಕಳವಾಡಿ ಅವರ ನಿಧನದಿಂದ ತೆರವಾದ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ನಾಡಿನ ಪ್ರಸಿದ್ಧ ಜಾನಪದ ಗಾಯಕರಾದ ಶ್ರೀ ಶರಣಪ್ಪ ವಡಗೇರಿಯವರನ್ನು ಕರ್ನಾಟಕ ಜಾನಪದ ಪರಿಷತ್ತಿನ ನೂತನ ಜಿಲ್ಲಾ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ಜಿಲ್ಲೆ ಸೇರಿದಂತೆ ಜಿಲ್ಲಾ ವ್ಯಾಪ್ತಿಯ ತಾಲೂಕ ಸಮಿತಿಗಳನ್ನು ರಚಿಸಿ, ಕಾರ್ಯಚಟುವಟಿಕೆ ಮುನ್ನಡೆಸಿಕೊಂಡು ಹೋಗುವಂತೆ ಶ್ರೀ ಟಿ. ತಿಮ್ಮೇಗೌಡ ರಾಜ್ಯ ಸಮಿತಿ ಅಧ್ಯಕ್ಷರು ಆದೇಶಿಸಿದ್ದಾರೆ.
ನೂತನ ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆಯಾದ
ಶ್ರೀ ಶರಣಪ್ಪ ವಡಗೇರಿ ಯವರಿಗೆ ಜಿಲ್ಲೆಯ ಎಲ್ಲಾ ಕಲಾವಿದರು, ಸಾಹಿತ್ಯಾಸಕ್ತರು ಅಭಿನಂದಿಸಿದ್ದಾರೆ….

ಆರ್ ಶರಣಪ್ಪ ಗುಮಗೇರಾ
ಕೊಪ್ಪಳ


Leave a Reply