Belagavi

ಬಿಜೆಪಿ ಅರಭಾವಿ ಮಂಡಲಯುವ ಮೋರ್ಚಾ ಕಾರ್ಯಕಾರಣಿ ಸಭೆ


ಮೂಡಲಗಿ: ಭಾರತೀಯ ಜನತಾ ಪಾರ್ಟಿ ಬೆಳಗಾವಿ ಗ್ರಾಮಾಂತರ ಜಿಲ್ಲೆಯ ಅರಭಾವಿ ಮಂಡಲ ಯುವ ಮೋರ್ಚಾ ಕಾರ್ಯಕಾರಣಿ ಸಭೆ ಮೂಡಲಗಿಯ ಬಿಜೆಪಿ ಕಛೇರಿಯಲ್ಲಿ ಜರುಗಿತು.
ಸಭೆಯ ಅಧ್ಯಕ್ಷತೆ ಮಂಡಲ ಯುವ ಮೋರ್ಚಾ ಅಧ್ಯಕ್ಷ ಪ್ರಮೋದ ನುಗ್ಗಾನಟ್ಟಿ ವಹಿಸಿದ್ದರು.ಸಭೆಯಲ್ಲಿ ಯುವಮೋರ್ಚಾ ರಾಜ್ಯ ಕಾರ್ಯದರ್ಶಿ ಈರಣ್ಣ ಅಂಗಡಿ ಮಾತನಾಡಿ ಪಕ್ಷದ ಸಂಘಟಾತ್ಮಕ ಚರ್ಚೆ ಮಾಡುತ್ತಾ ೭೫ನೇ ಸ್ವಾತಂತ್ರ ಮಹೋತ್ಸವದ ಅಮೃತ ಗಳಿಗೆಯಲ್ಲಿ ನಾವು ನೀವು ಪದಾಧಿಕಾರಿಗಳಾಗಿ ಕಾರ್ಯ ನಿರ್ವಹಿಸುತ್ತಿರುವದು ನಮ್ಮ ಸೌಭಾಗ್ಯ ಎಂದು ಹೆಳಿದರು.
ರಾಜ್ಯ ಯುವ ಮೋರ್ಚಾ ಉಪಾಧ್ಯಕ್ಷ ರಾಜಕುಮಾರ್ ಸಗಾಯಿ ಮಾತನಾಡಿ ಅರಬಾಂವಿ ಮಂಡಲ ಯುವಮೋರ್ಚಾ ಪದಾಧಿಕಾರಿಗಳ ಕಾರ್ಯ ಶ್ಲಾಘನಿಯವಾಗಿದೆ ಎಂದು ಹೇಳಿದರು.
ಬೆಳಗಾವಿ ಜಿಲ್ಲಾ ಗ್ರಾಮಾಂತರ ಯುವ ಮೋರ್ಚಾ ಅಧ್ಯಕ್ಷರು ಬಸವರಾಜ ನೇಸರಗಿ ಮಾತನಾಡಿ ಪ್ರತಿಯೋಬ್ಬ ಪದಾಧಿಕಾರಿಗಳು ನಮ್ಮ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಜನರಿಗೆ ಮುಟ್ಟುವಂತೆ ನಾವು ಕೆಲಸ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ರಾಜ್ಯ ಪದಾಧಿಕಾರಿಗಳಾಗಿ ಕಾರ್ಯಕ್ರಮದಲ್ಲಿ ಅರಬಾಂವಿ ಮಂಡಲ ಅಧ್ಯಕ್ಷ ಒಂದು ವರ್ಷ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ ಈರಣ್ಣ ಅಂಗಡಿ ರಾಜಕುಮಾರ ಸಗಾಯಿ ಹಾಗೂ ಬಸವರಾಜ ನೆಸರಗಿ ಅವರನ್ನು ಸನ್ಮಾನಿಸಿ ಗೌರವಿಸಿ, ಸಾಮೂಹಿಗ ರಕ್ಷಾಬಂಧನ ಕಾರ್ಯಕ್ರಮ ಆಚರಿಸಲಾಯಿತು.ಮಹಾದೇವ ಶಕ್ಕಿ, ಮಂಡಲ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಸಿದ್ದಣ್ಣ ದುರದುಂಡಿ ಕೇದಾರಿ ಭಸ್ಮೆ ಜಿಲ್ಲಾ ಉಪಾಧ್ಯಕ್ಷ ದುಂಡಪ್ಪ ನಂದಗಾವಿ, ಜಿಲ್ಲಾ ಕಾರ್ಯದರ್ಶಿ ಪ್ರವೀಣ್ ಕೊಪ್ಪದ, ಗುರು ಹಿರೇಮಠ, ಮದನ್ ದಾನನ್ನವರ ಆನಂದ ಮೂಡಲಗಿ ಬಸವರಾಜ ಕೋಣಿ ಪ್ರಭು ಹಡಪದ ಯುವಮೋರ್ಚಾ ಪದಾಧಿಕಾರಿಗಳು ಕಾರ್ಯಕಾರಣಿಸದಸ್ಯರು ಹಾಗೂ ಇನ್ನಿತರರು ಉಪಸ್ಥಿತರಿದ್ದರು.


Leave a Reply