Koppal

ರಾಜ್ಯ/ಕೊಪ್ಪಳ/ಬಿಜೆಪಿ ಪಕ್ಷದ ತಾಲೂಕಾ ಎಸ್. ಸಿ. ಮೋರ್ಚಾದ ಕಾರ್ಯಕಾರಣಿ ಸಭೆ


ಕುಷ್ಟಗಿ:ದಿನಾಂಕ 22:08:2021 ರವಿವಾರದಂದು ಬೆಳಿಗ್ಗೆ 10-30ಕ್ಕೆ ಕುಷ್ಟಗಿ ತಾಲೂಕ ಭಾರತೀಯ ಜನತಾ ಪಾರ್ಟಿಯ ಎಸ್. ಸಿ.ಮೋರ್ಚಾದ 2ನೇ ವರ್ಷದ ಕಾರ್ಯಕಾರಣಿ ಸಭೆಯನ್ನು , ಕುಷ್ಟಗಿ ಪಟ್ಟಣದ ತಾವರಗೇರಾ ರಸ್ತೆಯಲ್ಲಿ ಬರುವ ರವಿಕುಮಾರ್ ಹಿರೇಮಠ್ ಅವರ ಲೇಔಟ್ ನಲ್ಲಿ ಕಾರ್ಯಕಾರಣಿ ನಡೆಯಿತು, ಕುಷ್ಟಗಿ ಮಂಡಲದ ಎಸ್ ಸಿ ಮೋರ್ಚಾದ ಅದ್ಯಕ್ಷರರಾದ ರವಿಕುಮಾರ್ ವಣಿಗೇರಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಜಿಲ್ಲಾಧ್ಯಕ್ಷರಾದ ಸಣ್ಣ ಕನಕಪ್ಪ ಚಲುವಾದಿ. ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸುಬಾಸ್ ಮದಗಟ್ಟಿ ಮತ್ತು ಗಣೇಶ್ ವರತಟ್ಟನಾಳ. ಕೊಪ್ಪಳ ಜಿಲ್ಲಾ ಎಸ್ ಸಿ ಮೋರ್ಚಾದ ಪ್ರಭಾರಿಗಳಾದ ಶ್ರೀಮತಿ ವೀಣಾ ಬನ್ನಿಗೋಳ. ,ಎಸ್ ಸಿ ಮೋರ್ಚಾದ ರಾಜ್ಯ ಉಪಾಧ್ಯಕ್ಷರಾದ ಈಶಪ್ಪ ಹಿರೇಮನಿ , ರಾಜ್ಯ ಕಾರ್ಯಕಾರಣಿ ಸದಸ್ಯರಾದ ಕನಕಮೂರ್ತಿ ಚಲವಾದಿ , ಕುಷ್ಟಗಿ ಮಂಡಲದ ಅಧ್ಯಕ್ಷರಾದ ಬಸವರಾಜ ಹಳ್ಳೂರ್, .ಪ್ರದಾನ ಕಾರ್ಯದರ್ಶಿಗಳಾದ ಚಂದ್ರಕಾಂತ ವಡ್ಡಿಗೆರಿ. ಸೇರಿದಂತೆ ಪಕ್ಷದ ಹಲವು ಮುಖಂಡರು ಭಾಗವಹಿಸಿದ್ದರು.ಇದೇ ಸಂದರ್ಭದಲ್ಲಿ ಬಿಜೆಪಿ ಎಸ್ ಸಿ ಮೋರ್ಚಾದ ತಾಲೂಕ ಪ್ರಧಾನ ನೂತನ ಕಾರ್ಯದರ್ಶಿಯಾದ ಮಾರುತಿ ಹಲಗಿ ಯವರನ್ನು ಸನ್ಮಾನಿಸಿದರು.

ಆರ್ ಶರಣಪ್ಪ ಗುಮಗೇರಾ
ಕೊಪ್ಪಳ.


Leave a Reply