karanataka

ಹಿರಿಯ ಪತ್ರಕರ್ತ ಗುಡಿಹಳ್ಳಿ ನಾಗರಾಜ್ ನಿಧನ


ಬೆಂಗಳೂರು : ಹಿರಿಯ ಪತ್ರಕರ್ತ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಪ್ರಜಾವಾಣಿಯ ಮಾಜಿ ಉಪ ಸಂಪಾದಕ , ನಾಟಕಕಾರ ಗುಡಿಹಳ್ಳಿ ನಾಗರಾಜ್ ಇಂದು ನಿಧನರಾದರು .

ಕೆಲ ಸಮಯದಿಂದ ಅಸ್ವಸ್ಥರಾಗಿದ್ದ ಅವರು ಬೆಂಗಳೂರಿನ ತಮ್ಮ ನಿವಾಸದಲ್ಲಿ ಇಂದು ನಿಧನರಾದರು .
ಅವರು ತಮ್ಮ ಹಿಂದೆ ಪತ್ನಿ ಇಬ್ಬರು ಮಕ್ಕಳನ್ನು ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ .
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಅಧ್ಯಕ್ಷ ರಾಗಿದ್ದ ಅವರು ನಾಟಕ ಅಕಾಡೆಮಿಯ ಸದಸ್ಯರೂ ಆಗಿದ್ದರು . ರಂಗ ಚಟುವಟಿಕೆಗಳ ಬಗ್ಗೆ ಅಪಾರವಾದ ಆಸಕ್ತಿ ಹೊಂದಿದ್ದ ಅವರು ನಿವೃತ್ತರಾದ ನಂತರ ರಂಗ ಚಟುವಟಿಕೆಗಳಿಗೆ ಸೀಮಿತ ಗೊಂಡಂತೆ ” ರಂಗ ನೇಪಥ್ಯ “ಎಂಬ ನಿಯತಕಾಲಿಕೆಯನ್ನು ಅವರು ನಡೆಸುತ್ತಿದ್ದರು .


Leave a Reply