Belagavi

ಕಬ್ಬಿನ ಬೆಳೆಯಲ್ಲಿ ಗೊಣ್ಣೆ ಹುಳುವಿನ ನಿರ್ವಹಣೆ ಕುರಿತು ತರಬೇತಿ ಕಾರ್ಯಕ್ರಮ


ಸವದತ್ತಿ: ಕೃಷಿ ಇಲಾಖೆ ಸವದತ್ತಿ ಹಾಗೂ ಕೃಷಿ ವಿಶ್ವವಿದ್ಯಾಲಯ ಧಾರವಾಡ ಇವರ ಸಂಯುಕ್ತ ಆಶ್ರಯದಲ್ಲಿ ಸಿಂಗಾರ ಕೊಪ್ಪ ಗ್ರಾಮದಲ್ಲಿ ಕಬ್ಬಿನ ಬೆಳೆಯಲ್ಲಿ ಗೊಣ್ಣೆ ಹುಳುವಿನ ನಿರ್ವಹಣೆ ಕುರಿತು ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮವನ್ನು ವಿಧಾನಸಭೆ ಉಪಸಭಾಧ್ಯಕ್ಷರಾದ ಆನಂದ ಚಂ. ಮಾಮನಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು
ರೈತರು ಆತಂಕಪಡುವ ಅಗತ್ಯವಿಲ್ಲ ಕಬ್ಬು ಬೆಳೆಗೆ ಗೊಣ್ಣೆ ಹುಳುಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕೃಷಿ ವಿಶ್ವವಿದ್ಯಾಲಯ ಧಾರವಾಡ ಇವರು ಗೊತ್ತೆ ಹುಳುವಿನ ನಿರ್ವಹಣೆ ಕುರಿತು ಮಾಹಿತಿ ನೀಡಿಲಿದ್ದಾರೆ ಮುಂದಿನ ದಿನಗಳಲ್ಲಿ ಗೊಣ್ಣೆ ಹುಳು ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.

ನಂತರ ಮಾತನಾಡಿದ ಡಾ: ಎಸ್ ತಿಪ್ಪಣ್ಣ ಹಿರಿಯ ವಿಜ್ಞಾನಿಗಳು ಕೃಷಿ ವಿಶ್ವವಿದ್ಯಾಲಯ ಧಾರವಾಡ ರವರು ಕಬ್ಬಿನಲ್ಲಿ ಬರುವ ಗೊಣ್ಣೆ ಹುಳು ನಿರ್ವಹಣೆ ಕುರಿತು ರೈತರಿಗೆ ಮಾಹಿತಿ ನೀಡಿದರು.

ಅದರಂತೆ ಡಾ: ಪಿ. ಎಸ್. ಹೂಗಾರ ಸಹ ವಿಸ್ತರಣಾ ನಿರ್ದೇಶಕರು ಕೃಷಿ ವಿಶ್ವವಿದ್ಯಾಲಯ ಧಾರವಾಡ ರವರು ಇತರೆ ಬೆಳಗೆ ಬರುವ ರೋಗ ಹಾಗೂ ಕೀಟಗಳ ಕುರಿತು ಮಾಹಿತಿ ನೀಡಿದರು.

ಎಚ್. ಡಿ. ಕೊಳೇಕರ್ ಉಪ ಕೃಷಿ ನಿರ್ದೇಶಕರು ಹಾಗೂ ಆತ್ಮ ಯೋಜನೆ ಯೋಜನಾ ನಿರ್ದೇಶಕರು ಕಾರ್ಯಕ್ರಮದ ಕುರಿತು ಪ್ರಾಸ್ತವಿಕ ನುಡಿ ಹೇಳಿದರು.

ಸಹಾಯಕ ಕೃಷಿ ನಿರ್ದೇಶಕರು, ಕೃಷಿ ಅಧಿಕಾರಿಗಳು, ತಾಲೂಕು ತಾಂತ್ರಿಕ ವ್ಯವಸ್ಥಾಪಕರು ಹಾಗೂ ಇಲಾಖೆಯ ಎಲ್ಲಾ ಅಧಿಕಾರಿಗಳು ಮತ್ತು ರೈತರು ಇನ್ನಿತರರು ಭಾಗವಹಿಸಿದ್ದರು.

(ವರದಿ ಈರಣ್ಣಾ ಹುಲ್ಲೂರ ಸವದತ್ತಿ)


Leave a Reply