Belagavi

ಕಾರ್ಮಿಕ ಇಲಾಖೆ ಮಾಹಿತಿ ಕಾರ್ಮಿಕರು ಪಡೆಯುವುದು ಅತ್ಯವಶ್ಯ


ಸವದತ್ತಿ: ಸರಕಾರ ಕಾರ್ಮಿಕರ ಅಭಿವೃದ್ಧಿಗಾಗಿ ಹಲವಾರು ಸೌಲಭ್ಯಗಳನ್ನು ನೀಡಿದೆ ಆದರೆ ಆ ಸೌಲಭ್ಯಗಳನ್ನು ಎಲ್ಲಿ ನೋಂದಾಯಿತ ಕಟ್ಟಡ ಕಾರ್ಮಿಕರು ಪಡೆಯುವುದು ಅವಶ್ಯವಾಗಿದೆ. ಶಾಸಕ ಹಾಗೂ ತಹಶೀಲ್ದಾರ ಅನುಪಸ್ಥಿತಿಯಲ್ಲಿ

ಕಾರ್ಮಿಕ ನಿರೀಕ್ಷಕರಾದ ರಮೇಶ ಸಿಂದಗಿ ಇವರು ಸವದತ್ತಿ ತಾಲೂಕಿನ ತಾಲೂಕಾ ಪಂಚಾಯತ ಸಭ ಭವನದಲ್ಲಿ ಸಸಿಗೆ ನೀರು ಹಾಕುವುದರ ಮೂಲಕ ಕಾರ್ಮಿಕ ಅದಾಲತಗೆ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು ಕಟ್ಟಡ ಕಾರ್ಮಿಕರಿಗೆ ಸಂಬಂಧಿಸಿದ ಬಾಕಿ ಅರ್ಜಿ ವಿಲೇವಾರಿಯ ಕಾರ್ಮಿಕ ಅದಾಲತ್ “ಈ ಕಾರ್ಯಕ್ರಮದಲ್ಲಿ ಕಾರ್ಮಿಕರ ಅರ್ಜಿಗಳಾದ ಮದುವೆ ಸಹಾಯಧನ, ಶೈಕ್ಷಣಿಕ ಸಹಾಯಧನ, ಪಿಂಚಣಿ ಸಹಾಯಧನದಂತಹ ಸೌಲಭ್ಯಗಳನ್ನು ಜಾರಿಗೊಳಿಸಿದೆ ಆದರೆ ಅವುಗಳ ಉಪಯೋಗ ಕೆಲವು ಕಾರ್ಮಿಕರು ಮಾತ್ರ ಪಡೆದುಕೊಳ್ಳುತ್ತಿದ್ದಾರೆ ಈ ಸೌಲಭ್ಯಗಳನ್ನು ಎಲ್ಲ ನೊಂದಾಯಿತ ಕಟ್ಟಡ ಕಾರ್ಮಿಕರು ಪಡೆದುಕೊಳ್ಳುವುದು ಅವಶ್ಯ. ಹಾಗೂ ಕೆಲವು ಕಾರ್ಮಿಕರು ಅರ್ಜಿ ಹಾಕಿದರು ಸಹ ಆರ್ಜೆ ವಿಲೇವಾರಿಯಾಗದೆ ಸಿಗಬೇಕಾದ ಸೌಲಭ್ಯಗಳು ದೊರಕದೆ ವಂಚಿತರಾಗಿ ಕಾರ್ಮಿಕ ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ.

ಇಂತಹ ಪರಿಸ್ಥಿತಿ ಕಾರ್ಮಿಕರಿಗೆ ಬರಬಾರದೆಂಬ ಉದ್ದೇಶದಿಂದ ಕಾರ್ಮಿರಿದ್ದಲ್ಲಿ ಕಾರ್ಮಿಕ ಇಲಾಖೆ ಎಂಬುದನ್ನು ತಿಳಿಸಲು ಸವದತ್ತಿ ತಾಲೂಕಿನ ತಾಲೂಕಾ ಪಂಚಾಯತ ಸಭಾ ಭವನದಲ್ಲಿ ಕಟ್ಟಡ ಕಾರ್ಮಿಕರ ಕಾರ್ಮಿಕ ಅದಾಲತ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಅದರ ಜೊತೆಯಲ್ಲಿ ಸಂಘಟಿತ, ಅಸಂಘಟಿತ ಕಾರ್ಮಿಕರೆಲ್ಲರೂ ಕಾಲ ಕಾಲಕ್ಕೆ ಸದಸ್ಯತ್ವ ನವೀಕರಣ ಮಾಡಿಸಿಕೊಳ್ಳಬೇಕು.

ಕಾರ್ಮಿಕ ಇಲಾಖೆಯಲ್ಲಿ ತಮ್ಮ ಹೆಸರು ನೋಂದಣಿ ಮಾಡಿಕೊಳ್ಳುವ ಮೂಲಕ ಸದಸ್ಯತ್ವ ಪಡೆದುಕೊಂಡಲ್ಲಿ ಸರಕಾರದಿಂದ ಸಿಗುವ ನಾನಾ ಸೌಲಭ್ಯ ಪಡೆದುಕೊಳ್ಳಲು ಸಹಕಾರಿ ಆಗಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾರ್ಮಿಕ ಇಲಾಖೆ ಸಿಬ್ಬಂದಿಯರು ಮತ್ತು ಕಾರ್ಮಿಕರು ಉಪಸ್ಥಿತರಿದ್ದರು.

(ವರದಿ ಈರಣ್ಣಾ ಹುಲ್ಲೂರ ಸವದತ್ತಿ)


Leave a Reply