Koppal

ನೂತನ ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾಧ್ಯಕ್ಷರಿಗೆ ಕುಷ್ಟಗಿ ತಾಲೂಕಿನ ಕಲಾವಿದರಿಂದ ಸನ್ಮಾನ


 

 

 

ಕುಷ್ಟಗಿ:   ಎಲ್.ಎಚ್.ನಾಗೆಗೌಡ ನಾಡೋಜ ಇವರಿಂದ ಸ್ಥಾಪನೆಯಾದ ರಾಜ್ಯ ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು ಇವರ ಆದೇಶದ ಹಿನ್ನಲೆ ಕೊಪ್ಪಳ ಜಿಲ್ಲಾ ನೂತನ ಜನಪದ ಪರಿಷತ್ತು ಅಧ್ಯಕ್ಷರಾಗಿ ಆಯ್ಕೆಯಾದ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಶರಣಪ್ಪ ವಡಗೇರಿ ಇವರಿಗೆ ಕುಷ್ಟಗಿ ತಾಲೂಕು ಕಲಾವಿದರ ಬಳಗದಿಂದ ಸ‌ನ್ಮಾನಿಸಿ ಅಭಿನಂದಿಸಲಾಯಿತು.

ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಕೊಪ್ಪಳ ಜಿಲ್ಲಾ ಜನಪದ ಪರಿಷತ್ತು ಅಧ್ಯಕ್ಷ ಶರಣಪ್ಪ ವಡಗೇರಿ ಮಾತನಾಡಿ ಯಾರು ಕಲೆ ಮತ್ತು ಸಂಸ್ಕೃತಿಯನ್ನು ನಂಬಿ ಕಲಾವಿದನಾಗಿ ಬದುಕುತ್ತಿದ್ದಾನೆ ಅಂತಹ ಕಲಾವಿದನನ್ನು ಬೆಳಕಿಗೆ ತಂದು ಹಗಲಿರುಳು ಕಲಾವಿದರ ಕಲೆಗೆ ಬೆಲೆ ಕೊಟ್ಟು ಶ್ರಮಿಸುವುದಾಗಿ ಮತ್ತು ಜಾ ಹೇಳಿದರು.

ಈ ಸಂದರ್ಭದಲ್ಲಿ ಕಲಾವಿದರಾದ ದೇವೇಂದ್ರ ಕುಮಾರ ಕಮ್ಮಾರ, ದೊಡ್ಡಪ್ಪ ಕೈಲವಾಡಗಿ, ಸುಕಮುನಿ ಗಡಗಿ, ಶಿವರಾಯಪ್ಪ ಚೌಡ್ಕಿ, ಮರಿಸ್ವಾಮಿ ಕನಕಗಿರಿ, ಬಸವರಾಜ ಹುಚನೂರ, ನಾಗಪ್ಪ ಜರಗಡ್ಡಿ, ಪವಾಡೆಪ್ಪ ಚೌಡ್ಕಿ, ಸಿದ್ದಪ್ಪ ಕಲಾಲಬಂಡಿ, ಶರಣಪ್ಪ ಬನ್ನಿಗೋಳ ಸೇರಿದಂತೆ ಹಲವಾರು ಉಪಸ್ಥಿತರಿದ್ದರು.

ಆರ್ ಶರಣಪ್ಪ ಗುಮಗೇರಾ
ಕೊಪ್ಪಳ


Leave a Reply