karanataka

ಹಸ್ತಪ್ರತಿ ತರಬೇತಿ ಮತ್ತು ಜಾಗೃತಿ ಶಿಬಿರದ ಸಮಾರೋಪ ಸಮಾರಂಭ


ಯರಗಟ್ಟಿ: ಸ್ಥಳೀಯ ಯರಗಟ್ಟಿಯಲ್ಲಿ ಹಸ್ತಪ್ರತಿ ತರಬೇತಿ ಮತ್ತು ಜಾಗೃತಿ ಶಿಬಿರದ ಸಮಾರೋಪ ಸಮಾರಂಭವನ್ನು ಆಯೋಜಿಸಲಾಗಿದೆ.

ಈ ಶಿಬಿರವನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿಶಾಸ್ತ್ರ ವಿಭಾಗ, ಯರಗಟ್ಟಿ ಘಟಕದ ಕನ್ನಡ ಸಾಹಿತ್ಯ ಪರಿಷತ್ತು ವಿಭಾಗ ಹಾಗೂ ಶ್ರೀ ಸಿ.ಎಮ್.ಮಾಮನಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಮಾರೋಪ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು

ಸಮಾರೋಪ ಸಮಾರಂಭದ ನುಡಿಗಳನ್ನಾಡಿದ ಡಾ: ಗುರುಪಾದ ಮರಿಗುದ್ದಿ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಹಸ್ತಪ್ರತಿ ತನ್ನದೇ ಆದಂತಹ ಛಾಪನ್ನು ಮೂಡಿಸಿದೆ ಹಸ್ತಪ್ರತಿಯ ಸಂಪೂರ್ಣ ಮಾಹಿತಿಯನ್ನು ಈ ಶಿಬಿರದಲ್ಲಿ ಭಾಗವಹಿಸಿ ತಿಳಿದುಕೊಳ್ಳಲು ಹೇಳಿದರು.

ನಂತರ ಮಾತನಾಡಿದ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಹಸ್ತಪ್ರತಿ ಶಾಸ್ತ್ರ ವಿಭಾಗವನ್ನು ಪ್ರಾರಂಭಿ ಹಸ್ತಪ್ರತಿಯಲ್ಲಿ ಪ್ರಾಚೀನ ಕನ್ನಡ ಭಾಷೆ ಸಾಹಿತ್ಯ ಸಂಸ್ಕೃತಿ ಮುಂತಾದ ಸಂಗತಿಗಳನ್ನು ತಿಳಿದುಕೊಳ್ಳುವಲ್ಲಿ ನೆರವಾಗುತ್ತದೆ ಎಂದು ಹೇಳಿದರು.

ನಂತರ ಶಿಬಿರಾರ್ಥಿಗಳಿ ಪ್ರಮಾಣ ಪತ್ರ ವಿತರಿಸಲಾಯಿತು. ಹಾಗೂ ಶಿಬಿರಾರ್ಥಿಗಳು ತಮ್ಮ ಮೂರು ದಿನಗಳ ಅನುಭವ ಹಂಚಿಕೊಂಡರು.

ಈ ಸಂದರ್ಭದಲ್ಲಿ ಕಸಾಪ ಜಿಲ್ಲಾ ಕಾರ್ಯದರ್ಶಿಯಾದ ಎಂ. ವೈ. ಮೆಣಸಿನಕಾಯಿ, ಹಸ್ತಪ್ರತಿ ವಿಭಾಗ ನಿರ್ದೇಶಕರಾದ ಡಾ: ವೀರೆಶ ಬಡಿಗೇರ, ಡಾ: ಎಚ್. ಬಿ. ಕೋಲ್ಕಾರ, ಡಾ: ಎಸ್. ಎಸ್. ಅಂಗಡಿ, ಕಸಾಪ ತಾಲೂಕಾಧ್ಯಕ್ಷರಾದ ರಾಜೇಂದ್ರ ವಾಲಿ, ಪ್ರಾಂಶುಪಾಲರಾದ ಮಹಾಂತೇಶ ತುಂಬಾಕೆ, ಸಹಾಯಕ ಪ್ರಾಧ್ಯಾಪಕರಾದ ರಾಜೇಶೇಖರ ಬಿರಾದಾರ, ಬಸವರಾಜ ಬೀಳಗಿ, ಕಲ್ಲಪ್ಪ ಹಂದಿಗುಂದ ಮತ್ತು ಯರಗಟ್ಟಿ, ರಾಮದುರ್ಗ, ಬೈಲಹೊಂಗಲ, ನೇಸರಗಿ, ಗೋಕಾಕ ಕಾಲೇಜುಗಳ ಶಿಬಿರಾರ್ಥಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


Leave a Reply