Belagavi

ಜಿಲ್ಲಾಧಿಕಾರಿಗಳಿಂದ ನಗರದ ವಿವಿಧ ಸ್ಥಳಗಳ, ಕಾಮಗಾರಿಗಳ ಪ್ರಗತಿ ಪರಿಶೀಲನೆ, ಪರಿವೀಕ್ಷಣೆ


ವಿಜಯಪುರ :ಅ.೨೮. : ಜಿಲ್ಲಾಧಿಕಾರಿ ಪಿ.ಸುನೀಲ ಕುಮಾರ್ ಅವರು ನಿನ್ನೆ ವಿಜಯಪುರ ಮಹಾನಗರಪಾಲಿಕೆ ಆಯುಕ್ತರ ಜೊತೆ ವಿಜಯಪುರ ನಗರದ ವಿವಿಧ ಸ್ಥಳಗಳ ಪರಿವೀಕ್ಷಣೆ ಕೈಗೊಂಡು ಚಾಲನೆಯಲ್ಲಿರುವ ಕಾಮಗಾರಿಗಳ ಪ್ರಗತಿಯನ್ನು ಪರಿಶೀಲಿಸಿದರು.

ಅಂದು ಮೊದಲಿಗೆ ಬೆಳಿಗ್ಗೆ ೭:೦೦ ಘಂಟೆಗೆ ನಗರದ ಜುಮ್ಮಾ ಮಸೀದಿ ಹತ್ತಿರ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ವಿಜಯಪುರ ವತಿಯಿಂದ ಕೈಗೊಂಡ ಕುಡಿಯುವ ನೀರಿನ ಕಾಮಗಾರಿಗಾಗಿ ಅಗೆದ ರಸ್ತೆಯ ಭಾಗವನ್ನು ಒಂದು ವಾರದಲ್ಲಿ ಪುನರ ಸ್ಥಾಪಿಸಿ ಸಾರ್ವಜನಿಕರ ಮತ್ತು ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡಲು ಜಲಮಂಡಳಿ ಅಧಿಕಾರಿಗಳಿಗೆ ಸೂಚಿಸಿದರು ಹಾಗೂ ಪರಿಸರ ಸ್ವಚ್ಛತೆಗಾಗಿ ಅಗತ್ಯ ಕ್ರಮ ಕೈಗೊಳ್ಳಲು ಮಹಾನಗರಪಾಲಿಕೆ ಆಯುಕ್ತರಿಗೆ ಸೂಚಿಸಿದರು.

ನಂತರ ನಗರದ ಮೀನಾಕ್ಷಿ ಚೌಕ (ಹುತಾತ್ಮರ ವೃತ್ತ) ದಲ್ಲಿ ಮಹಾನಗರಪಾಲಿಕೆಯ ವತಿಯಿಂದ ೧೪ನೇ ಹಣಕಾಸು ಆಯೋಗದ ಅನುದಾನದಲ್ಲಿ ಕೈಗೊಂಡ ಸಿ.ಸಿ ರಸ್ತೆ ನಿರ್ಮಾಣ ಕಾಮಗಾರಿಯನ್ನು ವೀಕ್ಷಿಸಿ ಒಳಚರಂಡಿ ಮ್ಯಾನಹೋಲ್‌ಗಳನ್ನು ಗುಣಮಟ್ಟದ ಹಾಗೂ ರಸ್ತೆಯ ಮಟ್ಟಕ್ಕೆ ನಿರ್ಮಿಸಲು ಪಾಲಿಕೆ ಅಭಿಯಂತರರುಗಳಿಗೆ ಸೂಚಿಸಿದರು.

ಅದರಂತೆ ಬಬಲೇಶ್ವರ ನಾಕಾದ ಹತ್ತಿರ ಕಾಮಗಾರಿ ನಡೆಯುವ ಸ್ಥಳದಲ್ಲಿ ಗುಂಪಾಗಿ ಬಿದ್ದಿರುವ ಮಣ್ಣನ್ನು ತೆರವುಗೊಳಿಸಲು ಪಾಲಿಕೆ ಸಿಬ್ಬಂದಿಗೆ ಸೂಚಿಸಿದರು. ಜೋಡಗುಮ್ಮಟ ಹತ್ತಿರದಲ್ಲಿ ಅಲ್ಪಸಂಖ್ಯಾತರ ಪ್ರದೇಶಗಳ ಅಭಿವೃದ್ಧಿ ಅನುದಾನದಲ್ಲಿ ನಿರ್ಮಿಸಲಾಗುತ್ತಿರುವ ರಸ್ತೆಯ ಕಾಮಗಾರಿಯನ್ನು ವೀಕ್ಷಿಸಿದರು ಹಾಗೂ ಸಿ.ಸಿ ರಸ್ತೆ ಕಾಮಗಾರಿ ಕೈಗೊಳ್ಳುವ ಪೂರ್ವದಲ್ಲಿ ಒಳಚರಂಡಿ ಸಂಪರ್ಕವನ್ನು ಪಡೆಯಲು ಸಾರ್ವಜನಿಕರಿಗೆ ತಿಳಿಸಿದರು.

ನಂತರ ಗೋದಾವರಿ ಹೋಟೆಲ್‌ದಿಂದ ಇಟಗಿ ಪೆಟ್ರೋಲ್ ಪಂಪವರೆಗೆ ಲೋಕೋಪಯೋಗಿ ಇಲಾಖೆಯಿಂದ ನಿರ್ಮಿಸಲಾಗುತ್ತಿರುವ ರಸ್ತೆ ಹಾಗೂ ತೆರೆದ ಚರಂಡಿ ಕಾಮಗಾರಿಯನ್ನು ವೀಕ್ಷಿಸಿದರು.

ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಬೇರೆ ಯಾವುದೇ ಕಾಮಗಾರಿ ಅನುಷ್ಠಾನ ಮಾಡುವ ಮುನ್ನ ಸಂಬAಧಿಸಿದ ಇಲಾಖೆಗಳು ಜಿಲ್ಲಾಡಳಿತ ಮತ್ತು ಮಹಾನಗರಪಾಲಿಕೆಗೆ ತಿಳಿಸಲು ಸೂಚಿಸಿದರು. ಜಿಲ್ಲಾಧಿಕಾರಿಗಳ ಪರಿವೀಕ್ಷಣೆ ಸಮಯದಲ್ಲಿ ಮಹಾನಗರಪಾಲಿಕೆ ಆಯುಕ್ತರಾದ ಶ್ರೀ ವಿಜಯಕುಮಾರ ಮೆಕ್ಕಳಕಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಕಾರ್ಯಪಾಲಕ ಅಭಿಯಂತರರಾದ ಶ್ರೀ.ಎಸ್ ಎ ಇನಾಮದಾರ, ಪಾಲಿಕೆಯ ಕಾರ್ಯನಿರ್ವಾಹಕ ಅಭಿಯಂತರರುಗಳಾದ ಶ್ರೀ. ಡಿ ಎಚ್ ಕಿರೇಸೂರ ಮತ್ತು ಶ್ರೀ ವಿಶ್ಚಲ ಎಸ್ ಹೊನ್ನಳ್ಳಿ, ಜಲಮಂಡಳಿ ಕಾರ್ಯನಿರ್ವಾಹಕ ಅಭಿಯಂತರರಾದ ಶ್ರೀ. ಎಸ್ ಎಸ್ ಪಟ್ಟಣಶೆಟ್ಟಿ, ಮಹಾನಗರಪಾಲಿಕೆ ಮತ್ತು ಜಲಮಂಡಳಿ ಅಭಿಯಂತರರುಗಳು ಹಾಗೂ ಸಿಬ್ಬಂಧಿಗಳು ಉಪಸ್ಥಿತರಿದ್ದರು.


Leave a Reply