Belagavi

ಬೆಳಗಾವಿಯಲ್ಲಿ ಗೆಲವು ಸಾಧಿಸುವುದು ಸಾಮಾನ್ಯ ಮತದಾರ: ಆಪ್ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಉತ್ತಮ ಸಾಧನೆಯ ಭರವಸೆ


ಬೆಳಗಾವಿ ಆಗಸ್ಟ್ ೩೦: ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳ ಸ್ಪರ್ಧೆಯಿಂದ ಬೆಳಗಾವಿ ಮಹಾನಗರ ಪಾಲಿಕೆ ಮತದಾರರಿಗೆ ಹೊಸತೊಂದು ಅವಕಾಶ ದೊರೆತಂತಾಗಿದೆ. ಜೆಸಿಬಿ ಪಕ್ಷಗಳ ಲಂಚಕೋರ ಹಾಗೂ ಅಫರಾಧಿ ಹಿನ್ನಲೆಯುಳ್ಳ ಅಭ್ಯರ್ಥಿಗಳಿಂದ ಬೇಸತ್ತಿರುವ ಮತದಾರರು ನಮ್ಮ ಪಕ್ಷದ ಬೆಂಬಲಕ್ಕೆ £ಲ್ಲಲಿದ್ದಾರೆ. ಈ ಮೂಲಕ ಬೆಳಗಾವಿಯ ಮತದಾರರು ಗೆಲವು ಸಾಧಿಸಲಿದ್ದಾರೆ ಎಂದು *ಆಮ್ ಆದ್ಮಿ ಪಕ್ಷದ ರಾಜ್ಯ ಸಂಚಾಲಕರಾದ ಪೃಥ್ವಿ ರೆಡ್ಡಿ* ಅಭಿಪ್ರಾಯಪಟ್ಟರು.
ಇಂದು ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಷ್ಟು ದಿನಗಳ ಕಾಲ ನಡೆದಂತಹ ಚುನಾವಣೆಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಆಂತರಿಕ ಹೊಂದಾಣಿಕೆಯ ಮೂಲಕ ಜನರನ್ನು ಮೂರ್ಖರನ್ನಾಗಿಸುತ್ತಿದ್ದವು. ಅಲ್ಲದೆ ಇದೇ ಹೊಂದಾಣಿಕೆಯನ್ನು ಜನರ ತೆರಿಗೆ ದುಡ್ಡನ್ನು ಲೂಟಿ ಮಾಡುವಲ್ಲಿಯೂ ಮುಂದುವರೆಸುತ್ತಿದ್ದರು. ಈ ಬಾರಿ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಸ್ಪರ್ಧೆಯಿಂದಾಗಿ, ಸಾಮಾನ್ಯ ಮತದಾರರ ಹಲವಾರು ವಿಜಯಗಳನ್ನು ಈಗಾಗಲೇ ಪಡೆದುಕೊಂಡಿದ್ದಾರೆ ಎಂದು ಹೇಳಿದರು.
ಮೊದಲ ಬಾರಿಗೆ ಈ ಚುನಾವಣೆಯನ್ನ ಧರ್ಮ ಹಾಗೂ ಜಾತಿಯನ್ನು ಬಿಟ್ಟು ಜನರು ಎದುರಿಸುತ್ತಿರುವ ಮೂಲಭೂತ ಸೌಕರ್ಯಗಳ ಕೊರತೆಯ ವಿಷಯಗಳ ಮೇಲೆ ಒತ್ತು £Ãಡಲಾಗುತ್ತಿದೆ. ಜೆಸಿಬಿ ಪಕ್ಷಗಳು ಈ ಬಾರಿ ತಮ್ಮ ಪಕ್ಷದ ಚಿನ್ಹೆಯ ಮೇಲೇ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸುವಂತಾಗಿದ್ದು, ಮುಂದಿನ ದಿನಗಳಲ್ಲಿ ಉತ್ತರದಾಯಿತ್ವ ತೋರಿಸಲೇಬೇಕಾದ ಅ£ವಾರ್ಯತೆ ಅವರಿಗೆ ಎದುರಾಗಿದೆ. ಅಲ್ಲದೆ, ಕೇವಲ ಶ್ರೀಮಂತ ಹಾಗೂ ಕುಟುಂಬ ರಾಜಕಾರಣಕ್ಕೆ ಒತ್ತು £Ãಡಲಾಗುತ್ತಿದ್ದರಲ್ಲಿ ಬದಲಾವಣೆಯಾಗಿದ್ದು ಮೊದಲ ಬಾರಿಗೆ ಸಾಮಾನ್ಯ, ಯುವ ಹಾಗೂ ಮಧ್ಯಮ ವರ್ಗದ ಜನರಿಗೆ ಟಿಕೆಟ್ ದೊರೆಯುವಂತಾಗಿದೆ ಎಂದು ಹೇಳಿದರು.
*ಬೆಂಗಳೂರು ಘಟಕದ ಉಪಾಧ್ಯಕ್ಷ ಸುರೇಶ್ ರಾಥೋಡ್ ಮಾತನಾಡಿ*, ಈ ಬಾರಿ ಎಲ್ಲಾ ಪಕ್ಷಗಳು ಬೆಳಗಾವಿ ಪಕ್ಷದ ಅಭಿವೃದ್ದಿಗಾಗಿ ತಮ್ಮ ಪ್ರಣಾಳಿಕೆಯನ್ನು ಬಿಡುಗಡೆ ಮಾಡುವಂತಹ ಪರಿಸ್ಥಿತಿಯನ್ನು £ರ್ಮಿಸಿದ್ದು ಆಪ್ ಪಕ್ಷದ ಹೆಗ್ಗಳಿಕೆಯಾಗಿದೆ. ಆಮ್ ಆದ್ಮಿ ಪಕ್ಷಕ್ಕೆ ಎಲ್ಲಾ ವರ್ಗಗಳ ಮತದಾರರಿಂದ ಅತ್ಯುತ್ತಮ ಪ್ರತಿಕ್ರಿಯೆ ದೊರಕುತ್ತಿದೆ. ಭಷ್ಟ ಹಾಗೂ ಅಫರಾದಿ ಹಿನ್ನಲೆಯುಳ್ಳ ಅಭ್ಯರ್ಥಿಗಳಿಂದ ಬೇಸತ್ತಿದ್ದು ನಮ್ಮ ಪಕ್ಷಕ್ಕೆ ಉತ್ತಮ ಬೆಂಬಲ £Ãಡಲಿದ್ದಾರೆ ಎಂದು ಹೇಳಿದರು.
*ಪತ್ರಿಕಾಗೋಷ್ಠಿಯಲ್ಲಿ ಬೆಂಗಳೂರು ಘಟಕದ ಅಧ್ಯಕ್ಷರಾದ ಮೋಹನ್ ದಾಸರಿ, ಬೆಳಗಾವಿ ಚುನಾವಣಾ ವೀಕ್ಷಕರಾದ ಲಕ್ಷಿ÷್ಮಕಾಂತರಾವ್, ಬೆಂಗಳೂರು ಘಟಕ ಉಪಾಧ್ಯಕ್ಷ ನಾಗಣ್ಣ ಬಿ.ಟಿ, ಕಾನೂನು ವಿಭಾಗದ ನಂಜಪ್ಪ ಕಾಳೇಗೌಡ ಸೇರಿದಂತೆ ಪ್ರಮುಖ ನಾಯಕರುಗಳು ಉಪಸ್ಥಿತರಿದ್ದರು.


Leave a Reply