Belagavi

ಶ್ರದ್ಧೆ ಮತ್ತು ವಿಶ್ವಾಸದಲ್ಲಿ ಯಶಸ್ಸು ಸಾಧನೆ : ಶ್ರೀ ಶಿವಾನಂದ ಶ್ರೀಗಳು


ಮೂಡಲಗಿ: ‘ಶ್ರದ್ದೆ ಮತ್ತು ಜನರ ವಿಶ್ವಾಸವಿದ್ದರೆ ಎಲ್ಲ ವ್ಯವಹಾರಗಳು ಯಶಸ್ಸು ಸಾಧಿಸುತ್ತವೆ’ ಎಂದು ಸುಣಧೋಳಿಯ ಜಡಿಸಿದ್ಧೇಶ್ವರ ಮಠದ ಪೀಠಾಧಿಪತಿ ಶಿವಾನಂದ ಸ್ವಾಮೀಜಿಗಳು ಹೇಳಿದರು.
ಪಟ್ಟಣದ ಕಾಲೇಜು ರಸ್ತೆಯಲ್ಲಿ ವೀರೇಶ ಲಂಕೆಪ್ಪನ್ನವರ ಅವರ ಸಮರ್ಥ ಟಿವಿಎಸ್ ದ್ವಿಚಕ್ರ ವಾಹನಗಳ ಮಾರಾಟ ನೂತನ ಶೋರೂಮ ಮತ್ತು ೫ನೇ ವರ್ಷದ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ದೈವಭಕ್ತಿ ಇದ್ದರೆ ಸಾಗುವ ದಾರಿಯು ಯಶಸ್ಸಿನತ್ತ ಇರುತ್ತದೆ ಎಂದರು.
ಶಿವಬಸಪ್ಪ ಭೀಮಪ್ಪ ಲಂಕೆಪ್ಪನ್ನವರ ಮತ್ತು ವೀರೇಶ ಲಂಕೆಪ್ಪನ್ನವರ ಅವರು ಪೂಜ್ಯರನ್ನು ಹಾಗೂ ಅತಿಥಿಗಳನ್ನು ಸನ್ಮಾನಿಸಿ ಗೌರವಿಸಿದರು.
ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಜಿ. ಢವಳೇಶ್ವರ, ಗೋಕಾಕದ ಉದಯ ಪತ್ರಾವಳಿ, ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ, ಪುರಸಭೆ ಅಧ್ಯಕ್ಷ ಹಣಮಂತ ಗುಡ್ಲಮನಿ, ಸದಸ್ಯ ಸಂತೋಷ ಸೋನವಾಲಕರ, ಮೂಡಲಗಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ವಿಜಯಕುಮಾರ ಸೋನವಾಲಕರ, ಅಪ್ಪಾಸಾಹೇಬ ಹೊಸಕೋಟಿ, ಆರ್.ಟಿ.ಲಂಕೆಪ್ಪನ್ನವರ, ಪ್ರಕಾಶ ಕಾಳಪ್ಪಗೋಳ, ರಮೇಶ ಪ್ಯಾಟಿಗೌಡರ, ಹನಮಂತ ದಂಡಪ್ಪನ್ನವರ ಮತ್ತಿತರು ಇದ್ದರು.


Leave a Reply