Uncategorized

ಪ್ರಯತ್ನ ಸಂಘದಿಂದ ನಂದನ ಮಕ್ಕಳ ಧಾಮಕ್ಕೆ ದೇಣಿಗೆ


ಬೆಳಗಾವಿ : ಪ್ರಯತ್ನ ಸಂಘವು ಸದಾಶಿವನಗರದಲ್ಲಿರುವ ನಂದನ ಮಕ್ಕಳ ಧಾಮ ಕ್ಕೆ ಭೇಟಿ ಕೊಟ್ಟಿತು .ಮಕ್ಕಳಿಗೆ ಅವಶ್ಯಕತೆ ಇರುವ ಆಹಾರ ಧಾನ್ಯಗಳನ್ನು ,ಹೊಲಿಗೆಯ ಉಪಕರಣಗಳು ,ಶಾಲೆಯ ಸ್ಟೇಷನರಿಗಳು, ತಿಂಡಿ ತಿನಿಸುಗಳನ್ನು ದೇಣಿಗೆಯಾಗಿ ನೀಡಿತು .ಸಮಾಜ ಸೇವಕರಾದ ಸೈಯದ್ ಹುಸೇನ್ ಅವರು ಅತಿಥಿಗಳಾಗಿ ಬಂದಿದ್ದರು .

ಪ್ರಯತ್ನ ಸಂಘದ ಅಧ್ಯಕ್ಷರಾದ ಶಾಂತಾ ಆಚಾರ್ಯ ಹಾಗೂ ಸಂಘದ ಸದಸ್ಯರಾದ  ರವಿ ಆಚಾರ್ಯ ನವೀನ್ ಭಟ್, ಸುನೀತಾ ಭಟ್, ವರದಿ ಭಟ್ ,ಲತಾ ಕಟ್ಟಿ ,ಪದ್ಮಾ ವರ್ಣೇಕರ್, ಪ್ರಸಾದ್ ಕಾರ್ಜೋಳ್ ಹಾಗೂ ವಿಶ್ವ ದೇಸಾಯಿಯವರು ಉಪಸ್ಥಿತರಿದ್ದರು .


Leave a Reply