Koppal

ಕುಷ್ಟಗಿ ತಾಲೂಕಿನ ನೂತನ ಸಾಹಿತ್ಯ ಭವನಗಳ ಉದ್ಘಾಟನೆ


ಕುಷ್ಟಗಿ :ಮಂಗಳವಾರ ದಿನಾಂಕ ೩೧ ರಂದು  ಬೆಳಿಗ್ಗೆ ೯ ರಿಂದ ತಾವರಗೇರಿಯ ಕನ್ನಡ ಸಾಹಿತ್ಯ ಭವನ.ತದನಂತರ ಗುಮಗೇರಿ ಗ್ರಾಮದ ಕನ್ನಡ ಸಾಹಿತ್ಯ ಭವನ,ನಂತರ ಹನಮಸಾಗರದ ಕನ್ನಡ ಸಾಹಿತ್ಯ ಭವನ,ಉದ್ಘಾಟನಾ ಸಮಾರಂಭ ನೆಡೆಲಿದೆ.
ಕಾರಣ ಎಲ್ಲಾ ಆಜೀವ ಸದಸ್ಯರು ಸಕಾಲಕ್ಕೆ ಬಂದು ಕಾರ್ಯಕ್ರಮ ಯಶಸ್ವಿ ಗೋಳಿಸಲು ವಿನಂತಿ.
ಈ ಸಮಾರಂಭದಲ್ಲಿ ಮಾನ್ಯ ಕೇಂದ್ರ ಸಮಿತಿಯ ಅಧ್ಯಕ್ಷ ಡಾ.ಮನು ಬಳಿಗಾರ,ಮಾನ್ಯ ಅಮರೇಗೌಡ ಬಯ್ಯಾಪೂರ ಶಾಸಕರು, ರಾಜಶೇಖರ ಅಂಗಡಿ ಜಿಲ್ಲಾ ಅದ್ಯಕ್ಷರು, ಸೇರಿದಂತೆ ಆ ಭಾಗದ ಗ್ರಾಮ ಪಂಚಾಯತಿ ಅದ್ಯಕ್ಷ ಉಪಾಧ್ಯಕ್ಷ, ಸದಸ್ಯರು. ಮತ್ತು ಕ.ಸಾ.ಪ.ಜಿಲ್ಲಾ. ತಾಲ್ಲೂಕು. ಹೋಬಳಿ. ಪದಾಧಿಕಾರಿಗಳು. ಆಗಮಿಸುವರು.
ಈ ಹಿಂದೆ ಡಾ.ಶೇಖರಗೌಡ.ಮಾ.ಪಾಟೀಲ. ಅವರು ಕೊಪ್ಪಳ ಜಿಲ್ಲಾ ಕ.ಸಾ.ಪ.ಅದ್ಯಕ್ಷರಾಗಿದ್ದ ಸಂದರ್ಭದಲ್ಲಿ ಗಂಗಾವತಿ ಯಲ್ಲಿ ಜರುಗಿದ ಅತ್ಯಂತ ಯಶಸ್ವಿ ಕನ್ನಡ ಸಾಹಿತ್ಯ ಸಮ್ಮೇಳನದ ಸುಮಾರು ೫೦ ಲಕ್ಷರೂಪಾಯಿ ಉಳಿಕೆ ಹಣದಿಂದ ಕುಷ್ಟಗಿ ತಾಲೂಕಿನ ಈ ಮೂರು ಗ್ರಾಮದಲ್ಲಿ ‌ಕನ್ನಡ ಸಾಹಿತ್ಯ ಭವನ ನಿರ್ಮಾಣ ಮಾಡಲು ಅನುಕೂಲ ಮಾಡಿಕೊಟ್ಟರು
ಮಾನ್ಯ ಶಾಸಕರು ಕೂಡ ಭವನಗಳಿಗೆ ತಮ್ಮ ಅನುದಾನ ಬಿಡುಗಡೆ ಮಾಡಿದ್ದು.ಭವನಗಳ ನಿರ್ಮಾಣಕ್ಕೆ ಸ್ಥಳ ದಾನ ಮಾಡಿದ ಎಲ್ಲಾ ಗ್ರಾಮ ಪಂಚಾಯತಿ ಆಡಳಿತ ಮಂಡಳಿಯ ,ಎಲ್ಲರಿಗೂ ಅಭಿನಂದನೆಗಳು ಸಲ್ಲಿಸಲು ಹರ್ಷವೆನಿಸುತ್ತದೆ,ಪ್ರತಿಯೊಬ್ಬರ ಶ್ರಮ ನೆನೆಯಲೆ ಬೇಕು.
ಎಂದು
ರವಿಂದ್ರ ಬಾಕಳೆ. ಜಿಲ್ಲಾ ಗೌರವ ಕಾರ್ಯದರ್ಶಿ, ಕ.ಸಾ.ಪ.ಕೊಪ್ಪಳ ತಿಳಿಸಿದ್ದಾರೆ.

ವರದಿ-ಆರ್ ಶರಣಪ್ಪಗುಮಗೇರಾ

ಕೊಪ್ಪಳ


Leave a Reply