Ballary

ದ್ವಿತೀಯ ಪಿಯುಸಿ ಪರೀಕ್ಷೆ: 5 ವಿದ್ಯಾರ್ಥಿಗಳು ಗೈರು


ಬಳ್ಳಾರಿ,ಆ.31 : ಖಾಸಗಿಯಾಗಿ ನೋಂದಾಯಿಸಿಕೊಂಡ ವಿದ್ಯಾರ್ಥಿಗಳಿಗೆ
ಪರೀಕ್ಷಾ ಫಲಿತಾಂಶ ತಿರಸ್ಕಾರ ಮಾಡಿದ (ಅಂಕಗಳು ತೃಪ್ತಿ ಇರದ ಹಿನ್ನೆಲೆ)ಹೊಸ ವಿದ್ಯಾರ್ಥಿಗಳು ಮತ್ತು ಪುನಾರವರ್ತಿತ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ಈಗಾಗಲೇ ಆರಂಭವಾಗಿವೆ.
ಈ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಗಳು ಸೆ.3ರವರೆಗೆ ಜಿಲ್ಲೆಯ 6 ಕೇಂದ್ರಗಳಲ್ಲಿ ನಡೆಯಲಿವೆ.
ಮಂಗಳವಾರ ಉರ್ದು ಮತ್ತು ಸಂಸ್ಕøತ ವಿಷಯಗಳಿಗೆ ಪರೀಕ್ಷೆ ನಡೆಯಿತು. ಉರ್ದು ವಿಷಯಕ್ಕೆ ನೋಂದಣಿಯಾಗಿದ್ದ 3 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಸಂಸ್ಕೃತ ವಿಷಯಕ್ಕೆ ನೊಂದಣಿಯಾಗಿದ್ದ 115 ಜನ ವಿದ್ಯಾರ್ಥಿಗಳಲ್ಲಿ 110 ಜನ ಪರೀಕ್ಷೆಗೆ ಹಾಜರಾಗಿದ್ದು, 5 ಜನ ಗೈರು ಹಾಜರಾಗಿದ್ದಾರೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎನ್.ರಾಜು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply