karanataka

” ತಪ್ಪೇನಿದೆ “ಚಲನಚಿತ್ರಕ್ಕೆ ಮುಹೂರ್ತ


ಬೆಳಗಾವಿ : “ಲೀ” ಪ್ರೊಡಕ್ಷನ್ಸ್ ನವರು ನಿರ್ಮಿಸುತ್ತಿರುವ

” ತಪ್ಪೇನಿದೆ ” ಚಲನಚಿತ್ರದ ಚಿತ್ರೀಕರಣದ ಮುಹೂರ್ತ ಇಂದು ನೆರವೇರಿದೆ .
ಕ್ರೌಡ್ ಫಂಡಿಂಗ್ ಚಿತ್ರವಾಗಿರುವ ಇದರ ಚಿತ್ರೀಕರಣಕ್ಕೆ ನಿರ್ಮಾಪಕ ಮುರುಗೇಶ್ ಶಿವಪೂಜಿ ಮತ್ತು ಬಿಲ್ಡರ ಆರ್ ಎಮ್ ಚೌಗಲೆ ಚಾಲನೆ ನೀಡಿದರು .
ವಿಠ್ಠಲ  ಸುವರ್ಣ ಅವರು ನಿರ್ದೇಶಿಸುತ್ತಿರುವ ನಾಯಕಿ ಪ್ರಧಾನ ಚಿತ್ರದಲ್ಲಿ ನಾಯಕಿಯಾಗಿ ಮಂಗಳೂರಿನ ಸಲೋಮಿ ಡಿಸೋಜಾ ನಟಿಸುತ್ತಿದ್ದಾರೆ .ಪಿಎಸ್ಸೈ ಪಾತ್ರದಲ್ಲಿ ರಾಜ್ ಕುಮಾರ್ ನಾಯ್ಕ್ ನಟಿಸುತ್ತಿದ್ದು ರಾಜ್ ಎಂ, ಬಸವರಾಜ ವಿಐ, ಬಿ ಸಿ ಸಂದಿಪ ನಟಿಸುತ್ತಿದ್ದು ಇವರುಗಳು ಸಹ ನಿರ್ದೇಶಕರ ತಂಡದಲ್ಲಿದ್ದಾರೆ.
ಎ ಆರ್ ಕೃಷ್ಣ ಛಾಯಾಗ್ರಹಣದ ಹೊಣೆಯನ್ನು ಹೊತ್ತಿದ್ದು ಈಶ್ವರಿ ಮತ್ತು ಮಾರುತಿ ಮುಂತಾದವರು ನಟಿಸುತ್ತಿರುವ ಚಿತ್ರದ ಚಿತ್ರೀಕರಣ ಬೆಳಗಾವಿ ಪರಿಸರದ ಸುತ್ತಮುತ್ತಲಿನಲ್ಲಿ ನಡೆಯುತ್ತಿದೆ.


Leave a Reply