Belagavi

ಬೆಳಗಾವಿ ಮನಪಾ ಕಾಂಗ್ರೆಸ್ ಗೆಲುವು- ಧರನಾಯ್ಕ್


ಬೆಳಗಾವಿ : ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಪಕ್ಷ ಅತ್ಯಧಿಕ ಸ್ಥಾನಗಳನ್ನು ಗಳಿಸಲಿದೆ ಎಂದು ಕಾಂಗ್ರೆಸ್ ಎಸ್ ಸಿ ಘಟಕದ ಸಂಚಾಲಕ ಶ್ರವಣ್ ಕುಮಾರ್ ಧರ್ ನಾಯಕ್ ಹೇಳಿದ್ದಾರೆ .

ಪಾಲಿಕೆ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯದ ಪರವಾಗಿ ಅಸಾದುದ್ದೀನ್ ಓವೈಸಿ ಅವರ ಬೆಳಗಾವಿಯ ಭೇಟಿ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳಿದರು .
ಆಡಳಿತ ವಿರೋಧಿ ಅಲೆ ಇದ್ದು ಆದರ ಲಾಭ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಆಗಲಿದೆ,ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆಯಿಂದ ದಿನಬಳಕೆಯ ವಸ್ತುಗಳು ಮತ್ತು ಬಹುತೇಕ ಎಲ್ಲ ವಸ್ತುಗಳ ಬೆಲೆ ಏರಿಕೆ ಕಂಡಿವೆ ಜನಸಾಮಾನ್ಯರು ಬಿಜೆಪಿ ಆಡಳಿತಕ್ಕೆ ಬೇಸತ್ತಿದ್ದಾರೆ ಎಂದರು .


Leave a Reply