Belagavi

ಮಹಾನಗರ ಪಾಲಿಗೆ ಚುನಾವಣೆ: ಮತದಾರರ ಒಲೈಕೆಗೆ ಅಭ್ಯರ್ಥಿಗಳ ಅಂತಮ ಹoತದ ಕಸರತ್ತು


ಬೆಳಗಾವಿ: ಮಹಾನಗರಪಾಲಿಕೆ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಪಕ್ಷಗಳ ಚಿಹ್ನೆಯಡಿ ಚುನಾವಣೆ ನಡೆಯುತ್ತಿದ್ದು, ಸೆಪ್ಟೆಂಬರ್ ೩ರಂದು ಮತದಾನ ನಡೆಯಲಿದೆ. ಬಿಜೆಪಿ, ಕಾಂಗ್ರೆಸ್, ಆಮ್ ಆದ್ಮಿ, ಜೆಡಿಎಸ್, ಎಂಇಎಸ್, ಎಂಐಎo ಸೇರಿ ಹಲವು ಪಕ್ಷಗಳು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಪಾಲಿಕೆ ಗದ್ದುಗೆ ಹಿಡಿಯಲು ಬಿಜೆಪಿ, ಎಂಇಎಸ್ ಹಾಗೂ ಕಾಂಗ್ರೆಸ್ ನಡುವೆ ತ್ರಿಕೋನ ಪೈಪೋಟಿ ಏರ್ಪಟ್ಟಿದೆ.
ಒಟ್ಟು ೫೮ ಸದಸ್ಯರನ್ನೊಳಗೊಂಡ ಪಾಲಿಕೆ ಚುನಾವಣೆಗೆ ೩೮೫ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಿಜೆಪಿ ೫೫, ಕಾಂಗ್ರೆಸ್ ೪೫, ಜೆಡಿಎಸ್ ೧೧ ಆಪ್ ೨೭ ಹಾಗೂ ಎಂಇಎಸ್ ೪೦ಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಬಿಜೆಪಿ ಚುನಾವಣೆಯಲ್ಲಿ ಅತ್ಯಂತ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು, ನಗರದ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದು, ಪಾಲಿಕೆಯಲ್ಲಿ ಪ್ರಥಮ ಬಾರಿಗೆ ಬಿಜೆಪಿ ಬಾವುಟ ಹಾರಿಸಲು ಪಣತೊಟ್ಟಿದ್ದಾರೆ. ಹಗಲಿರುಳು ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತಿದ್ದು, ಗೆಲುವಿಗೆ ರಣತಂತ್ರ ಹೆಣೆಯುತ್ತಿದ್ದಾರೆ. ಇವರಿಗೆ ಪಕ್ಷದ ರಾಜ್ಯಾಧ್ಯಕ್ಷರು, ಸಚಿವರು, ಶಾಸಕರು, ಪಕ್ಷದ ಪದಾಧಿಕಾರಿಗಳು ಸಾಥ್ ನೀಡಿದ್ದು, ಕಳೆದ ಮೂರು ದಿನಗಳಿಂದ ನಗರದಲ್ಲಿ ಬೀಡುಬಿಟ್ಟು ಪಕ್ಷದ ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರ ನಡೆಸಿದ್ದಾರೆ.
ಬಿಜೆಪಿ ಎದುರು ಕಾಂಗ್ರೆಸ್ ಪ್ರಚಾರ ಸಪ್ಪೆ ಎಣಿಸಿದರೂ ಅಲ್ಪಸಂಖ್ಯಾತ ಮತದಾರರನ್ನು ನೆಚ್ಚಿಕೊಂಡಿರುವ ಪಕ್ಷ ಆ ಸಮುದಾಯದ ಮತಗಳ ಕ್ರೋಢೀಕರಣಕ್ಕೆ ರಣತಂತ್ರ ಹೆಣೆದಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಕಾಂಗ್ರೆಸ್ ಪಕ್ಷದ ನೇತೃತ್ವ ವಹಿಸಿದ್ದು, ತಮ್ಮ ಬತ್ತಳಕೆಯಲ್ಲಿರುವ ಚುನವಣೆ ತಂತ್ರಗಾರಿಕೆಗಳನ್ನು ಪಣಕ್ಕಿಟ್ಟಿದ್ದಾರೆ.
ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಎಂಇಎಸ್ ನಡುವೆ ಪೈಪೋಟಿ ಕಂಡುಬರುತ್ತಿದ್ದು, ಉತ್ತರ ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಪಕ್ಷೇತರರ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಬಿಜೆಪಿ, ಕಾಂಗ್ರೆಸ್ ಹಾಗೂ ಎಂಇಎಸ್‌ಗೆ ಬಂಡಾಯ ಅಭ್ಯರ್ಥಿಗಳು ತಲೆನೋವಾಗಿ ಪರಿಣಮಿಸಿದ್ದಾರೆ. ಈ ಕಾರಣಕ್ಕೆ ಬಿಜೆಪಿ ಹಾಗೂ ಕಾಂಗ್ರೆಸ್ ಬಂಡಾಯ ಸಾರಿದ ಹಲವು ಮುಖಂಡರನ್ನು ಪಕ್ಷದಿಂದ ಉಚ್ಚಾಟಿಸಿದ್ದಾರೆ.
ಕೊನೆಯ ಹಂತದ ಕಸರತ್ತು ಜೋರು: ಎರಡ್ಮೂರು ದಿನಗಳಿಂದ ತಾರಕಕ್ಕೇರಿದ್ದ ಪ್ರಚಾರಕ್ಕೆ ಬುಧವಾರ ತೆರೆಬಿದ್ದಿದೆ. ಹೊರಗಡೆಯಿಂದ ಬಂದಿದ್ದ ಮುಖಂಡರು ನಗರ ತೊರೆದಿದ್ದು, ಸ್ಥಳೀಯ ಮುಖಂಡರು ಅಂತಿಮ ಹಂತದ ಕಸರತ್ತು ನಡೆಸಿದ್ದಾರೆ. ಇಂದು ರಾತ್ರಿ ನಡೆಯುವ ಬೆಳವಣಿಗೆ ಮತದಾನದ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಇಂದು ರಾತ್ರಿ ಮತದಾರರಿಗೆ ಹಣ, ವಿವಿಧ ಉಡುಗೊರೆ ಹಂಚಲು ಹಲವು ಅಭ್ಯರ್ಥಿಗಳು ತಯಾರಿ ಮಾಡಿಕೊಂಡಿದ್ದಾರೆ. ಒಟ್ಟಿನಲ್ಲಿ ಮಹಾನಗರ ಪಾಲಿಕೆ ಚುನಾವಣೆ ಹಿಂದೆAದಿಗಿAತಲೂ ಈ ಬಾರಿ ಅತ್ಯಂತ ರಂಗೇರಿದೆ.


Leave a Reply