Belagavi

ಕೋವಿಡ್ ಲಸಿಕೆಗೆ ತಪ್ಪಿದ ಜನರ ಪರದಾಟ


ಬೆಳಗಾವಿ: ಜಿಲ್ಲೆಗೆ ಸಾಕಷ್ಟು ಪ್ರಮಾಣದ ಕೋವಿಡ್ ಲಸಿಕೆ ಬಂದಿದ್ದು, ಲಸಿಕೆ ಹಾಕಿಸಿಕೊಳ್ಳಲು ಆಸ್ಪತ್ರೆಗಳ ಮುಂದೆ ಕಂಡುಬರುತ್ತಿದ್ದ ಉದ್ದನೆಯ ಸಾಲು ಕರಗಿದ್ದು, ಎಲ್ಲೆಡೆ ಸುಲಭವಾಗಿ ಲಸಿಕೆ ಲಭ್ಯವಾಗುತ್ತಿದೆ.
ವಾರದ ಹಿಂದಷ್ಟೆ ಜಿಲ್ಲೆಯಲ್ಲಿ ಲಸಿಕೆ ಹಾಕಿಸಿಕೊಳ್ಳಲು ಜನರು ಹರಸಾಹಸ ಪಡುವಂತಾಗಿತ್ತು. ಬಹಳಷ್ಟು ಆಸ್ಪತ್ರೆಗಳಲ್ಲಿ ಲಸಿಕೆ ಲಭ್ಯವಾಗದೇ ಜನರು ಆಸ್ಪತ್ರೆಯಿಂದ ಆಸ್ಪತ್ರೆಗೆ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಯಾವುದಾದರೂ ಒಂದು ಕೇಂದ್ರದಲ್ಲಿ ಲಸಿಕೆ ಲಭ್ಯವಿದ್ದರೆ ಜನರು ಆಸ್ಪತ್ರೆಗೆ ಮುಗಿಬೀಳುತ್ತಿದ್ದರು. ದಿನವಿಡೀ ಸರತಿಯಲ್ಲಿ ನಿಂತು ಲಸಿಕೆ ಪಡೆಯುವಂತಾಗಿತ್ತು. ಅದರಲ್ಲೂ ೧೮ ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಿಕೆ ಆರಂಭಿಸಿದ ಬಳಿಕ ಲಸಿಕೆ ಅಭಾವ ಸೃಷ್ಟಿಯಾಗಿತ್ತು. ಆದರೆ , ಈಚೆಗೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಸಾಕಷ್ಟು ಪ್ರಮಾಣದ ಲಸಿಕೆ ಕಳಿಸಿಕೊಟ್ಟಿದ್ದರಿಂದ ಮೂರ್ನಾಲ್ಕು ದಿನಗಳಿಂದ ಲಸಿಕೆ ಅಭಿಯಾನ ಚುರುಕು ಪಡೆದುಕೊಂಡಿದೆ.
ಬಹುತೇಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಲಭ್ಯವಿದ್ದು, ಅರ್ಧ ತಾಸಿನೊಳಗೆ ಲಸಿಕೆ ಲಭ್ಯವಾಗುತ್ತಿದೆ. ಜನರು ಸಹ ಲಸಿಕೆ ಹಾಕಿಸಿಕೊಳ್ಳಲು ಆಸಕ್ತಿ ತೋರುತ್ತಿದ್ದು, ಕುಟುಂಬ ಸಮೇತ ಆರೋಗ್ಯ ಕೇಂದ್ರಗಳಿಗೆ ಆಗಮಿಸಿ ಲಸಿಕೆ ಪಡೆಯುತ್ತಿದ್ದಾರೆ. ಬಹುತೇಕ ಕಡೆ ಮಹಿಳೆಯರೇ ಹೆಚ್ಚಾಗಿ ಲಸಿಕೆ ಹಾಕಿಸಿಕೊಳ್ಳಲು ಆರೋಗ್ಯ ಕೇಂದ್ರಗಳತ್ತ ಧಾವಿಸಿದ್ದು ಕಂಡುಬoತು.


Leave a Reply