Koppal

ಕುಷ್ಟಗಿ ತಾಲೂಕಿನ ನೂತನ ಕನ್ನಡ ಸಾಹಿತ್ಯ ಭವನಗಳ ಲೋಕಾರ್ಪಣೆ


ಕುಷ್ಟಗಿ (ಕೊಪ್ಪಳ): ಕನ್ನಡ ಭವನಗಳು ಯುವ ಸಾಹಿತಿಗಳು ಬರಗಾರರ ಹುಮ್ಮಸ್ಸಿಗೆ ಪ್ರೇರಣೆ ಆಗಲಿ ಎಂದು ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ನಾಡೋಜ ಡಾ.ಮನು ಬಳಿಗಾರ ಆಶಯ ವ್ಯಕ್ತಪಡಿಸಿದರು.

ತಾಲೂಕಿನ ಹನುಮಸಾಗರ ದಲ್ಲಿ ವೆಬಿನಾರ್ ನಲ್ಲಿ ಕನ್ನಡ ಭವನ ಲೋಕಾರ್ಪಣೆಗೊಳಿಸಿ ಮಾತನಾಡಿದರು. ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮಸಾಗರ, ಗುಮಗೇರಾ, ತಾವರಗೇರಾ ದಲ್ಲಿ ಕನ್ನಡ ಸಾಹಿತ್ಯ ಭವನಗಳನ್ನು ಏಕಕಾಲದಲ್ಲಿ ಉದ್ಘಾಟಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ.

ಕನ್ನಡ ಭವನಗಳ ನಿರ್ವಹಣೆಯನ್ನು ಜಿಲ್ಲಾ ಕಸಾಪ ಅಧ್ಯಕ್ಷರಿಗೆ ವಹಿಸಲು ಸಭೆಯಲ್ಲಿ ನಿರ್ಣಯಿಸಲಾಗಿದೆ. ಈ ಭವನಗಳನ್ನು ಕನ್ನಡ ಸಾಹಿತ್ಯ ಕಾರ್ಯ ಚಟುವಟಿಗಳಿಗೆ ಬಳಸಿಕೊಳ್ಳಬೇಕೆಂದು ಕರೆ ನೀಡಿದರು.

ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಮಾತನಾಡಿ ಮಾತೃ ಭಾಷೆ ಮರೆಯ ಬಾರದು. ರಾಜ್ಯದ ರಾಜಧಾನಿಯಲ್ಲಿ ಕನ್ನಡಿಗರು ಶೇ.54 ರಷ್ಟಿರುವುದು ಆತಂಕದ ವಿಷಯ. ಕನ್ನಡಿಗರು ಭಾಷೆಯ ವಿಷಯದಲ್ಲಿ ಉಧಾರಿಯಾಗುವುದುಬೇಡ. ಮಾತೃ ಭಾಷೆಯ ಬಗ್ಗೆ ಗೌರವ ಯಾವತ್ತಿಗೂ ಕಡಿಮೆ ಆಗದೇ ಹೆತ್ತ ತಾಯಿಯನ್ನು ಗೌರವಿಸಿದಂತೆ ನಮ್ಮ ಭಾಷೆಯನ್ನು ಗೌರವ ಸದಾ ಇರಲಿ ಎಂದು ಕರೆ ನೀಡಿದರು.

ಕಸಾಪ ರಾಜ್ಯ ಪಧಾಧಿಕಾರಿ ಶೇಖರಗೌಡ ಮಾಲಿಪಾಟೀಲ, ಜಿಲ್ಲಾಧ್ಯಕ್ಷ ರಾಜಶೇಖರ ಅಂಗಡಿ, ಪ್ರಧಾನ ಕಾರ್ಯದರ್ಶಿ ರವೀಂದ್ರ ಬಾಕಳೆ,ಗ್ರಾ.ಪಂ.ಅದ್ಯಕ್ಷೆ ಶಂಕರಮ್ಮ‌ನಿರ್ವಾಣಿ, ಉಪಾದ್ಯಕ್ಷ ಮಂಜುನಾಥ ಹುಲ್ಲೂರು, ಕಸಾಪ ಅದ್ಯಕ್ಷ ಉಮೇಶ ಹಿರೇಮಠ, ಮಹಾಂತೇಶ ಅಗಸಿಮುಂದಿನ, ಬಸವರಾಜ ಹಳ್ಳೂರು, ವಿಶ್ವನಾಥ ಕನ್ನೂರು, ಅಬ್ದುಲ್ ಕರೀಂ ವಂಟೆಳಿ, ಮಹಾಂತೇಶ ಹಳ್ಳೂರು, ಲೆಂಕೆಪ್ಪ ವಾಲೀಕಾರ, ಶ್ರೀನಿವಾಸ ಜಾಗೀರದಾರ, ಪಿಡಿಓ ನಿಂಗಪ್ಪ ಮೂಲಿಮನಿ, ಮತ್ತೀತರಿದ್ದರು.

ಆರ್ ಶರಣಪ್ಪ ಗುಮಗೇರಾ.
ಕೊಪ್ಪಳ


Leave a Reply