Koppal

ಕಂದಾಯ ಅದಾಲತ್: ಅರ್ಜಿದಾರರಿಗೆ ಸ್ಥಳದಲ್ಲಿಯೇ ಪರಿಹಾರ


ಕುಷ್ಟಗಿ : ತಾಲೂಕಿನ ಹನಮನಾಳ ಹೋಬಳಿ ವ್ಯಾಪ್ತಿಯಲ್ಲಿ ಸರಕಾರದ ಮಹತ್ವ ಯೋಜನೆಯಾದ ಪಿಂಚಣಿ ಆಂದೋಲನ ಭಾಗವಾಗಿ ಹನಮನಾಳ ಹೋಬಳಿಯ ತುಮರಿಕೊಪ್ಪ ಗ್ರಾಮದಲ್ಲಿ ಫಲಾನುಭವಿಗಳ ಅರ್ಜಿಯನ್ನು ಸ್ಥಳದಲ್ಲಿಯೇ ತೆಗೆದುಕೊಂಡು ಅರ್ಹತೆಯ ಆಧಾರದ ಮೇಲೆ ಫಲಾನುಭವಿಗಳಿಗೆ ಆದೇಶ ಪ್ರತಿಯನ್ನು ಸ್ಥಳದಲ್ಲಿಯೇ ವಿತರಿಸಲಾಯಿತು.

ಗ್ರಾಮ ಪಂಚಾಯತಿ ಅದ್ಯಕ್ಷರು ಮುತ್ತಪ್ಪ ಜ್ಯೋತಿ ಬೇಳಗಿಸುವ ಮೂಲಕ ಉದ್ಘಾಟಿಸಿದರು. ಆಂಜನೇಯ ಎಂ.ಉಪ ತಹಶಿಲ್ದಾರ ಕಾರ್ಯಕ್ರಮದ ಬಗ್ಗೆ ಮಾತನಾಡಿದ ಅವರು ಈ ಯೋಜನೆಯನ್ನು ‌ ಪ್ರತಿಯೊಬ್ಬರು ಸದುಪಯೋಗವನ್ನು ಪಡೆದುಕೊಳ್ಳಲುವಂತೆ ಸಾರ್ವಜನಿಕರಿಗೆ ಮನವರಿಕೆ ಮಾಡಿದರು.

ಈ ಸಂದರ್ಭದಲ್ಲಿ ಗ್ರಾಮ ಲೆಕ್ಕಿಗರಾದ ಹಣಮಂತ ಸಂಶಿ ,ರವಿ ಮದನ್ ಪ್ರಸನ್ನ ಕುಲಕರ್ಣಿ , ಕೆ.ಎರ್.ದೇಸಾಯಿ ಕಂದಾಯ ನಿರೀಕ್ಷಕರಾದ ಅಬ್ದುಲ್ ರಜಾಕ್ , ಗ್ರಾಮ ಪಂಚಾಯತಿಯ ಸದಸ್ಯರು ಹಾಗೂ ಇತರರಿದ್ದರು.

ಆರ್ ಶರಣಪ್ಪಗುಮಗೇರಾ

ಕೊಪ್ಪಳ


Leave a Reply