State

ಬ್ಯಾಗ್ ಸಪ್ಲೈನಲ್ಲಿ ರೋಹಿಣಿ ಸಿಂಧೂರಿ ಭಾರಿ ಭ್ರಷ್ಟಾಚಾರ

ನಿರ್ಗಮಿತ ಜಿಲ್ಲಾಧಿಕಾರಿ ವಿರುದ್ಧ ಗಂಭೀರ ಜೆಡಿಎಸ್ ಮುಖಂಡ ಸಾ.ರಾ. ಮಹೇಶ್ ಆರೋಪ


ಮೈಸೂರು: ರೋಹಿಣಿ ಸಿಂಧೂರಿ ವಿರುದ್ಧ ಭ್ರಷ್ಟಾಚಾರದ ಬಾಂಬ್ ಸಿಡಿಸಿದ್ದಾರೆ. ಮೈಸೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿದ ಶಾಸಕ ಸಾ.ರಾ.ಮಹೇಶ್,
ನಗರಸಭೆ, ಪುರಸಭೆಗೆ ಬ್ಯಾಗ್ ಸಪ್ಲೈ ಮಾಡುವಲ್ಲಿ ರೋಹಿಣಿ ಸಿಂಧೂರಿ ಬರೋಬ್ಬರಿ 6 ಕೋಟಿ 18 ಲಕ್ಷ ರೂ. ಹಗರಣ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
ಬಟ್ಟೆ, ಬ್ಯಾಗ್ ಖರೀದಿಗೆ ಜಿಎಸ್ಟಿ ಸೇರಿ 9 ರೂ. ಇದ್ದು, ಆದರೆ ರೋಹಿಣಿ ಸಿಂಧೂರಿ ಖರೀದಿಸಿರುವ ಒಂದು ಬ್ಯಾಗ್ ಬೆಲೆ 52 ರೂ., ಬ್ಯಾಗ್ ಮೇಲೆ 42 ರೂ. ಪ್ರಿಂಟ್ ಹಾಕಿಸಿದ್ದಾರೆ.ಒಟ್ಟು 14,71,458 ಬಟ್ಟೆ ಬ್ಯಾಗ್ ಖರೀದಿಸಿದ್ದು, ವಾಸ್ತವವಾಗಿ ಖರೀದಿಗೆ 1 ಕೋಟಿ 47 ಲಕ್ಷ ರೂ. ವೆಚ್ಚವಾಗಿದೆ ಎಂದು ಅಂಕಿ ಅಂಶಗಳ ಮೂಲಕ ಸಿಂಧೂರಿ ವಿರುದ್ಧ ದೂರಿದರು.
ದಾಖಲೆಗಳ ಸಮೇತ ಆರೋಪ ಮಾಡ್ತಿದ್ದೀನಿ. ಈ ಹಣವನ್ನು ಅವರಿಂದಲೇ ವಸೂಲಿ ಮಾಡಬೇಕು. ಈ ನಿಟ್ಟಿನಲ್ಲಿ
ಕ್ರಮ ಜರುಗಿಸದಿದ್ದರೆ ಮುಖ್ಯ ಕಾರ್ಯದರ್ಶಿಗಳ ಕಚೇರಿ ಎದುರು ಧರಣಿ ಮಾಡುತ್ತೇನೆ ಎಂದು ಎಚ್ಚರಿಸಿದರು.
ನಗರಸಭೆ, ಫುರಸಭೆಗೆ ಇವರೇ ಬ್ಯಾಗ್ ಸರಬರಾಜು ಮಾಡಲು ಟೆಂಡರ್ ಅನುಮೋದನೆ ನೀಡಿದ್ದರು. ನಗರಸಭೆ, ಫುರಸಭೆ ಮೇಲೆ ಇವರಿಗೇಕೆ ಇಷ್ಟೊಂದು ಇಂಟ್ರಸ್ಟ್.!? ಎಂದು ಪ್ರಶ್ನಿಸಿದರು.
ನಾನು ಎಂಟು ಆರೋಪ ಮಾಡಿದ್ದೆ. ಅವರ ಇಲಾಖೆ ಅಧಿಕಾರಿಗಳೇ ವರದಿ ಕೊಟ್ಟಿದ್ದಾರೆ. ಅಕ್ರಮ ಎಸಗಿರುವ ಹಣವನ್ನು ಅವರಿಂದಲೇ ವಸೂಲಿ ಮಾಡಬೇಕು ಎಂದು ಮುಖ್ಯಮಂತ್ರಿ ಹಾಗೂ ಸರ್ಕಾರದ ಕಾರ್ಯದರ್ಶಿಗೆ ಮನವಿ ಮಾಡಿದ್ದೇನೆ ಎಂದು ತಿಳಿಸಿದರು.
ಬ್ಯಾಗ್ ಸರಬರಾಜು ಮಾಡಿರುವ ಗುತ್ತಿಗೆದಾರ ಅಳುತ್ತಿದ್ದಾನೆ. ಇಂತಹ ಭ್ರಷ್ಟ ಅಧಿಕಾರಿಯನ್ನು ಇಟ್ಕೊಂಡಿದ್ದಕ್ಕೆ ನಾವು ಕ್ಷಮೆ ಕೇಳ್ತೀವಿ. ಇವರು ನಿಜವಾಗಲೂ ಐಎಎಸ್ ಮಾಡಿದ್ದಾರಾ ಅಥವಾ ಬೇರೆ ಯಾರದ್ದಾದರೂ ಅಂಕಪಟ್ಟಿ ತಂದು ಐಎಎಸ್ ಪಾಸ್ ಮಾಡಿದರಾ ಎಂದು ಅನುಮಾನ ವ್ಯಕ್ತಪಡಿಸಿದ ಅವರು, ಐಷಾರಾಮಿ‌ ಜೀವನ ಮಾಡಲು ನಿಮಗೆ ಸಾರ್ವಜನಿಕರ ಹಣ ಬೇಕೇ ಎಂದು ಖಾರವಾಗಿ ಪ್ರಶ್ನಿಸಿದರು.
ಮಹಾನಗರ ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಬಿಲ್ ತಡೆ ಹಿಡಿದಿದ್ದಾರೆ. ಮೂರ್ನಾಲ್ಕು ದಿನದಲ್ಲಿ ಬಿಲ್ ಆಗದಿದ್ದರೆ ಮುಖ್ಯ ಕಾರ್ಯದರ್ಶಿ ಕಛೇರಿ ಮುಂದೆ ಧರಣಿ ಕೂರುತ್ತೇನೆ. ಇವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ ತನಿಖೆ ಮಾಡಬೇಕು.
ಇವರು ಎಲ್ಲೆಲ್ಲಿ ಕೆಲಸ ಮಾಡಿದ್ದಾರೆಯೋ ಅಲ್ಲಿನ ಭ್ರಷ್ಟಾಚಾರದ ಬಗ್ಗೆ ತನಿಖೆ ಮಾಡಬೇಕು‌ ಎಂದು ಆಗ್ರಹಿಸಿದರು.
ನನಗೆ ಮುಖ್ಯ ಕಾರ್ಯದರ್ಶಿಗಳ ರಕ್ಷಣೆ ಇದೆ ಎಂದು ಊರು ತುಂಬ ಹೇಳಿಕೊಂಡು ತಿರುಗಾಡುತ್ತಿದ್ದಾರೆ. ನಿಮ್ಮ ಮೇಲೆ ನಂಬಿಕೆ ಇದೆ, ಕ್ರಮ ಕೈಗೊಳ್ಳಿ. ಮೈಸೂರಿನ ಜನ ಒಳ್ಳೆಯ ಅಧಿಕಾರಿಗಳಿಗೆ ಕೈ ಮುಗಿತೀವಿ. ಭ್ರಷ್ಟ ಅಧಿಕಾರಿಗಳಿಗೆ ತಕ್ಕ ಪಾಠ ಆಗಬೇಕು ಮುಖ್ಯಕಾರ್ಯದರ್ಶಿಗಳಿಗೆ ಒತ್ತಾಯಿಸಿದರು.
ಆ ಅಧಿಕಾರಿಯ ಹನ್ನೆರಡು ವರ್ಷಗಳ ಸೇವೆ ನೋಡಿದ್ದೇನೆ.ಸರ್ಕಾರಿ ಕೆಲಸ ಮಾಡುವಲ್ಲಿ ದಕ್ಷತೆ ಇಲ್ಲ. ಅಪ್ರಮಾಣಿಕ ಅಧಿಕಾರಿ ನೇಮಕಕ್ಕೆ ಆಗಲೇ ವಿರೋಧ ಮಾಡಿದ್ದೆ ಎಂದು ಸಾ.ರಾ. ಮಹೇಶ್ ಕಿಡಿಕಾರಿದರು.


Leave a Reply