State

ಮೃಗಾಲಯ ಪ್ರಾಧಿಕಾರದ ಅಧ್ಯಕ್ಷರಿಗೆ ಐಷಾರಾಮಿ ಕಾರು: ಜನರ ಆಕ್ರೋಶ


ಮೈಸೂರು: ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಮಹದೇವಸ್ವಾಮಿ ಅವರ ಓಡಾಟಕ್ಕಾಗಿ ೨೧ ಲಕ್ಷ ೧೩ ಸಾವಿರ ರೂಪಾಯಿ ಹಣದಲ್ಲಿ ಇನ್ನೊವಾ ಕ್ರಿಸ್ಟ್ ಕಾರನ್ನು ಮೃಗಾಲಯ ಅಭಿವೃದ್ಧಿ ಪ್ರಾಧಿಕಾರ ಖರೀದಿಸಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಕೊರೊನಾ ಲಾಕ್ ಡೌನ್ ಕಾರಣದಿಂದ ಆರ್ಥಿಕ ಸಂಷ್ಟದಿAದ ಮೈಸೂರು ಮೃಗಾಲಯದ ಪ್ರಾಣಿಗಳನ್ನು ಸಾಕಲಾಗದೆ ಜನರಿಂದ ಪ್ರಾzಧಿಕಾರ ದೇಣಿಗೆ ಸಂಗ್ರಹಿಸಿತ್ತು. ಪ್ರಾಧಿಕಾರದ ಮನವಿಗೆ ಸ್ಪಂದಿಸಿದ ಸಿನಿಮಾ ನಟ, ನಟಿಯರು, ಜನಸಾಮಾನ್ಯರು ಕೋಟಿ ಕೋಟಿ ರೂ. ನೆರವಿನ ಹಸ್ತ ಚಾಚಿದರು. ಜನರು ನೀಡಿದ ನೆರವಿನ ಹಣದಲ್ಲಿ ಪ್ರಾಧಿಕಾರದ ಅಧ್ಯಕ್ಷರ ಓಡಾಟಕ್ಕೆ ಐಷಾರಾಮಿ ಕಾರು ಖರೀದಿಸಿರುವುದು ಚರ್ಚೆಗೆ ಕಾರಣವಾಗಿದೆ.
ಮೃಗಾಲಯ ಪ್ರಾಧಿಕಾರದ ೧೪೭ನೇ ಆಡಳಿತ ಮಂಡಳಿ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಗಿತ್ತು. ಈಗ ಹೊಸ ಕಾರು ಮೈಸೂರು ಮೃಗಾಲಯಕ್ಕೆ ಆಗಮಿಸಿದೆ. ಈಗಾಗಲೇ ಇದ್ದ ೭ ವರ್ಷದ ಹಳೆಯ ಕಾರನ್ನು ಮೃಗಾಲಯ ನಿರ್ದೇಶಕರೊಬ್ಬರಿಗೆ ಮಾರಾಟ ಮಾಡಲಾಗಿದೆ.ಕೊರೊನಾ ಸಂಕಷ್ಟ ಸಮಯದಲ್ಲಿ ಅಧ್ಯಕ್ಷರಿಗೆ ಹೊಸ ಐಷಾರಾಮಿ ಕಾರು ಬೇಕಿತ್ತಾ ಎಂಬ ಚರ್ಚೆ ಹುಟ್ಟುಹಾಕಿದೆ.
ಹೊಸ ಕಾರಿಗಾಗಿ ಬೇಡಿಕೆ ಇಟ್ಟಿರಲಿಲ್ಲ: ಮಹದೇವಸ್ವಾಮಿ
ನಾನು ಜನರ ದೇಣಿಗೆ ದುಡ್ಡಿನಿಂದ ಕಾರು ಖರೀದಿಸಿಲ್ಲ. ಯಾವುದೇ ಕಾರಿಗಾಗಿ ಬೇಡಿಕೆ ಇಟ್ಟಿರಲಿಲ್ಲ. ಹಿಂದಿನ ಅಧ್ಯಕ್ಷರು ಇಟ್ಟಿದ್ದ ಬೇಡಿಕೆಯಂತೆ ಈಗ ಕಾರು ಬಂದಿದೆ ಅಷ್ಟೆ. ಬಂದಿರುವ ಹೊಸ ಕಾರಿಗೆ ಜನರ ದೇಣಿಗೆ ಹಣ ಬಳಕೆ ಆಗಿಲ್ಲ ಎಂದು ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಮಹದೇವಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.
ಈಗಾಗಲೇ ಮೃಗಾಲಯ ನಿರ್ದೇಶಕರಿಗೆ ಇಟ್ಟಿದ್ದ ಹಳೆ ಕಾರು ಬಳಕೆ ಮಾಡಲಾಗುತ್ತಿತ್ತು. ಅದು ೭ ವರ್ಷಗಳ ಹಳೆಯ ಕಾರು.ಅದನ್ನೇ ನಾನು ಬಳಕೆ ಮಾಡುತ್ತಿದ್ದೆ. ಅದೂ ಕೂಡ ಮಾಧ್ಯಮದಲ್ಲಿ ಸುದ್ದಿ ಆಗಿತ್ತು. ನನಗೆ ಮೃಗಾಲಯ ಅಭಿವೃದ್ಧಿ ಮಾಡಬೇಕು ಎಂಬ ಆಸೆ ಇದೆ. ಐಷಾರಾಮಿ ಕಾರಿನಲ್ಲಿ ತಿರುಗಾಡಬೇಕು ಎಂಬ ಆಸೆ ಇಲ್ಲ. ಧಾರವಾಡ, ಬಳ್ಳಾರಿ, ಶಿವಮೊಗ್ಗ ಹೋಗುವಾಗ ಮಾತ್ರ ಸರ್ಕಾರಿ ಕಾರು ಬಳಸುತ್ತೇನೆ. ಉಳಿದ ಸಮಯದಲ್ಲಿ ನನ್ನ ಖಾಸಗಿ ಕಾರಿನಲ್ಲೇ ತಿರುಗಾಡುತ್ತಿರುವೆ ಎಂದು ಅಧ್ಯಕ್ಷ ಮಹದೇವಸ್ವಾಮಿ ಸ್ಪಷ್ಟಪಡಿಸಿದ್ದಾರೆ.


Leave a Reply