Belagavi

ಸುಕ್ಷೇತ್ರ ಯಲ್ಲಮ್ಮ ದೇವಸ್ಥಾನಕ್ಕೆ ಗೋವಾ ಸಿಎಂ ಡಾ. ಪ್ರಮೋದ ಸಾವಂತ ದೀಢಿರ್ ಬೇಟಿ


ಸವದತ್ತಿ : ಗೋವಾ ಸಿಎಂ ಡಾ. ಪ್ರಮೋದ ಸಾವಂತ ಅವರು ಗುರುವಾರ ಸುಕ್ಷೇತ್ರ ಯಲ್ಲಮ್ಮ ದೇವಸ್ಥಾನಕ್ಕೆ ದೀಢಿರ್ ಭೇಟಿ £Ãಡಿ ರೇಣುಕಾ ಯಲ್ಲಮ್ಮನ ದರ್ಶನ ಪಡೆದುಕೊಂಡರು.
ಧಾರವಾಡದಲ್ಲಿ ಇರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಸುಪುತ್ರಿಯ ವಿವಾಹಕ್ಕೆ ಹೋಗುವ ಸಂದರ್ಭದಲ್ಲಿ ಪ್ರಸಿದ್ದ ಶಕ್ತಿಪೀಠವಾದ ರೇಣುಕಾ ಯಲ್ಲಮ್ಮನ ದರ್ಶನದೊಂದಿಗೆ ಮುಂದೆ ಸಾಗಿದರು.
ನಂತರ ಮಲಪ್ರಭಾ ಆಣೆಕಟ್ಟು ವಿಕ್ಷೀಸಿದರು.
ಇವರು ಬಂದಿರುವ ವಿಷಯ ತಿಳಿದು ಕಳಸ ಬಂಡೂರಿ ಹೋರಾಟ ಸಮಿತಿಯವರು ಧಿಡೀರನೆ ರಸ್ತೆ ಬಂದ್ ಮಾಡಿ ಕೆಲಕಾಲ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ಬಿಸಿತಟ್ಟುತದೆ ಎಂದು ಅರಿತು ಗೋವಾ ಸಿ ಎಂ ಮುನವಳ್ಳಿಗೆ ಬಾರದೆ ಮಾರ್ಗ ಬದಲಿಸಿ ದ್ದಾರೆ ಎಂದು ಪ್ರತಿಭಟನಾ ಮುಂಖಡ ಉಮೇಶ ಬಾಳಿ ಮತ್ತು ರೈತರು ದಿಕ್ಕಾರ ಕೂಗಿದರು.
ಕೋವಿಡ್ ಹಿನ್ನೆಲೆ ರೇಣುಕಾ ಯಲ್ಲಮ್ಮನ ದರ್ಶನಕ್ಕೆ £ರ್ಬಂಧ ವಿಧಿಸಿದೆ ಆದರೆ ಸರ್ಕಾರ ನೆಡೆಸುವ ವಿ ಆಯ್ ಪಿಗಳಿಗೆ ಜಿಲ್ಲಾಧಿಕಾರಿಗಳು ಅನುಮತಿ £Ãಡಿರ ಬಹುದೆಂದು ಜನತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಉಮೇಶ ಬಾಳಿ, ವಿಜಯ ಕುಲಕರ್ಣಿ, ಶಿವಾನಂದ ಮೇಟಿ, ಸು£Ãಲ ಚುಳಕಿ, ಅಂಬಿರೀಷ ಯಲಿಗಾರ, ಡಿ. ಡಿ. ಚಿನ್ನೂರಿ, ಕಲ್ಲಪ್ಪ ಕಿತ್ತೂರ, ಸಿದ್ದಪ್ಪ ಕುರಿ, ಅಜ್ಜಪ್ಪ ಸವಲಬಾವಿ ಸೇರಿದಂತೆ ಹಲವರು ಭಾಗವಹಿಸಿದ್ದರು.


Leave a Reply